ತೆಲಂಗಾಣ ಚುನಾವಣೆಯಿಂದಹೊರಗುಳಿಯಲಿರುವ ಟಿಡಿಪಿ
KannadaprabhaNewsNetwork | Published : Oct 30 2023, 12:30 AM IST
ತೆಲಂಗಾಣ ಚುನಾವಣೆಯಿಂದಹೊರಗುಳಿಯಲಿರುವ ಟಿಡಿಪಿ
ಸಾರಾಂಶ
ತೆಲಂಗಾಣ ವಿಧಾನಸಭೆ ಚುನಾವಣೆಯಿಂದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಹೊರಗುಳಿಯಲಿದೆ ಎಂದು ಹೇಳಲಾಗಿದೆ.
- ಚಂದ್ರಬಾಬು ನಾಯ್ಡು ಜೈಲಲ್ಲಿರುವ ಕಾರಣ ಈ ನಿರ್ಧಾರ! ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಿಂದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಹೊರಗುಳಿಯಲಿದೆ ಎಂದು ಹೇಳಲಾಗಿದೆ. ನಾಯ್ಡು ಅವರು ಜೈಲಿನಲ್ಲಿರುವ ಕಾರಣ ಪ್ರಚಾರ ನಡೆಸುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಮಂಡ್ರಿ ಜೈಲಲ್ಲಿರುವ ನಾಯ್ಡು ಅವರ ಜೊತೆ ಪಕ್ಷದ ಮುಖ್ಯಸ್ಥ ಕಸನಿ ಗುಣೇಶ್ವರ್ ಸಭೆ ನಡೆಸಿದ್ದು, ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. 2014ರ ಚುನಾವಣೆಯಲ್ಲಿ ಟಿಡಿಪಿ 15 ಸ್ಥಾನಗಳಲ್ಲಿ 2018ರಲ್ಲಿ 2 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಈ ಬಾರಿ ಬಿಜೆಪಿ ತೆಲಂಗಾಣದಲ್ಲಿ ಪವನ್ ಕಲ್ಯಾಣ್‌ರ ಜನಸೇನಾ ಜೊತೆ ಮೈತ್ರಿಗೆ ಒಲವು ತೋರಿದೆ. ಇದು ಕೂಡಾ ಟಿಡಿಪಿಯ ಈ ನಿಲುವಿಗೆ ಕಾರಣ ಎನ್ನಲಾಗುತ್ತಿದೆ.