ಸಾರಾಂಶ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿ ತಮ್ಮ ಬಳಿ ಒಟ್ಟು 20 ಕೋಟಿ ರು. ಮೌಲ್ಯದ ಆಸ್ತಿ ಇದೆ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿದ್ದಾರೆ
ವಯನಾಡ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿ ತಮ್ಮ ಬಳಿ ಒಟ್ಟು 20 ಕೋಟಿ ರು. ಮೌಲ್ಯದ ಆಸ್ತಿ ಇದೆ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿದ್ದಾರೆ.
ಇದರಲ್ಲಿ 55,000 ರು. ನಗದು, ಬ್ಯಾಂಕಿನಲ್ಲಿ 26.25 ಲಕ್ಷ ರು. ಠೇವಣಿ, ಮ್ಯೂಚುವಲ್ ಫಂಡ್, ಬಾಂಡ್, ಷೇರುಗಳಲ್ಲಿ 8.5 ಕೋಟಿ ರು. ಹೂಡಿಕೆ. ಎಸ್‌ಬಿಐನ ಪಿಪಿಎಫ್ ಖಾತೆಯಲ್ಲಿ 61.5 ಲಕ್ಷ ರು., 4.2 ಕೋಟಿ ರು. ಮೌಲ್ಯದ ಚಿನ್ನಾಭರಣ, ದೆಹಲಿಯ ಮೆಹ್ರೌಲಿಯಲ್ಲಿ 11 ಕೋಟಿ ರು. ಮೌಲ್ಯದ ಕೃಷಿಭೂಮಿಯನ್ನು ಪ್ರಿಯಾಂಕಾ ಗಾಂಧಿ ಜೊತೆ ಹೊಂದಿದ್ದಾರೆ ಎಂದು ಮಾಹಿತಿ ಸಲ್ಲಿಸಿದ್ದಾರೆ.
ಜೊತೆಗೆ ಸೂರತ್ ನ್ಯಾಯಾಲಯ ಪ್ರಕರಣವೊಂದರಲ್ಲಿ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.