ಮೋದಿ ಬೆಂಬಲಿಸಿ 16 ನಗರಗಳಲ್ಲಿ ಅನಿವಾಸಿ ಬಿಜೆಪಿ ರ್‍ಯಾಲಿ

| Published : Apr 09 2024, 12:50 AM IST / Updated: Apr 09 2024, 03:36 AM IST

ಸಾರಾಂಶ

ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವಂತೆಯೇ ಅಮೆರಿಕದ ಅನಿವಾಸಿ ಬಿಜೆಪಿ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಅಲ್ಲಿನ ವಿವಿಧ 16 ನಗರಗಳಲ್ಲಿ ಭಾರತೀಯ ಸಮುದಾಯದೊಂದಿಗೆ ರ್‍ಯಾಲಿ ನಡೆಸಿದೆ.

ವಾಷಿಂಗ್ಟನ್‌: ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವಂತೆಯೇ ಅಮೆರಿಕದ ಅನಿವಾಸಿ ಬಿಜೆಪಿ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಅಲ್ಲಿನ ವಿವಿಧ 16 ನಗರಗಳಲ್ಲಿ ಭಾರತೀಯ ಸಮುದಾಯದೊಂದಿಗೆ ರ್‍ಯಾಲಿ ನಡೆಸಿದೆ.

‘ಮೋದಿ ಕಾ ಪರಿವಾರ್ ಮಾರ್ಚ್‌’ ಎಂಬ ಹೆಸರಿನಲ್ಲಿ ಹಮ್ಮಿಕೊಂಡಿದ್ದ ರ್‍ಯಾಲಿಯಲ್ಲಿ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಮುಂಬೈನಿಂದ ಮಣಿಪುರದವರೆಗೆ ವಿವಿಧ ಸಮುದಾಯದ ಜನ ಅದರಲ್ಲಿ ಸ್ಚಂತ ಹಿತಾಸಕ್ತಿಯಿಂದ ಭಾಗವಹಿಸಿ ಅಬ್‌ಕಿ ಬಾರ್ 400 ಪಾರ್ ಎಂದು ಜಯಘೋಷ ಕೂಗಿದರು.

ಒಎಫ್‌ಬಿಜೆಪಿ ಮುಖ್ಯಸ್ಥ ಅಡಪ ಪ್ರಸಾದ್‌ ಮತ್ತು ಕಾರ್ಯದರ್ಶಿ ವಾಸುದೇವ್‌ ಪಟೇಲ್‌ ನೇತೃತ್ವದಲ್ಲಿ ಸ್ಯಾನ್‌ ಫ್ರಾನ್ಸಿಸ್ಕೋದ ಗೋಲ್ಡನ್‌ ಗೇಟ್‌ ಎದುರಿಗೆ ಮುಖ್ಯ ಕಾರ್ಯಕ್ರಮ ನಡೆದಿದ್ದು, ಅಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಬೆಂಬಲಿಗರಿಂದ ಕೇಸರಿಮಯವಾಗಿ ಮಾರ್ಪಟ್ಟಿತ್ತು. ಎಲ್ಲರೂ ತಮ್ಮ ಕೈಯಲ್ಲಿ ಬಿಜೆಪಿಯ ಕೇಸರಿ ಬಾವುಟ ಹಾರಿಸುವ ಜೊತೆಗೆ, ಭಿತ್ತಿಪತ್ರಗಳು, ಕರಪತ್ರಗಳನ್ನು ಸಹ ಪ್ರದರ್ಶಿಸುತ್ತಾ ಮೆರವಣಿಗೆ ಸಾಗಿದರು. ಅಲ್ಲದೆ ವಾಷಿಂಗ್ಟನ್‌ನ ಲಿಂಕನ್‌ ಮೆಮೋರಿಯಲ್‌ ಬಳಿಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ರ್‍ಯಾಲಿಯಲ್ಲಿ ಭಾಗವಹಿಸಿದರು.

ಈ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸು ಅಮೆರಿಕದಲ್ಲಿರುವ ಭಾರತೀಯ ಸಮುದಾಯವು ಭಾರತದ ಅಭಿವೃದ್ಧಿಗೆ ತನ್ನನ್ನು ಸಮರ್ಪಿಸಿಕೊಂಡಿದೆ ಮತ್ತು ಭಾರತ ಸರ್ಕಾರದ ಎಲ್ಲ ನೀತಿಗಳಿಗೆ ತಮ್ಮ ಬೆಂಬಲವಿರುವುದನ್ನು ಸಾಕ್ಷೀಕರಿಸುತ್ತದೆ. ಈ ರೀತಿಯ ಕಾರ್ಯಕ್ರಮದಲ್ಲಿ ಮಕ್ಕಳಿಂದ ವೃದ್ಧರವರೆಗೆ ಎಲ್ಲ ವಯೋಮಾನದ ಭಾಗವಹಿಸಿರುವುದು ಪ್ರಧಾನಿ ಮೋದಿಯವರ ಸರ್ವರನ್ನೂ ಒಳಗೊಳ್ಳುವಂತಹ ಅಭಿವೃದ್ಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ.

-ಸಚೇಂದ್ರನಾಥ್‌, ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಅನಿವಾಸಿ ಭಾರತೀಯ