ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ್‌ಗೆ ಬೆಂಬಲ ನೀಡಿ : ಬಸವರಾಜ ಗುರಿಕಾರ

| Published : May 25 2024, 12:53 AM IST / Updated: May 25 2024, 04:17 AM IST

ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ್‌ಗೆ ಬೆಂಬಲ ನೀಡಿ : ಬಸವರಾಜ ಗುರಿಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲ್ಪನಿಕ ವೇತನ, ವೇತನ ತಾರತಮ್ಯ, ಅನುದಾನಿತ ಶಾಲೆಯ ಸಮಸ್ಯೆಗಳು. ವೇತನ ನಿರ್ವಹಣೆಯಲ್ಲಿ ಅವೈಜ್ಞಾನಿಕತೆ ಇವೆಲ್ಲವೂ ಬಿಜೆಪಿ ಆಡಳಿತದಲ್ಲಿ ಆಗಿರುವುದಾಗಿದೆ ಕಾಂಗ್ರೆಸ್ ಆಡಳಿತದಲ್ಲಿ ಈ ಸಮಸ್ಯೆಗಳಿಗೆಲ್ಲಾ ಸರ್ಜರಿ ಮಾಡಲಾಗುವುದು

  ಕೋಲಾರ : ವಿಧಾನ ಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬಿ.ಟಿ. ಶ್ರೀನಿವಾಸ್‌ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಲಾಗಿದೆ, ಚುನಾವಣೆಯಲ್ಲಿ ಶ್ರೀನಿವಾಸ್‌ ಬಹುಮತದಿಂದ ಗೆಲ್ಲುವ ವಿಶ್ವಾಸ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ವ್ಯಕ್ತಪಡಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಪದವೀಧರರು ಮತ್ತು ಶಿಕ್ಷಕರು ಉತ್ತಮ ಸಾಧನೆ ಮಾಡಿರುವವರನ್ನು ಗುರುತಿಸಿ ಕಳೆದ ೬ ತಿಂಗಳ ಮೊದಲೇ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್‌ ನುಡಿದಂತೆ ನಡೆವ ಪಕ್ಷವಾಗಿದೆ ಎಂದರು.

11 ಸಾವಿರ ಶಿಕ್ಷಕರ ನೇಮಕ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಸರ್ಕಾರಿ ಶಾಲೆಗಳಿಗೆ 11,494 ಶಿಕ್ಷಕರ ನೇಮಕಾತಿ,35  ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ.2 162 ಸರಕಾರಿ ಶಾಲೆಗಳ ೭೩೪೨ ಕೊಠಡಿಗಳ ದುರಸ್ತಿಗೆ 70 ಕೋಟಿ ಅನುದಾನ ನೀಡಲಾಗಿದೆ. 58  ಲಕ್ಷ ವಿದ್ಯಾರ್ಥಿಗಳಿಗೆ280 ಕೋಟಿ ವೆಚ್ಚದಲ್ಲಿ ಪೌಷ್ಟಿಕ ಆಹಾರ ವಿತರಣೆ ಮಾಡಲಾಗಿದೆ. ಸರ್ಕಾರಿ ಶಾಲೆಯ 45 ಲಕ್ಷ ಮಕ್ಕಳಿಗೆ 143 ಕೋಟಿ ವೆಚ್ಚದಲ್ಲಿ ಎರಡು ಜೊತೆ ಸಮವಸ್ತ್ರ ನೀಡಲಾಗಿದೆ ಎಂದರು. 19 ಸಾವಿರ ಎನ್.ಪಿ.ಎಸ್. ಯೋಜನೆಯಲ್ಲಿದ್ದ ನೌಕರರನ್ನು ಓಪಿಎಸ್ ವ್ಯಾಪ್ತಿಗೆ ಒಳಪಡಿಸಲಾಗಿದೆ. ಶಿಕ್ಷಕರ ಕೋರಿಕೆಯ ಮೇರೆಗೆ ೨೯ ಸಾವಿರ ಶಿಕ್ಷಕರಿಗೆ ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿ ಭತ್ಯೆ ನೀಡಿದ ಕ್ಷಣಾರ್ಧದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದೆ. ಎನ್.ಇ.ಪಿ. ಬದಲು ಎಸ್.ಇ.ಪಿ. ಜಾರಿಗೆ ತರಲು ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

