ವೇದ ಮಂತ್ರಗಳನ್ನು ಶಿಕ್ಷಣ ಎನ್ನಲು ಸಾಧ್ಯವಿಲ್ಲ: ಶೃಂಗೇರಿ ಶ್ರೀ
2 Min read
Author : KannadaprabhaNewsNetwork
Published : Oct 20 2023, 01:00 AM IST
Share this Article
FB
TW
Linkdin
Whatsapp
ಪೊಟೊ: 19 ಎಚ್‍ಎಚ್‍ಆರ್ ಪಿ 05ಹೊಳೆಹೊನ್ನೂರು ಸಮೀಪದ ಕೂಡ್ಲಿಯ ಶಾರದಾಂಬ ಪೀಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮಿಗಳು ಆರ್ಶೀವಚನ ನೀಡಿದರು. ಹೆಬ್ಬಳಿ ಚೈತನ್ಯಾಶ್ರಮದ ದತ್ತಾವಧೂತ ಅಭಿನವ ಶ್ರೀಗಳಿದ್ದಾರೆ. | Kannada Prabha
Image Credit: KP
ವೇದ ಮಂತ್ರಗಳನ್ನು ಶಿಕ್ಷಣ ಎನ್ನಲು ಸಾಧ್ಯವಿಲ್ಲ: ಶೃಂಗೇರಿ ಶ್ರೀಕೂಡ್ಲಿಯ ಶೃಂಗೇರಿ ಶ್ರೀ ಶಾರದಾಂಬ ಪೀಠದಲ್ಲಿ ಶರವನ್ನರಾತ್ರಿ ಪ್ರಯುಕ್ತ ನಡೆದ ಧರ್ಮ ಸಭೆಯಲ್ಲಿ ಅಭಿಮತ
ಕೂಡ್ಲಿಯ ಶೃಂಗೇರಿ ಶ್ರೀ ಶಾರದಾಂಬ ಪೀಠದಲ್ಲಿ ಶರವನ್ನರಾತ್ರಿ ಪ್ರಯುಕ್ತ ನಡೆದ ಧರ್ಮ ಸಭೆಯಲ್ಲಿ ಅಭಿಮತ ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು ವೇದ ಮಂತ್ರಗಳನ್ನೆ ಶಿಕ್ಷಣ ಎನ್ನಲು ಸಾದ್ಯವಿಲ್ಲ. ಆಂಗ್ಲರು ಬಂದು ಶಿಕ್ಷಣ ನೀಡಿದರಿಂದ ದೇಶ ಉದ್ದಾರವಾಗಿಲ್ಲ ಎಂದು ಕೂಡಲಿ ಶೃಂಗೇರಿ ಪೀಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮಿಗಳು ಆರ್ಶಿವಚನದಲ್ಲಿ ಹೇಳಿದರು. ಹೊಳೆಹೊನ್ನೂರು ಸಮಿಪದ ಕೂಡ್ಲಿಯ ಶೃಂಗೇರಿ ಶ್ರೀ ಶಾರದಾಂಬ ಪೀಠದಲ್ಲಿ ಗುರುವಾರ ಶರವನ್ನರಾತ್ರಿ ಪ್ರಯುಕ್ತ ನಡೆದ ಧರ್ಮ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕ್ರೈಸ್ತ ಮಿಷನರಿಗಳು ದೇಶದ ಗಂಡು ಮಕ್ಕಳಿಗೆ ಮಾತ್ರ ಮೇಟ್ರಿಕ್‍ವರೆಗೆ ಶಿಕ್ಷಣ ನೀಡಿ ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುತ್ತಿದರು. ಮಾನವನ್ನು ಅಧ್ಯಾಯನ ಕೇಂದ್ರವಾಗಿಸಿದ ಶಿಕ್ಷಣ ಪದ್ಧತಿ ಮುಂದುವರೆಕೆಯ ಕಾರಣ ಆಂಗ್ಲ ಮಾದ್ಯಮ ಶಾಲೆಗಳು ಹೆಚ್ಚಾಗಿ ನಮ್ಮ ಸಂಸ್ಕೃತಿಗಳ ಮೂಲ ವಿಷಯಗಳು ತೆರೆಮರೆಗೆ ಸರಿದವು. ಅಂದಿನಿಂದಲೂ ಪೂಜೆ ಹಾಗೂ ಸಂಸ್ಕಾರಗಳ ನಡುವಣ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಗೆ ಬಂದು ತಲುಪಿದ್ದೇವೆ. ಆರಾಧಾನ ಭಾವ, ದೈವತ್ವ ಭಾವ ಮೆಳೈಸುವಿಕೆಗಳು ಆಥಿತ್ಯಕ್ಕೂ ಪೂಜೆಗೆ ವ್ಯತ್ಯಾಸ ತಿಳಿಸುತ್ತವೆ. ಗಂಧ, ನೈವೆದ್ಯಗಳ ಅರ್ಪಣೆ ಪೂಜೆಯಲ್ಲ. ಅತಿಥಿಗಳಿಗೆ ಉಪಚರಿಸುವ ಕ್ರಮವನ್ನು ಪೂಜೆ ಎಂದಾಗುತ್ತದೆ. ನಮ್ಮ ಅಧೀನದಲ್ಲಿಯೇ ಪಂಚಭೂತಗಳ ಸಿದ್ಧಿ ಅಡಗಿದೆ. ಶುದ್ಧ ಪಂಚೋಪಚಾರಗಳಿಂದ ಪಂಚಭೂತ ಶುದ್ಧಿಯಾಗುತ್ತದೆ. ಯೋಗ ಮತ್ತು ಆಸನಗಳಿಂದ 12 ವರ್ಷಗಳ ಕಾಲ ದೇಹ ಶುದ್ಧಿಯಾದರೆ ಭೂತ ಸಿದ್ಧಿಯಾಗುತ್ತದೆ. ಭೂತ ಸಿದ್ಧಿಗಳ ಆಚಾರಣೆ ಕ್ಲಿಷ್ಟವಾದ ಕಾರಣ ಪಂಚೋಪಚಾರಗಳ ಮೂಲಕ ಪೂಜೆ ಕ್ರಮ ರೂಢಿಯಲ್ಲಿದೆ. ಪೂಜೆಗೂ ಇತರೆ ವೈದಿಕ ಕರ್ಮಗಳಿಗೂ ವ್ಯತ್ಯಾಸ ಅರಿವಿಗೆ ಬರಬೇಕು. ಉಪಸಾನೆ ಅಷ್ಟೋತ್ತರಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬಹುದು. ಮಾತೆಯರು ಮನೆಗಳಲ್ಲಿ ಮಕ್ಕಳಿಗೆ ಸಂಸ್ಕೃತಿ ಮೂಲವನ್ನು ತಿಳಿಸಬೇಕು. ಜಗತ್ತು ಉತ್ತಮವಾಗಿರಬೇಕಾದರೆ ಭಾರತ ಸುಭೀಕ್ಷವಾಗಿರಬೇಕು. ದೇಶ ಸುಸಂಸ್ಕೃತವಾಗಿದ್ದಾಗ ವಿಶ್ವ ಗುರುವಾಗುವುದರಲ್ಲಿ ಸಂಶಯವಿಲ್ಲ. ಸುಸಂಸ್ಕೃತ ವಿಶ್ವ ಗುರುವಿನ ಮಾರ್ಗದರ್ಶನಗಳಿಂದ ಜಗತ್ತಿನ ಕಲ್ಯಾಣ ಸಾಧ್ಯ. ನಮ್ಮ ಸಂಸ್ಕೃತಿಯ ಉಳಿವು ಮನೆಗಳಿಂದಲೇ ಆರಂಭವಾಗಬೇಕು ಎಂದರು. ಹೆಬ್ಬಳಿ ಚೈತನ್ಯಾಶ್ರಮದ ದತ್ತಾವಧೂತ ಅಭಿನವ ಶ್ರೀಗಳು ಆರ್ಶಿವಚನ ನೀಡಿದರು. ಗಣೇಶ ಪ್ರಸಾದ್, ರಾಜೇಶ್ ಶಾಸ್ತ್ರಿ, ಆನಂತದತ್ತ, ಕೇಶವ ಮೂರ್ತಿ, ಶ್ರೀನಿವಾಸ್ ಐಯ್ಯರ್, ಕುಮಾರಶಾಸ್ತ್ರಿ, ಕಮಾಕ್ಷಮ್ಮ, ಚಂದ್ರಶೇಖರ್ ಇತರರಿದ್ದರು. - - - - 19 ಎಚ್‍ಎಚ್‍ಆರ್ ಪಿ 05 ಹೊಳೆಹೊನ್ನೂರು ಸಮೀಪದ ಕೂಡ್ಲಿಯ ಶಾರದಾಂಬ ಪೀಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮಿಗಳು ಆರ್ಶೀವಚನ ನೀಡಿದರು. ಹೆಬ್ಬಳಿ ಚೈತನ್ಯಾಶ್ರಮದ ದತ್ತಾವಧೂತ ಅಭಿನವ ಶ್ರೀಗಳಿದ್ದಾರೆ.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.