ಹಿಜಾಬ್‌ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗೋದು ಖಚಿತ: ಒವೈಸಿ

| Published : May 13 2024, 12:00 AM IST / Updated: May 13 2024, 04:32 AM IST

owaisi 2
ಹಿಜಾಬ್‌ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗೋದು ಖಚಿತ: ಒವೈಸಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಶ್ರೇಷ್ಠ ದೇಶವನ್ನು ಒಂದಲ್ಲಾ ಒಂದು ದಿನ ಹಿಜಾಬ್‌ ಧರಿಸಿದ ಮಹಿಳೆ ಪ್ರಧಾನಿಯಾಗಿ ಆಳಲಿದ್ದಾಳೆ ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌: ಪ್ರಸಕ್ತ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಧರ್ಮದ ಕುರಿತು ಸಾಕಷ್ಟು ಚರ್ಚೆ ನಡೆದಿರುವ ಹೊತ್ತಿನಲ್ಲೇ, ಈ ಶ್ರೇಷ್ಠ ದೇಶವನ್ನು ಒಂದಲ್ಲಾ ಒಂದು ದಿನ ಹಿಜಾಬ್‌ ಧರಿಸಿದ ಮಹಿಳೆ ಪ್ರಧಾನಿಯಾಗಿ ಆಳಲಿದ್ದಾಳೆ ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಒವೈಸಿಗೆ ಭಾರತ ಯಾವಾಗ ಮೊದಲ ಮುಸ್ಲಿಂ ಪ್ರಧಾನಿಯನ್ನು ಕಾಣಬಹುದು ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ಒವೈಸಿ, ‘ದೇವರ ದಯೆಯಿಂದ, ಭಾರತದಲ್ಲಿ ಮೊದಲ ಮುಸ್ಲಿಂ ಪ್ರಧಾನಮಂತ್ರಿಯಾಗಿ ಹಿಜಬ್‌ ಧರಿಸಿದ ಮಹಿಳೆಯೇ ಪೀಠವನ್ನೇರುತ್ತಾಳೆ. ಆ ಸಂದರ್ಭ ಬಂದಾಗ ನಾನು ಬದುಕಿರದೇ ಇರಬಹುದು. ಆದರೆ ಅಲ್ಲಾನ ದಯೆಯಿಂದ ಅಂತಹ ಕಾಲ ಭಾರತದಲ್ಲಿ ಬಂದೇ ಬರುತ್ತದೆ’ ಎಂದು ತಿಳಿಸಿದ್ದಾರೆ.

ಅಸಾದುದ್ದೀನ್‌ ಓವೈಸಿ ಹೈದರಾಬಾದ್‌ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿದ್ದು, ಈ ಬಾರಿ ಸತತ ಐದನೇ ಬಾರಿಗೆ ಕಣದಲ್ಲಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಮಾಧವಿ ಲತಾ ಸೆಣಸುತ್ತಿದ್ದು, ಹೈದರಾಬಾದ್‌ ಲೋಕಸಭಾ ಕ್ಷೇತ್ರಕ್ಕೆ ಮೇ 13ರಂದು ಚುನಾವಣೆ ನಡೆಯಲಿದೆ.