ಪ್ರಥಮ ಪ್ರಾಶಸ್ತ್ಯ ಮತ ನೀಡಿ

ರಾಜ್ಯದ ಶಿಕ್ಷಕರ ಹಾಗೂ ಪದವೀಧರರ ಕಲ್ಯಾಣಕ್ಕಾಗಿ ಇನ್ನು ಹಲವಾರು ಯೋಜನೆಗಳ ಜಾರಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಪ್ರಥಮ ಪ್ರಶಸ್ತ್ಯ ಮತ ನೀಡಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕೆಂದು ಪದವೀಧರ ಮತದಾರರಲ್ಲಿ ಶಿಕ್ಷಕರಲ್ಲಿ ವಿನಂತಿಸಿದರು.ಕಳೆದ ೨೦೦೬ರ ಸಮ್ಮಿಶ್ರ ಸರ್ಕಾರದಲ್ಲಿ ಎನ್.ಪಿ.ಎಸ್. ಯೋಜನೆ ಜಾರಿಗೆ ಬಂದಿತ್ತು ಕಾಂಗ್ರೆಸ್ ಸರ್ಕಾರ ಇದನ್ನು ರದ್ದುಗೊಳಿಸುವುದಾಗಿ ಘೋಷಿಸಲಾಗಿತ್ತು, ಕಾಂಗ್ರೆಸ್ ಬೆಂಬಲಿತರೆಂದು ಗುರುತಿಸಿ ಕೊಂಡಿದ್ದವರಿಗೆ ಅಂತಿಮವಾಗಿ ಪಕ್ಷವು ಬೆಂಬಲಿಸುವುದು ಮುಖ್ಯವಾಗಿದೆ ಬಂಡಾಯವಾಗಿ ಸ್ಪರ್ಧಿಸಿದ್ದವರಿಂದ ಯಾವೂದೇ ಪರಿಣಾಮ ಬೀರುವುದಿಲ್ಲ ಎಂದು ಸ್ವಷ್ಟಪಡಿಸಿದರು.ಬಿಜೆಪಿ ಸೃಷ್ಟಿಸಿದ ಸಮಸ್ಯೆ

ಕಾಲ್ಪನಿಕ ವೇತನ, ವೇತನ ತಾರತಮ್ಯ, ಅನುದಾನಿತ ಶಾಲೆಯ ಸಮಸ್ಯೆಗಳು. ವೇತನ ನಿರ್ವಹಣೆಯಲ್ಲಿ ಅವೈಜ್ಞಾನಿಕತೆ ಇವೆಲ್ಲವೂ ಬಿಜೆಪಿ ಆಡಳಿತದಲ್ಲಿ ಆಗಿರುವುದಾಗಿದೆ ಕಾಂಗ್ರೆಸ್ ಆಡಳಿತದಲ್ಲಿ ಈ ಸಮಸ್ಯೆಗಳಿಗೆಲ್ಲಾ ಸರ್ಜರಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿ.ಟಿ.ಶ್ರೀನಿವಾಸ್ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಶಿಕ್ಷಕರ ಪರ ಹೋರಾಟಗಳನ್ನು ಮಾಡಿದ್ದಾರೆ, ಅವರದೇ ಆದ ಹಲವಾರು ಸಂಸ್ಥೆಗಳನ್ನು ಹೊಂದಿದ್ದಾರೆ ಎಂದು ವಿವರಿಸಿದರು.ಕೆ.ಪಿ.ಸಿ.ಸಿ. ರಾಜ್ಯ ಸಂಚಾಲಕ ತಿಮ್ಮಯ್ಯ ಪುರ್ಲೆ. ಕೋಲಾರ ಜಿಲ್ಲಾಧ್ಯಕ್ಷ ಸಂಪತ್ ಕುಮಾರ್.ಕೆ.ಹೆಚ್, ಉರ್ದು ಶಿಕ್ಷಕರ ಸಂಘದ ಫಯಾಜ್ ಉದ್ದಿನ್ ಶೇಖ್ ಇದ್ದರು.