ರಾಜ್ಯಪಾಲರ ವಿರುದ್ಧ ಸುಪ್ರೀಂಮೆಟ್ಟಿಲೇರಿದ ತಮಿಳ್ನಾಡು, ಪಂಜಾಬ್
KannadaprabhaNewsNetwork | Published : Nov 01 2023, 01:01 AM IST
ರಾಜ್ಯಪಾಲರ ವಿರುದ್ಧ ಸುಪ್ರೀಂಮೆಟ್ಟಿಲೇರಿದ ತಮಿಳ್ನಾಡು, ಪಂಜಾಬ್
ಸಾರಾಂಶ
ವಿಶ್ವದ ಅತ್ಯಂತ ಬೃಹತ್ ಚುಟುಕು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಎಕ್ಸ್ (ಟ್ವೀಟರ್)ನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.50ರಷ್ಟು ಭಾರೀ ಇಳಿಕೆ ಕಂಡಿದೆ.
-ಶಾಸನಸಭೆ ಹಾಗೂ ಸರ್ಕಾರಗಳಿಗೆ ಸಹಕರಿಸುತ್ತಿಲ್ಲವೆಂದು ಆರೋಪ ನವದೆಹಲಿ: ರಾಜ್ಯಪಾಲರು ಆಡಳಿತ ನಡೆಸಲು ಸಹಕರಿಸುತ್ತಿಲ್ಲವೆಂದು ದೂರಿ ತಮಿಳುನಾಡು ಮತ್ತು ಪಂಜಾಬ್ ಸರ್ಕಾರಗಳು ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿವೆ. ತಮಿಳುನಾಡು ಸರ್ಕಾರ ಸಲ್ಲಿಸಿರುವ ದೂರಿನಲ್ಲಿ, ‘ರಾಜ್ಯಪಾಲ ರವಿ ಅವರು ಸರ್ಕಾರ ಹಾಗೂ ಶಾಸನಸಭೆ ಮಂಡಿಸಿರುವ 12 ಶಾಸನ ಹಾಗೂ ಕಾನೂನುಗಳಿಗೆ ಅನುಮತಿ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಈ ಮೂಲಕ ಸುಗಮ ಆಡಳಿತ ನಡೆಸಲು ಅಡಚಣೆ ಉಂಟು ಮಾಡುತ್ತಿದ್ದು, ರಾಜ್ಯಪಾಲರೆಂಬ ಸಾಂವಿಧಾನಿಕ ಪದವಿಯನ್ನು ಬಾಹ್ಯ ಶಕ್ತಿಗಳು ಅಸಾಧಾರಣ ಕಾರಣಕ್ಕೆ ನಿಯಂತ್ರಿಸುವಂತೆ ತೋರುತ್ತಿದೆ’ ಎಂದು ಉಲ್ಲೇಖಿಸಿದೆ. ಇದೇ ರೀತಿಯಲ್ಲಿ ಪಂಜಾಬ್ ಸರ್ಕಾರ ಕೂಡ ತಮ್ಮ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ 12 ಮಸೂದೆಗಳಿಗೆ ತಮ್ಮ ಒಪ್ಪಿಗೆ ನೀಡಲು ಅನಗತ್ಯ ವಿಳಂಬ ಮಾಡುವ ಮೂಲಕ ಸುಗಮ ಆಡಳಿತ ನಡೆಸಲು ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಅ.28ರಂದು ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಿದೆ.