ಸಿದ್ದರಾಮಯ್ಯ ರಣಹೇಡಿ ಸಿಎಂ - ಪಾದಯಾತ್ರೆಯ ಜೊತೆಗೆ ಹೋರಾಟ ಮುಗಿದಿಲ್ಲ : ವಿಜಯೇಂದ್ರ

| Published : Aug 11 2024, 07:58 AM IST

BY vijayendraa

ಸಾರಾಂಶ

ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಅಧಿವೇಶನದಲ್ಲಿ ಉತ್ತರ ನೀಡದೆ ಓಡಿ ಹೋದ ರಣಹೇಡಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾಪ್ರಹಾರ ನಡೆಸಿದ್ದಾರೆ.

ಮೈಸೂರು :  ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಅಧಿವೇಶನದಲ್ಲಿ ಉತ್ತರ ನೀಡದೆ ಓಡಿ ಹೋದ ರಣಹೇಡಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಾಪ್ರಹಾರ ನಡೆಸಿದ್ದಾರೆ.

ಅಕ್ರಮವನ್ನು ಪ್ರಶ್ನೆ ಮಾಡದೆ ಪ್ರತಿಪಕ್ಷಗಳು ಚಮಚಾಗಿರಿ ಮಾಡಿಕೊಂಡು ಇರಬೇಕಾ? ಪಾದಯಾತ್ರೆ ಮುಗಿದರೂ ಹೋರಾಟ ನಿಲ್ಲಿಸುವುದಿಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯುವವರೆಗೆ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.

ಡಿಕೆಶಿಗೆ ನಾನು ನಾಗರಹಾವು: ಎಚ್‌ಡಿಕೆ

ಮೈಸೂರು: ‘ಬಡ ಹೆಣ್ಣುಮಕ್ಕಳ ಆಸ್ತಿಯನ್ನು ಲೂಟಿ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಾಲಿಗೆ ನಾನು ನಾಗರಹಾವೇ’ ಎಂದು ಕೇಂದ್ರ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ಹಾಗೂ ನನ್ನ ನಡುವೆ ಬಿರುಕು ಮೂಡಿಸಲು ಡಿ.ಕೆ.ಶಿವಕುಮಾರ್‌ ಶ್ರಮ ಪಟ್ಟು ಕೆಲಸ ಮಾಡುತ್ತಿದ್ದಾರೆ. ನನ್ನನ್ನು ಯಡಿಯೂರಪ್ಪ ನಾಗರಹಾವು ಎಂದು ಸದನದಲ್ಲಿ ಕರೆದಿದ್ದನ್ನು ಉಲ್ಲೇಖಿಸಿದ್ದಾರೆ. ಅದು ವೈಯಕ್ತಿಕವಾಗಿ ಹೇಳಿದ ಮಾತಲ್ಲ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.