ವಿದ್ಯುತ್ ಕಣ್ಣಾಮುಚ್ಚಾಲೆ: ಸಂಕಷ್ಟದಲ್ಲಿ ರೈತರು, ನೇಕಾರರು
KannadaprabhaNewsNetwork | Published : Oct 15 2023, 12:46 AM IST
ವಿದ್ಯುತ್ ಕಣ್ಣಾಮುಚ್ಚಾಲೆ: ಸಂಕಷ್ಟದಲ್ಲಿ ರೈತರು, ನೇಕಾರರು
ಸಾರಾಂಶ
ಅನಧಿಕೃತ ಲೋಡ್‌ಶೆಡ್ಡಿಂಗ್ ವಿರೋಧಿಸಿ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ
ಅನಧಿಕೃತ ಲೋಡ್‌ಶೆಡ್ಡಿಂಗ್ ವಿರೋಧಿಸಿ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಕನ್ನಡಪ್ರಭ ವಾರ್ತೆ ತಿಪಟೂರು: ಗ್ರಾಮೀಣ ಮತ್ತು ನಗರದ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಇಲ್ಲದ ಕಾರಣ ರೈತರು ತೋಟಗಳಿಗೆ ನೀರುಣಿಸಲು ಹೆಣಗಾಡಬೇಕಾದ ಪರಿಸ್ಥಿತಿ ತಲೆದೋರಿದೆ. ಜನ-ಜಾನುವಾರುಗಳಿಗೂ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ತಡಸೂರು ಗುರುಮೂರ್ತಿ ಸರ್ಕಾರದ ವಿರುದ್ಧ ಪತ್ರಿಕಾ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನಾದ್ಯಂತ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದು, ಯಾವಾಗ ಕರೆಂಟ್ ಇರುತ್ತದೆ, ಯಾವಾಗ ಕೈಕೊಡುತ್ತದೆ ಎಂಬ ಮಾಹಿತಿಯೂ ಇಲ್ಲದ್ದರಿಂದ ರೈತರ ಪಾಡಂತೂ ಹೇಳತೀರದಾಗಿದೆ. ತಾಲೂಕಿನಲ್ಲಿ ಪ್ರತಿಯೊಬ್ಬ ತೆಂಗು ಬೆಳೆಗಾರನು ತೆಂಗಿನ ತೋಟಗಳಿಗೆ ನೀರುಣಿಸಲು ಬೋರ್‌ವೆಲ್‌ಗಳನ್ನೇ ಅವಲಂಬಿಸಿದ್ದಾನೆ. ತೆಂಗಿನ ಜೊತೆ ಹೆಚ್ಚಿನ ರೈತರು ಬಾಳೆ, ತರಕಾರಿ ಮತ್ತಿತರೆ ಬೆಳೆ ಬದುಕಿನ ನಿತ್ಯ ಖರ್ಚಿಗಾಗಿ ಬೆಳೆಯುತ್ತಿದ್ದು, ಇವುಗಳಿಗೂ ಸಹ ಬೋರ್‌ವೆಲ್ ನೀರೇ ಗತಿಯಾಗಿದೆ. ಆದರೆ, ಸಮರ್ಪಕ ಕರೆಂಟ್ ಇಲ್ಲದ ಪರಿಣಾಮ ರೈತರು ವಿದ್ಯುತ್‌ಗಾಗಿ ರಾತ್ರಿಯಿಡಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ರೈತರಿಗೆ ಇನ್ನಿಲ್ಲದ ಕಷ್ಟ ಬಂದೊದಗಿದ್ದು ಕೇಳುವವರಿಲ್ಲದಂತಾಗಿದೆ. ವಿದ್ಯುತ್ ಸಮಸ್ಯೆ ದಿನೆದಿನೆ ಬಿಗಡಾಯಿಸುತ್ತಿರುವುದರಿಂದ ಗ್ರಾ.ಪಂ. ಕುಡಿವ ನೀರಿನ ಸಮಸ್ಯೆ ಪರಿಹರಿಸಲಾಗುತ್ತಿಲ್ಲ. ರೈತರಿಗೆ ನೀಡುವ ಕೇವಲ ೩ಗಂಟೆ ಅವಧಿಯ ವಿದ್ಯುತ್ ಹತ್ತಾರು ಬಾರಿ ಕೈಕೊಡುತ್ತಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದ್ದಾರೆ. ವಿದ್ಯಾರ್ಥಿಗಳು ಸಂಜೆ ನಂತರ ಓದಲು ತುಂಬಾ ಕಷ್ಟಕರವಾಗಿದ್ದು, ಪೋಷಕರಂತೂ ಸರ್ಕಾರಕ್ಕೆ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ನಗರದಲ್ಲಿಯೂ ಇದೆ ಗತಿ: ಅನಿಯಮಿತವಾಗಿ ಕೈ ಕೊಡುತ್ತಿರುವ ವಿದ್ಯುತ್‌ನಿಂದಾಗಿ ವಿದ್ಯುತ್ ನಂಬಿ ಬದುಕು ಕಟ್ಟಿಕೊಂಡಿರುವ ಮಹಿಳೆಯರು ಹಾಗೂ ನೇಕಾರರಿಗೂ ತೀವ್ರ ತೊದರೆಯಾಗುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿರುವುದಕ್ಕೆ ನಗರದ ಜನತೆಯಂತೂ ರೋಸಿ ಹೋಗುತ್ತಿದ್ದಾರೆ. ದಿನವೂ ನೇಕಾರರು, ವ್ಯಾಪಾರಸ್ಥರು ಮತ್ತು ಕೈಗಾರಿಕೋಧ್ಯಮಿಗಳು ಕರೆಂಟ್ ಕಿರಿಕಿರಿಯಿಂದ ಬೇಸತ್ತು ಹೋಗಿದ್ದಾರೆ. ನಗರದ ಮನೆಗಳಿಗೆ ನಗರಸಭೆಯಿಂದ ನೀರು ಬಿಟ್ಟಾಗಲೂ ವಿದ್ಯುತ್ ಕೈಕೊಡುತ್ತಿರುವುದರಿಂದ ನೀರು ತುಂಬಿಸಿಕೊಳ್ಳಲಾಗದೆ ಗೃಹಿಣಿಯರು ಬೆಸ್ಕಾಂ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ವ್ಯಾಪಾರ, ವ್ಯವಹಾರ ಹಾಗೂ ಇತರೆ ಉದ್ಯಮಗಳನ್ನು ನಡೆಸುವವರಂತೂ ಅನಧಿಕೃತ ಲೋಡ್‌ಶೆಡ್ಡಿಂಗ್ ವಿರೋಧಿಸಿ ಇಲಾಖೆ ಹಾಗೂ ಸರ್ಕಾರದ ವಿರುದ್ಧ ತಮ್ಮದೇ ದಾಟಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೋಟ್,,,, ನಗರದಲ್ಲಿ ಗಂಟೆಗೊಮ್ಮೆ, ಗಳಿಗೆಗೊಮ್ಮೆ ವಿದ್ಯುತ್ ಕೈಕೊಡುವುದರಿಂದ ಮನೆಯಲ್ಲಿ ಯಾವ ಕೆಲಸ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ಕೆಲಸಗಳಿಗೂ ಯಂತ್ರೋಪಕರಣಗಳ ಬಳಕೆ ಮಾಡುವುದರಿಂದ ವಿದ್ಯುತ್ ಅವಶ್ಯಕತೆ ಇದೆ. ಮಹಿಳೆಯರಂತೂ ಪ್ರತಿನಿತ್ಯ ವಿದ್ಯುತ್‌ಗಾಗಿ ಕಾಯುವ ಪರಿಸ್ಥಿತಿ ಬಂದಿದೆ. ಬೆಸ್ಕಾಂ ಇತ್ತ ಗಮನಹರಿಸಬೇಕಿದೆ. - ಸ್ವರ್ಣಗೌರಿ, ತಿಪಟೂರು. ಫೋಟೊ.... 14ಟಿಪಿಟಿ-1 ರಲ್ಲಿ ಗುರುಮೂರ್ತಿ ಫೋಟೋ ಕಳುಹಿಸಿದೆ.