ಟಿಎಂಸಿ ಸಂಸದನಿಂದ ಉಪರಾಷ್ಟ್ರಪತಿ ಮಿಮಿಕ್ರಿ: ವಿವಾದ

| Published : Dec 20 2023, 01:15 AM IST

ಸಾರಾಂಶ

ಅಮಾನತುಗೊಂಡ ಸಂಸದರ ಪ್ರತಿಭಟನೆ ವೇಳೆ ಮಿಮಿಕ್ರಿ ಮಾಡಿದ ದೃಶ್ಯಾವಳಿಯನ್ನು ವಿಡಿಯೋ ಮಾಡಿದ ರಾಹುಲ್‌ ಗಾಂಧಿಯ ನಡೆಗೆ ಉಪರಾಷ್ಟ್ರಪತಿ ಜಗದೀಪ್ ಮತ್ತು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಾನತುಗೊಂಡ ಸಂಸದರ ಪ್ರತಿಭಟನೆ ವೇಳೆ ಮಿಮಿಕ್ರಿ ಮಾಡಿದ ದೃಶ್ಯಾವಳಿಯನ್ನು ವಿಡಿಯೋ ಮಾಡಿದ ರಾಹುಲ್‌ ಗಾಂಧಿಯ ನಡೆಗೆ ಉಪರಾಷ್ಟ್ರಪತಿ ಜಗದೀಪ್ ಮತ್ತು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಲೋಕಸಭೆಯಿಂದ ಅಮಾನತುಗೊಂಡಿರುವ ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರು ರಾಜ್ಯಸಭೆಯ ಸಭಾಪತಿಗಳೂ ಆದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರ ಶೈಲಿಯ ಬಗ್ಗೆ ಸಾರ್ವಜನಿಕವಾಗಿ ಮಿಮಿಕ್ರಿ ಮಾಡಿರುವುದು ಆಕ್ರೋಶಕ್ಕೆ ಗುರಿಯಾಗಿದೆ.ಅಮಾನತುಗೊಂಡ ಸಂಸದರು ಸಂಸತ್‌ ಭವನದ ಮಕರ ದ್ವಾರದಲ್ಲಿ ಧರಣಿ ನಡೆಸುತ್ತಿದ್ದ ವೇಳೆ ಕಲ್ಯಾಣ್‌ ಬ್ಯಾನರ್ಜಿ ಅವರು, ‘ನನ್ನ ಬೆನ್ನುಮೂಳೆ ನೇರವಾಗಿದೆ. ನಾನು ಎಲ್ಲರಿಗಿಂತ ಎತ್ತರವಾಗಿದ್ದೇನೆ...’ ಎಂದು ಜಗದೀಪ್‌ ಧನಕರ್‌ ಅವರು ರಾಜ್ಯಸಭೆಯಲ್ಲಿ ಕಲಾಪ ನಡೆಸುವಾಗ ಹೇಗೆ ನಡೆದುಕೊಳ್ಳುವರೋ ಅದೇ ಶೈಲಿಯಲ್ಲಿ ಮಿಮಿಕ್ರಿ ಮಾಡಿದ್ದಾರೆ. ಅದಕ್ಕೆ ಅಲ್ಲದ್ದ ಅಮಾನತುಗೊಮಡ ಸಂಸದರು ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಚಪ್ಪಾಳೆ ಸಹ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ರಾಹುಲ್‌ ಗಾಂಧಿಯವರು ಆ ದೃಶ್ಯಾವಳಿಯನ್ನು ವಿಡಿಯೋ ಕೂಡ ಮಾಡಿಕೊಂಡಿರುವುದು ಆಕ್ರೋಶಕ್ಕೆ ಗುರಿಯಾಗಿದೆ.

ಧನಕರ್, ಬಿಜೆಪಿ ಕಿಡಿ:ಇದಕ್ಕೆ ಪ್ರತಿಕ್ರಿಯಿಸಿದ ಜಗದೀಪ್‌ ಧನಕರ್‌, ‘ಸಭಾಪತಿಯೊಬ್ಬರ ಮಿಮಿಕ್ರಿ ಮಾಡಿರುವುದು ಹಾಸ್ಯಾಸ್ಪದ ಮತ್ತು ಒಪ್ಪಲಾಗದ ವಿಷಯ ಮತ್ತು ಇದನ್ನು ಮತ್ತೊಬ್ಬ ನಾಯಕ ವಿಡಿಯೋ ಚಿತ್ರೀಕರಣ ಮಾಡಿ ಪ್ರೋತ್ಸಾಹಿಸಿರುವುದು ಇನ್ನೂ ಹೇಸಿಗೆಯ ವಿಷಯವಾಗಿದೆ. ಇದು ನನ್ನ ಜಾಟ್‌ ಸಮುದಾಯ ಹಾಗೂ ಒಬ್ಬ ಕೃಷಿಕನ ಮಗನಿಗೆ ಮಾಡಿದ ಅವಮಾನ’ ಎಂದು ಕಿಡಿಕಾರಿದ್ದಾರೆ.ಈ ದೃಶ್ಯಾವಳಿಯನ್ನು ಬಿಜೆಪಿಯು ಟ್ವೀಟರ್‌ನಲ್ಲಿ ಟ್ಯಾಗ್‌ ಮಾಡಿ ‘ಸಂಸದರನ್ನು ಅಮಾನತು ಮಾಡಿದ ನಡೆಯನ್ನು ಅವರೇ ರಾಷ್ಟ್ರದ ಜನತೆಯ ಮುಂದೆ ಸಮರ್ಥಿಸಿಕೊಂಡಂತಾಗಿದೆ. ಸದನದ ಸಭಾಮರ್ಯಾದೆಯನ್ನು ಉಲ್ಲಂಘಿಸಿ ಅಜಾಗರೂಕವಾಗಿ ನಡೆದುಕೊಂಡಿದ್ದಾರೆ’ ಎಂದು ಟೀಕಿಸಿದೆ.