ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ರಾಮನಾಥಪುರಂ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ರಾಮನಾಥಪುರಂ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಈ ಬಾರಿ ಅವರು ಡಿಎಂಕೆ, ಬಿಜೆಪಿ ಅಭ್ಯರ್ಥಿಗಳ ಜೊತೆಜೊತೆಗೇ ತಮ್ಮದೇ ಹೆಸರಿನ ಇತರೆ ನಾಲ್ವರ ಸವಾಲು ಕೂಡಾ ಎದುರಿಸಬೇಕಿದೆ. 

ಹೌದು. ರಾಮನಾಥಪುರಂನಲ್ಲಿ ಒ. ಪನ್ನೀರಸೆಲ್ವಂ ಜೊತೆ, ಓಚಪ್ಪನ್ ಪನ್ನೀರ್‌ಸೆಲ್ವಂ, ಒಯ್ಯ ತೇವರ್ ಪನ್ನೀರ್‌ಸೆಲ್ವಂ, ಓಚಾ ತೇವರ್ ಪನ್ನೀರ್‌ಸೆಲ್ವಂ ಮತ್ತು ಒಯ್ಯರಾಮ್ ಪನ್ನೀರ್‌ಸೆಲ್ವಂ ಹೆಸರಿನ ಅಭ್ಯರ್ಥಿಗಳು ಕೂಡಾ ಕಣಕ್ಕೆ ಇಳಿದಿದ್ದಾರೆ.

ಪನ್ನೀರಸೆಲ್ವಂ ಅವರನ್ನು ಸೋಲಿಸಲೆಂದೇ, ಈ ಹೆಸರಿನ ಬಗ್ಗೆ ಮತದಾರರಿಗೆ ಗೊಂದಲ ಉಂಟಾಗಲೆಂದೇ ಹೀಗೆ ಅವರದ್ದೇ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎನ್ನಲಾಗಿದೆ.