ಕೋಲ್ಕತಾ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ 11 ವರ್ಷದ ಪುತ್ರಿಗೆ ಅತ್ಯಾಚಾರದ ಬೆದರಿಕೆ

| Published : Aug 27 2024, 01:33 AM IST / Updated: Aug 27 2024, 04:30 AM IST

ಸಾರಾಂಶ

ವೈದ್ಯೆ ರೇಪ್ ಕೇಸ್‌ ವಿವಾದ ತೀವ್ರಗೊಂಡಿರುವ ನಡುವೆಯೇ ಟಿಎಂಸಿ ಸಂಸದ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯ 11 ವರ್ಷದ ಪುತ್ರಿಗೆ ಅತ್ಯಾಚಾರದ ಬೆದರಿಕೆ ಬಂದಿದ್ದು, ರೇಪ್ ಮಾಡಿದವರಿಗೆ 10 ಕೋಟಿ ರು. ನೀಡುವುದಾಗಿ ಘೋಷಣೆಯಾಗಿದೆ.

ಕೋಲ್ಕತಾ: ವೈದ್ಯೆ ರೇಪ್ ಕೇಸ್‌ ವಿವಾದ ತೀವ್ರಗೊಂಡಿರುವ ನಡುವೆಯೇ ಟಿಎಂಸಿ ಸಂಸದ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯ 11 ವರ್ಷದ ಪುತ್ರಿಗೆ ಅತ್ಯಾಚಾರದ ಬೆದರಿಕೆ ಬಂದಿದ್ದು, ರೇಪ್ ಮಾಡಿದವರಿಗೆ 10 ಕೋಟಿ ರು. ನೀಡುವುದಾಗಿ ಘೋಷಣೆಯಾಗಿದೆ.

ಜನರ ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಅಭಿಷೇಕ್ ಬ್ಯಾನರ್ಜಿ ಅಪ್ರಾಪ್ತ ಪುತ್ರಿಯನ್ನು ಅತ್ಯಾಚಾರ ಮಾಡಬೇಕು ಎಂಬುದಾಗಿ ಹೇಳುತ್ತಾನೆ. ಅಲ್ಲದೇ ರೇಪ್ ಮಾಡುವ ವ್ಯಕ್ತಿಗೆ 10 ಕೋಟಿ ರು. ನೀಡುವುದಾಗಿ ಘೋಷಿಸುತ್ತಾನೆ. 

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ಆಯೋಗ, ‘ಇಂತಹ ಕೀಳು ಮಟ್ಟದ ಹೇಳಿಕೆಗಳಿಂದ ಬಾಲಕಿಯ ಸುರಕ್ಷತೆಗೆ ಅಪಾಯ ಎದುರಾಗುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದು ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.