ಸಾರಾಂಶ
ಸಿರಿವಂತರಿಗೆ ಬಿಪಿಎಲ್ ಕಾರ್ಡ್ ಬೇಕಿಲ್ಲ. ಕಾರು ಹೊಂದಿದ್ದವರು, ಐಟಿ ಟ್ಯಾಕ್ಸ್ ಕಟ್ಟುವವರಿಗೆ ಕಾರ್ಡ್ ಬೇಕಿಲ್ಲ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ನನ್ನ ಸಹಮತ ಇದೆ ಇದು ಒಳ್ಳೆಯ ನಿರ್ಧಾರ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಕೋಲಾರ : ಸಿರಿವಂತರಿಗೆ ಬಿಪಿಎಲ್ ಕಾರ್ಡ್ ಬೇಕಿಲ್ಲ. ಕಾರು ಹೊಂದಿದ್ದವರು, ಐಟಿ ಟ್ಯಾಕ್ಸ್ ಕಟ್ಟುವವರಿಗೆ ಕಾರ್ಡ್ ಬೇಕಿಲ್ಲ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ನನ್ನ ಸಹಮತ ಇದೆ ಇದು ಒಳ್ಳೆಯ ನಿರ್ಧಾರ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದಲ್ಲೂ 6400 ಕಾರ್ಡ್‌ಗಳು ರದ್ದಾಗಿರೋದು ನಿಜ, ಕೇವಲ ಆರೋಗ್ಯ ಉದ್ದೇಶಕ್ಕೆ ಬಿ.ಪಿ.ಎಲ್ ಕಾರ್ಡ್ ಬೇಕಿಲ್ಲ, ಅದಕ್ಕಾಗಿಯೆ ಸಹಕಾರ ರಂಗದಲ್ಲಿ ವಿಮೆ ಅವಕಾಶಗಳು ಇದೆ. ರಾಜ್ಯದಲ್ಲಿ 11 ಲಕ್ಷ ಕಾರ್ಡ್ ವರ್ಗಾವಣೆ ಆದವರು ಬಡವರಲ್ಲ ಎಂದರು.
ಬಡವರಿಗೆ ಮಾತ್ರ ಬಿಪಿಎಲ್
ಅಕ್ಕಿ ಕೇಂದ್ರ ಸರ್ಕಾರ ಕೊಟ್ಟರೂ ಅದು ನಮ್ಮ ದುಡ್ಡೆ ಅಲ್ವೆ, ಅದನ್ನು ಸರಿಯಾಗಿ ನೀಡ್ತಿಲ್ಲ. ಅಕ್ಕಿ ಎಲ್ಲರಿಗೂ ಕೊಡ್ತಾರಾ ಹೇಳಿ, ಹಾಗಂತ ಒಂದು ಪತ್ರ ಕೊಡಲಿ, ಎಲ್ಲರಿಗೂ ಅಕ್ಕಿ ಕೊಡ್ತೀವಿ ಎಂದ ಶಾಸಕ ಕೊತ್ತೂರು, ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ, ಬಡವರು ಒಂದೇ ಒಂದು ಬಿ.ಪಿ.ಎಲ್ ಕಾರ್ಡ್ ರದ್ದಾಗಿದ್ದರೆ ಹೇಳಿ, ನಾನು ಮಾಡಿಸಿಕೊಡ್ತೀನಿ. ನಿಜವಾದ ಬಡವರಿಗೆ ಇಂದೂ ಬಿ.ಪಿ.ಎಲ್ ಕಾರ್ಡ್ ಸಿಕ್ಕಿಲ್ಲ. ನಿಜವಾದ ಬಡವರಿಗೆ ಅನ್ಯಾಯ ಅಗ್ತಿದೆ ಎಂದರು.
ಜಮೀರ್ ಹೇಳಿಕೆಯಿಂದ ಡ್ಯಾಮೇಜ್
ಚನ್ನಪಟ್ಟಣ ಚುನಾವಣೆ ಫಲಿತಾಂಶದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆಗಿದೆ, ನಾನು ಪ್ರಚಾರಕ್ಕೆ ಹೋಗಿದ್ದೇ, ಮೊದಲು ಎಲ್ಲಾ ಚನ್ನಾಗಿತ್ತು ಹೆಚ್.ಡಿಕೆ ವಿರುದ್ದ ಸಚಿವ ಜಮೀರ್ ಅಹಮದ್ ಆ ಪದ ಬಳಸಿದ್ದು ತಪ್ಪು, ಆ ಒಂದು ಪದದಿಂದ ಡ್ಯಾಮೇಜ್ ಆಗಿದೆ, ಓಟ್ ಬ್ಯಾಂಕ್ ಚೇಂಜಸ್ ಆಗಿದೆ, ಆ ಒಂದು ಪದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಕೊತ್ತೂರು ಮಂಜುನಾಥ್ ಅಭಿಪ್ರಾಯಪಟ್ಟರು.ಉಪಚುನಾವಣೆ ಫಲಿತಾಂಶ ನಂತರ ಸಿಎಂ ಸಿದ್ದರಾಮಯ್ಯ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದೆಲ್ಲಾ ಸತ್ಯಕ್ಕೆ ದೂರ, ನೂರಕ್ಕೆ ನೂರು ಸಿಎಂ ಸಿದ್ದರಾಮಯ್ಯ ಬದಲಾಗಲ್ಲ, ಈ ವಯಸ್ಸಿನಲ್ಲಿ ಸಿಎಂ ಸಿದ್ದರಾಮಯ್ಯ ಹುಡುಗನ ರೀತಿ ಕೆಲಸ ಮಾಡ್ತಿದ್ದಾರೆ ಬಡವರು, ದಲಿತರು, ರೈತರ ಪರವಾಗಿ ಸಿಎಂ ಸಿದ್ದರಾಮಯ್ಯ ಕೆಲಸ ಮಾಡ್ತಿದ್ದಾರೆ ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ಬದಲಾವಣೆ ಇಲ್ಲ ಎಂದರು.
ಸಹಕಾರ ಕ್ಷೇತ್ರವೇ ಇಷ್ಟ
ಉಪಚುನಾವಣೆ ಫಲಿತಾಂಶಕ್ಕೂ ಸಿಎಂ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ, ಕೋಲಾರಮ್ಮನ ಆಣೆಗೂ ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ನನಗೆ ಸಚಿವ ಸ್ಥಾನದ ಬಗ್ಗೆ ಆಸಕ್ತಿ ಇಲ್ಲ. ಸಹಕಾರ ಕ್ಷೇತ್ರದಲ್ಲಿ ಒಂದು ಸ್ಥಾನಕ್ಕೇರಲು ಬಯಸಿದ್ದೇನೆ, ಸಹಕಾರ ಮಂತ್ರಿಯಾಗೊದು ಬೇಡ, ಡಿಸಿಸಿ ಬ್ಯಾಂಕ್ ಅಥವಾ ಕೋಮುಲ್ ಒಕ್ಕೂಟದಲ್ಲಿ ಅಧಿಕಾರದ ಆಸೆ ವ್ಯಕ್ತಪಡಿಸಿದರು.