ಸಾರಾಂಶ
ಅದಾನಿ ಸಮೂಹದ ಜೊತೆ ನಂಟಿರುವ ವಿದೇಶಿ ರಹಸ್ಯ ಕಂಪನಿಗಳಲ್ಲಿ ಸೆಬಿ ಮುಖ್ಯಸ್ಥರ ಹೂಡಿಕೆಯ ಬಗ್ಗೆ ಅಮೆರಿಕದ ಹಿಂಡನ್‌ಬರ್ಗ್ ಕಂಪನಿ ಆರೋಪ ಮಾಡಿದ ಪರಿಣಾಮ ಸೋಮವಾರ ಭಾರತದ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಗಣನೀಯವಾಗಿ ಏರಿಳಿತ ಕಂಡಿತು.
ಮುಂಬೈ : ಅದಾನಿ ಸಮೂಹದ ಜೊತೆ ನಂಟಿರುವ ವಿದೇಶಿ ರಹಸ್ಯ ಕಂಪನಿಗಳಲ್ಲಿಸೆಬಿ ಮುಖ್ಯಸ್ಥರ ಹೂಡಿಕೆಯ ಬಗ್ಗೆ ಅಮೆರಿಕದ ಹಿಂಡನ್‌ಬರ್ಗ್ ಕಂಪನಿ ಆರೋಪ ಮಾಡಿದ ಪರಿಣಾಮ ಸೋಮವಾರ ಭಾರತದ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಗಣನೀಯವಾಗಿ ಏರಿಳಿತ ಕಂಡಿತು. ಆದರೆ, ಭಾರಿ ಪ್ರಮಾಣದಲ್ಲಿ ಷೇರುಗಳು ಇಳಿಯಬಹುದು ಎಂಬ ಅಂದಾಜು ಹುಸಿ ಆಗಿದ್ದು, ದಿನದ ವ್ಯವಹಾರ ಅಂತ್ಯವಾದಾಗ ಸೂಚ್ಯಂಕಗಳು ಸ್ವಲ್ಪ ಮಾತ್ರ ಇಳಿದವು.
ಬಿಎಸ್‌ಇ ಸೂಚ್ಯಂಕ ಇಡೀ ದಿನ ಹೊಯ್ದಾಡಿ, ಬೆಳಿಗ್ಗೆ ಒಂದು ಹಂತದಲ್ಲಿ 479 ಅಂಕಗಳಷ್ಟು ಕುಸಿದಿತ್ತು. ಕೊನೆಗೆ ದಿನದಂತ್ಯಕ್ಕೆ 57 ಅಂಕ ಮಾತ್ರ ಕುಸಿದು, 79,226ಕ್ಕೆ ತಲುಪಿತು. ಎನ್‌ಎಸ್‌ಇ ಸೂಚ್ಯಂಕ ಕೂಡ ಕನಿಷ್ಠ 24,212 ಹಾಗೂ ಗರಿಷ್ಠ 24,417 ಅಂಕಗಳ ನಡುವೆ ಹೊಯ್ದಾಡಿ, ಕೊನೆಗೆ 20 ಅಂಕಗಳಷ್ಟು ಕುಸಿದು 24,347ರಲ್ಲಿ ಅಂತ್ಯವಾಯಿತು.
ಒಂದು ಹಂತದಲ್ಲಿ ಅದಾನಿ ಷೇರುಗಳ ಬೆಲೆ ಶೇ.17ರಷ್ಟು ಕುಸಿದಿತ್ತು. ಕೊನೆಗೆ ಚೇತರಿಸಿಕೊಂಡು ಶೇ.1.5ರಷ್ಟು ಮಾತ್ರ ಇಳಿಕೆ ಕಂಡಿತು.