ಶಾಸಕರಿಂದ ಮತ್ತೊಂದು ಶಸ್ತ್ರ ಚಿಕಿತ್ಸೆ!

| Published : Oct 17 2023, 12:30 AM IST

ಸಾರಾಂಶ

ತಮ್ಮ ಕ್ಷೇತ್ರದ ಜನತೆಗೆ ಉಚಿತವಾಗಿ ಖುದ್ದು ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆಯುತ್ತಿರುವ ಕುಣಿಗಲ್‌ ಶಾಸಕ ಡಾ. ರಂಗನಾಥ್‌ ಈಗ ಮತ್ತೊಬ್ಬ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಪರೀತ ಕೈ ನೋವಿನಿಂದ ಬಳಲುತ್ತಿದ್ದ ಗಂಗಹನುಮಯ್ಯ ಎಂಬುವರಿಗೆ ಈ ಹಿಂದೆ ಶಸ್ತ್ರ ಚಿಕಿತ್ಸೆ ಮಾಡಿದ್ದರು.
ಕನ್ನಡಪ್ರಭ ವಾರ್ತೆ, ಕುಣಿಗಲ್‌ ತಮ್ಮ ಕ್ಷೇತ್ರದ ಜನತೆಗೆ ಉಚಿತವಾಗಿ ಖುದ್ದು ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆಯುತ್ತಿರುವ ಕುಣಿಗಲ್‌ ಶಾಸಕ ಡಾ. ರಂಗನಾಥ್‌ ಈಗ ಮತ್ತೊಬ್ಬ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಪರೀತ ಕೈ ನೋವಿನಿಂದ ಬಳಲುತ್ತಿದ್ದ ಗಂಗಹನುಮಯ್ಯ ಎಂಬುವರಿಗೆ ಈ ಹಿಂದೆ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಆದರೆ ಮತ್ತೆ ಅವರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಈಗಾಗಲೇ ಉಚಿತವಾಗಿ ತಾವೇ ಶಸ್ತ್ರ ಚಿಕಿತ್ಸೆ ನೆರವೇರಿಸುತ್ತಿದ್ದ ಶಾಸಕರ ವಿಷಯವನ್ನು ಅರಿತಿದ್ದ ಕುಣಿಗಲ್ ಪಟ್ಟಣದ ಕೋಟೆ ವಾರ್ಡ್ ನ ನಿವಾಸಿ ಗಂಗ ಹನುಮಯ್ಯ ಅಲವತ್ತುಕೊಂಡಿದ್ದಾರೆ. ಕೂಡಲೇ ಸ್ಕ್ಯಾನಿಂಗ್ ಮಾಡಿಸಿದ ಶಾಸಕರಿಗೆ ಮರು ಶಸ್ತ್ರ ಚಿಕಿತ್ಸೆ ಬೇಕಿದ್ದನ್ನು ಅರಿತು ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಈಗಾಗಲೇ ಎರಡು ಬಾರಿ ಖುದ್ದು ಕುಣಿಗಲ್‌ ಶಾಸಕರೆ ತಮ್ಮ ಕ್ಷೇತ್ರದ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದು ಈಗ ಮೂರನೇ ಬಾರಿಗೆ ಗಂಗ ಹನುಮಯ್ಯ ಎಂಬುವರಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.