ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ ರಾಜಕೀಯ ನಿವೃತ್ತಿ
1 Min read
KannadaprabhaNewsNetwork
Published : Oct 26 2023, 01:00 AM IST
Share this Article
FB
TW
Linkdin
Whatsapp
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha
Image Credit: KP
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೂ ಆದ ಹಿರಿಯ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ.
2003ರಲ್ಲಿ ಮಹಾರಾಷ್ಟ್ರ ಸಿಎಂ ಆಗಿದ್ದರು ಗೃಹ ಖಾತೆ ಸೇರಿ ಅನೇಕ ಹುದ್ದೆ ನಿಭಾಯಿಸಿದ್ದ ನಾಯಕ ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೂ ಆದ ಹಿರಿಯ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. 26/11 ಮುಂಬೈ ದಾಳಿಯ ನಂತರ ಕೇಂದ್ರ ಗೃಹ ಮಂತ್ರಿಯ ಪಟ್ಟ ಅಲಂಕರಿಸಿದ್ದ ಶಿಂಧೆ ಬುಧವಾರ ಈ ಘೋಷಣೆ ಮಾಡಿದ್ದಾರೆ. ‘ನಾನು ನಿವೃತ್ತಿ ಆಗುತ್ತಿದ್ದೇನೆ. ಆದರೂ ಪಕ್ಷ ಬಯಸಿದಲ್ಲಿ ಸೇವೆಗೆ ಸದಾ ಸಿದ್ಧ’ ಎಂದು ತಿಳಿಸಿದ್ದಾರೆ. 2003ರಲ್ಲಿ ಅವರು ಅಲ್ಪಾವಧಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ನಂತರ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ಕೇಂದ್ರ ಸರ್ಕಾರ ನೇಮಿಸಿತ್ತು. ಬಳಿಕ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಇಂಧನ ಹಾಗೂ ಗೃಹ ಖಾತೆ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದ ಇವರು ಲೋಕಸಭೆಯಲ್ಲಿ ಸೊಲ್ಲಾಪುರ ಕ್ಷೇತ್ರವನ್ನು 3 ಬಾರಿ ಪ್ರತಿನಿಧಿಸಿದ್ದಾರೆ. ಮಗಳಿಂದ ಸ್ಪರ್ಧೆ?: ಸೊಲ್ಲಾಪುರ ಲೋಕಸಭಾ ಕ್ಷೇತ್ರದಿಂದ ಮಗಳು ಪ್ರಣೀತಿ ಶಿಂಧೆಯನ್ನು ಮುಂದಿನ ಬಾರಿ ಕಣಕ್ಕಿಳಿಸಬೇಕೆಂಬ ಇಂಗಿತ ವ್ಯಕ್ತಪಡಿಸಿರುವ ಸುಶೀಲ್, ಈ ಕುರಿತು ಕಾಂಗ್ರೆಸ್‌ನ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಪ್ರಣೀತಿ (42) ಅವರು 3 ಅವಧಿಯಿಂದ ಸೊಲ್ಲಾಪುರ ಸೆಂಟ್ರಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.