ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಮತದಾರರು ನೀಡಿರುವ ತೀರ್ಪಿನ ಬಗ್ಗೆ ನನಗೆ ನಂಬಿಕೆ ಇದೆ. ನಾನು ಯಾವುದೇ ಕಾರಣಕ್ಕೂ ಮರುಮತ ಏಣಿಕೆಯಿಂದ ವಿಚಲಿತನಾಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಮಾಜಿ ಶಾಸಕರೊಬ್ಬರಿಗೆ ೨೦೨೩ ರ ವಿಧಾನಸಭಾ ಚುನಾವಣೆಯ ಮತಗಳ ಮುರು ಎಣಿಕೆ ಜರೂರಿಯಾಗಿದೆ ಮತ್ತೆ ಎರಡನೇ ಬಾರಿಗೆ ತಾಲೂಕಿನಲ್ಲಿ ಶಾಸಕರಾಗುವ ತಿರುಕನ ಕನಸು ಕಾಣುತ್ತಿದ್ದಾರೆ. ಆದರೆ ಮೂರನೇ ಬಾರಿ ಅವರನ್ನು ಸೋಲಿಸಿದ ಕೀರ್ತಿ ನನ್ನದಾಗಲಿದೆ ಎಂದರು.
ಮತ ಮರುಎಣಿಕೆ ಮಾಡೋಲ್ಲಮಾಲೂರು ಕ್ಷೇತ್ರದ ಚುನಾವಣಾ ಮತ ಎಣಿಕೆ ಮರು ಎಣಿಕೆ ಸಂಬಂಧ ತಕರಾರು ಅರ್ಜಿ ನ್ಯಾಯಾಲಯದಲ್ಲಿದ್ದು ನ್ಯಾಯಾಲಯ ಮತಗಳ ಎಣಿಕೆ ದಾಖಲೆ ಪಡೆಯಲು ೧೭ ಸಿ ಫಾರಂ ನ್ಯಾಯಾಲಯ ಕೇಳಿದೆ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ಸ್ಟ್ರಾಂಗ್ ರೂಮ್ ನಲ್ಲಿರುವ ೧೭ ಸಿ ಫಾರಂ ದಾಖಲೆಯನ್ನು ಹೊರ ತೆಗೆಯಲು ಸ್ಟ್ರಾಂಗ್ ರೂಮ್ ಮಂಗಳವಾರ ತೆರೆದಿದ್ದಾರೆ ಹೊರತು ಮತ ಮರುಎಣಿಕೆ ನಡೆಸುವುದಕ್ಕೆ ಅಲ್ಲ ಎಂದರು.
ಈ ಪ್ರಕ್ರೀಯೆಯಿಂದ ನನಗೆ ಭಯವೂ ಇಲ್ಲ ಆತಂಕವೂ ಇಲ್ಲ. ಮತ ಎಣಿಕೆ ನಡೆಯುವ ಸಂದರ್ಭದಲ್ಲಿ ಅವರದೇ ಪಕ್ಷದ ಸರ್ಕಾರ, ಅಧಿಕಾರಿಗಳಿದ್ದರೂ ಮತ ಎಣಿಕೆ ದಿನ ಬೆಳಗ್ಗೆಯಿಂದ ಸಂಜೆವರೆಗೆ ಮತ ಎಣಿಕೆ ಕೇಂದ್ರದಲ್ಲಿ ಕುಳಿತವರು ಹೇಗೆ ಮತ ಎಣಿಕೆ ದುರುಪಯೋಗವಾಗುತ್ತದೆ ಎಂದು ಪ್ರಶ್ನಿಸಿದರು.ತಾಲೂಕಿನ ಜನತೆ ಕಾರ್ಯಕರ್ತರು ಯಾವುದೇ ಕಾರಣ ಭಯ ಹಾಗೂ ಆತಂಕ ಪಡುವ ಅಗತ್ಯವಿಲ್ಲ ಕಾನೂನು ಮತ್ತು ಸಂವಿಧಾನದ ಮೇಲೆ ಗೌರವಿದೆ ನಿಮ್ಮ ನಂಜೇಗೌಡ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ ಅವರೇ ಶಾಸಕರಾಗಿ ಮುಂದುವರೆಯುತ್ತಾರೆ, ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದರು.