ಶೋಭಾ ಕರಂದ್ಲಾಜೆಗೆ ಗೆಲುವು: ಮುನಿರಾಜು

| Published : Apr 27 2024, 02:02 AM IST / Updated: Apr 27 2024, 04:22 AM IST

ಸಾರಾಂಶ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಶೆಟ್ಟಿಹಳ್ಳಿಯಲ್ಲಿ ಶಾಸಕ ಎಸ್.ಮುನಿರಾಜು ಅವರು ಶೆಟ್ಟಿಹಳ್ಳಿ ಸರ್ಕಾರಿ ಶಾಲೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಪೀಣ್ಯ ದಾಸರಹಳ್ಳಿ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಶೆಟ್ಟಿಹಳ್ಳಿಯಲ್ಲಿ ಶಾಸಕ ಎಸ್.ಮುನಿರಾಜು ಅವರು ಶೆಟ್ಟಿಹಳ್ಳಿ ಸರ್ಕಾರಿ ಶಾಲೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಬಳಿಕ ಮಾತನಾಡಿದ ಅವರು, ಬಲಿಷ್ಠ ಭಾರತಕ್ಕಾಗಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ಮತ ನೀಡುವಂತೆ ಬಿಜೆಪಿ ಕಾರ್ಯಕರ್ತರು ನೀಡುವಂತೆ ಕೇಳಿದ್ದಾರೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಇದೆ. ಹೆಚ್ಚು ಮತಗಳ ಅಂತರದಿಂದ ಶೋಭಾ ಕರಂದ್ಲಾಜೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಾಸರಹಳ್ಳಿ ಕ್ಷೇತ್ರದ ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿ, ಬಾಗಲಗುಂಟೆ, ಮಲಸಂದ್ರ, ದಾಸರಹಳ್ಳಿ, ಚೊಕ್ಕಸಂದ್ರ, ರಾಜಗೋಪಾಲನಗರ, ಹೆಗ್ಗನಹಳ್ಳಿ ವಾರ್ಡ್‌ಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಇನ್ನು ಪೀಣ್ಯ ಕೈಗಾರಿಕಾ ಪ್ರದೇಶದ ನೆಲಗದರನಹಳ್ಳಿ ಸರ್ಕಾರಿ ಶಾಲೆಯ ಮತಗಟ್ಟೆಗಳಲ್ಲಿ ಪ್ರಾರಂಭದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಚುನಾವಣಾ ಅಧಿಕಾರಿಗಳು ಸರಿಪಡಿಸಿದರು.

ಶಿವಪುರ ಕಾಲೋನಿಯಲ್ಲಿ ಮತದಾರರು ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ ಮತದಾನವನ್ನು ಬಹಿಷ್ಕರಿಸಿದರು. ಮೂರು ಗಂಟೆಯ ನಂತರ ಸ್ಥಳೀಯ ಮುಖಂಡರು ಅವರ ಮನವೊಲಿಸಿದರು. ಬಳಿಕ ಅರ್ಧಕ್ಕೂ ಹೆಚ್ಚು ಜನರು ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

ಅಂಗವಿಕಲರು, ವೃದ್ಧರು ಮುಂತಾದವರು ವ್ಹೀಲ್‌ಚೇರ್ ಮುಖಾಂತರ ಕುಟುಂಬದವರ ಸಹಕಾರದೊಂದಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ಖುಷಿಪಟ್ಟರು.