ರಾಜಕೀಯ ವೈರಿ ಜಯಲಲಿತಾ ಬಗ್ಗೆ ಸಿಎಂ ಸ್ಟಾಲಿನ್‌ ಅಪರೂಪದ ಶ್ಲಾಘನೆ

| Published : Nov 22 2023, 01:00 AM IST

ರಾಜಕೀಯ ವೈರಿ ಜಯಲಲಿತಾ ಬಗ್ಗೆ ಸಿಎಂ ಸ್ಟಾಲಿನ್‌ ಅಪರೂಪದ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡು ಸಂಗೀತಾ ಮತ್ತು ಕುಶಲಕಲೆ ವಿವಿಗೆ ಮುಖ್ಯಮಂತ್ರಿಗಳರನ್ನು ಕುಲಪತಿಯಾಗಿ ಜಯಾ ಈ ಹಿಂದೆ ನೇಮಕ ಮಾಡಿದ್ದರು. ಅದಕ್ಕಾಗಿ ಸ್ಟಾಲಿನ್‌ ಅವರು ಜಯಾ ಅವರನ್ನು ಅವರನ್ನು ಹೊಗಳಿದ್ದಾರೆ.

ಸಂಗೀತ ವಿವಿಗೆ ಸಿಎಂರನ್ನು ಚಾನ್ಸಲರ್‌ ಮಾಡಿದ್ದಕ್ಕೆ ಜಯಲಲಿತಾರಿಗೆ ಶ್ಲಾಘನೆ

ಚೆನ್ನೈ: ತಮ್ಮ ರಾಜಕೀಯ ವೈರಿಯಾದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಅಪರೂಪಕ್ಕೆಂಬಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಶ್ಲಾಘಿಸಿದ್ದಾರೆ.

ತಮಿಳುನಾಡು ಸಂಗೀತಾ ಮತ್ತು ಕುಶಲಕಲೆ ವಿವಿಗೆ ಮುಖ್ಯಮಂತ್ರಿಗಳರನ್ನು ಕುಲಪತಿಯಾಗಿ ಜಯಾ ಈ ಹಿಂದೆ ನೇಮಕ ಮಾಡಿದ್ದರು. ಅದಕ್ಕಾಗಿ ಸ್ಟಾಲಿನ್‌ ಅವರು ಜಯಾ ಅವರನ್ನು ಅವರನ್ನು ಹೊಗಳಿದ್ದಾರೆ.

ತಮಿಳುನಾಡು ಸಂಗೀತ ಮತ್ತು ಕರಕುಶಲ ವಿವಿಯ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಈ ವಿವಿ 2013ರಲ್ಲಿ ಸ್ಥಾಪನೆಯಾಗಿದ್ದು, ರಾಜ್ಯ ಸರ್ಕಾರದಿಂದ ನಿರ್ವಹಿಸಲ್ಪಡುವುದಲ್ಲದೇ ಮುಖ್ಯಮಂತ್ರಿ ಇದಕ್ಕೆ ಕುಲಪತಿಗಳಾಗಿದ್ದಾರೆ. ಮುಖ್ಯಮಂತ್ರಿ ಅವರನ್ನು ಕುಲಪತಿ ಮಾಡುವ ಜಯಲಲಿತಾ ಅವರ ನಿರ್ಧಾರಕ್ಕೆ ಅವರನ್ನು ಶ್ಲಾಘಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ನಾನು ಈ ಕಾರ್ಯಕ್ರಮದಲ್ಲಿ ರಾಜಕೀಯವನ್ನು ಮಾತನಾಡುವುದಿಲ್ಲ. ಆದರೆ ನಿಜವನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಮುಖ್ಯಮಂತ್ರಿಯೊಬ್ಬರು ಕುಲಪತಿಯಾಗಿರುವ ವಿವಿ ಶೀಘ್ರ ಉನ್ನತಿ ಸಾಧಿಸುತ್ತದೆ ಎಂದು ವಿವಿಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ರಾಜ್ಯಪಾಲ ರವಿ ಅವರಿಗೆ ಟಾಂಗ್‌ ನೀಡಿದರು.