ಸುಮಲತಾ ಅವರೇ.., ಚುನಾವಣೆಯಲ್ಲಿ ತಟಸ್ಥವಾಗಿರಿ, ಇಲ್ಲವೇ ನಮ್ಮ ಬೆಂಬಲಕ್ಕೆ ನಿಲ್ಲಿ..!

| Published : Mar 30 2024, 12:46 AM IST / Updated: Mar 30 2024, 09:03 AM IST

ಸುಮಲತಾ ಅವರೇ.., ಚುನಾವಣೆಯಲ್ಲಿ ತಟಸ್ಥವಾಗಿರಿ, ಇಲ್ಲವೇ ನಮ್ಮ ಬೆಂಬಲಕ್ಕೆ ನಿಲ್ಲಿ..!
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸದೆ ತಟಸ್ಥವಾಗಿ ಉಳಿಯಿರಿ. ಇಲ್ಲವೇ, ನಮಗೆ ಬೆಂಬಲ ಕೊಡಿ. ಈಗ ಸ್ವಾಭಿಮಾನ ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸದೆ ತಟಸ್ಥವಾಗಿ ಉಳಿಯಿರಿ. ಇಲ್ಲವೇ, ನಮಗೆ ಬೆಂಬಲ ಕೊಡಿ. ಈಗ ಸ್ವಾಭಿಮಾನ ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿವಿಮಾತು ಹೇಳಿದರು.

ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಮಾತನಾಡಿ, ನಿಮ್ಮ ಚುನಾವಣೆಯಲ್ಲಿ ಜಿಲ್ಲೆಯ ಸ್ವಾಭಿಮಾನದ ಬಗ್ಗೆ ಮಾತನಾಡಿದ್ದೀರಿ. ಈ ಚುನಾವಣೆಯಲ್ಲಿ ಜಿಲ್ಲೆಯ ಸ್ವಾಭಿಮಾನ ಉಳಿಸುವ ಕೆಲಸ ಮಾಡಬೇಕಿದೆ. ಮಳವಳ್ಳಿಯ ಹುಚ್ಚೆಗೌಡರ ಸೊಸೆ ಮಳವಳ್ಳಿಯ ಸ್ವಾಭಿಮಾನ ಕಳೆಯಬೇಡಿ ಎಂದರು.

ನಿಮ್ಮನ್ನು ಅವಮಾನಿಸಿದವರಿಗೆ ಮಳವಳ್ಳಿಯಲ್ಲಿ ಅತಿ ಹೆಚ್ಚು ಮತ ಕೊಟ್ಟು ಉತ್ತರ ಕೊಟ್ಟಿದ್ದೆ. ಚುನಾವಣೆಗೆ ಯಾರ ಪರವಾಗಿ ಬರುತ್ತೀರೋ, ಬರುವುದಿಲ್ಲವೋ ನನಗೆ ಗೊತ್ತಿಲ್ಲ. ಆಗ ಸ್ವಾಭಿಮಾನದ ಬಗ್ಗೆ ಮಾತನಾಡಿರುವ ನೀವು ಈಗ ಸ್ವಾಭಿಮಾನ ಉಳಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು.

ನಾಳೆ ನಿಮ್ಮ ಬೆಂಬಲಿಗರ ಸಭೆ ಕರೆದಿದ್ದೀರಿ. ಸ್ವಾಭಿಮಾನಕ್ಕೆ ಧಕ್ಕೆಯಾಗುವ ತೀರ್ಮಾನವನ್ನು ಕೈಗೊಳ್ಳಬಾರದು. ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ನಡೆಸಿರುವ ನಿಮಗೆ ಅದು ಶೋಭೆ ತರುವುದಿಲ್ಲ. ನೀವು ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ನಮ್ಮ ಪಕ್ಷದ ಮುಖಂಡರಿಗೆ ಹೇಳಿದ್ದೆ. ಸಿಎಂ ಅವರಿಗೂ ಹೇಳಿದ್ದೆ. ನಾನು ಜೆಡಿಎಸ್‌ಗೆ ಚುನಾವಣೆ ಮಾಡಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದೆ. ಹಿನ್ನೆಲೆ ಗಾಯಕನಾಗಿ ನಾನು ನಿಮ್ಮ ಪರವಾಗಿ ಮತ ಬೇಡಿದ್ದೆ. ಅದಕ್ಕೆ ಮೋಸ ಮಾಡುವ ನಿರ್ಧಾರ ಕೈಗೊಳ್ಳಬೇಡಿ ಎಂದರು.