ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಅಮಾನತು ರದ್ದು: ಮತ್ತೆ ಟಿಕೆಟ್
KannadaprabhaNewsNetwork | Published : Oct 23 2023, 12:15 AM IST
ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಅಮಾನತು ರದ್ದು: ಮತ್ತೆ ಟಿಕೆಟ್
ಸಾರಾಂಶ
ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್‌ರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಸಸ್ಪೆಂಡ್ ಆಗಿದ್ದ ತೆಲಂಗಾಣ ಶಾಸಕ ಟಿ ರಾಜಾ ಸಿಂಗ್‌ರ ಅಮಾನತನ್ನು ಬಿಜೆಪಿ ಭಾನುವಾರ ರದ್ದುಗೊಳಿಸಿದೆ.
ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಅಮಾನತು ರದ್ದು: ಮತ್ತೆ ಟಿಕೆಟ್ ಪ್ರವಾದಿ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಹೈದರಾಬಾದ್: ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್‌ರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಸಸ್ಪೆಂಡ್ ಆಗಿದ್ದ ತೆಲಂಗಾಣ ಶಾಸಕ ಟಿ ರಾಜಾ ಸಿಂಗ್‌ರ ಅಮಾನತನ್ನು ಬಿಜೆಪಿ ಭಾನುವಾರ ರದ್ದುಗೊಳಿಸಿದೆ. ಅಲ್ಲದೇ ರಾಜಾ ಸಿಂಗ್‌ಗೆ ಅವರದೇ ಕ್ಷೇತ್ರವಾದ ಗೋಶಾಮಹಲ್‌ನಿಂದ ತೆಲಂಗಾಣ ವಿಧಾನಸಭೆ ಚುನಾವಣೆಗೆ ಪಕ್ಷವು ಮತ್ತೆ ಟಿಕೆಟ್ ನೀಡಿದೆ. ಈ ಬಗ್ಗೆ ಭಾನುವಾರ ಮಾತನಾಡಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಕಿಶನ್ ರೆಡ್ಡಿ ‘ಪಕ್ಷ ನೀಡಿದ್ದ ಶೋಕಾಸ್ ನೋಟಿಸ್‌ಗೆ ಪ್ರತಿಯಾಗಿ ರಾಜಾ ಸಿಂಗ್ ನೀಡಿರುವ ವಿವರಣೆಯನ್ನು ಪರಿಗಣಿಸಿ ಅವರ ಅಮಾನತನ್ನು ರದ್ದುಗೊಳಿಸಲಾಗಿದೆ’ ಎಂದಿದ್ದಾರೆ. ರಾಜಾ ಸಿಂಗ್ ತೆಲಂಗಾಣದ ಪ್ರಮುಖ ಬಿಜೆಪಿ ನಾಯಕರಾಗಿದ್ದು, ಪ್ರಖರ ಹಿಂದುತ್ವ ಸಿದ್ಧಾಂತವಾದಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರವಾದಿ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿವಾದಿತ ಹೇಳಿಕೆ ನೀಡಿ ಅಮಾನತಾದ ಬೆನ್ನಲ್ಲೇ ರಾಜಾ ಸಿಂಗ್ ಕೂಡ ಹೇಳಿಕೆ ನೀಡಿ ಅಮಾನತಿಗೆ ಒಳಗಾಗಿದ್ದರು.