ತಮಿಳುನಾಡಿನಲ್ಲಿ ವೀರಪ್ಪನ್‌ ಪುತ್ರಿ ಲೋಕಸಭೆಗೆ ಸ್ಪರ್ಧೆ

| Published : Apr 03 2024, 01:33 AM IST / Updated: Apr 03 2024, 05:03 AM IST

ಸಾರಾಂಶ

ಕುಖ್ಯಾತ ಆನೆದಂತ ಮತ್ತು ಗಂಧದಮರ ಚೋರನಾಗಿದ್ದ ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿದ್ಯಾ ರಾಣಿ ಈ ಬಾರಿ ತಮಿಳುನಾಡಿನ ಕೃಷ್ಣಗಿರಿ ಕ್ಷೇತ್ರದಿಂದ ವೀರಪ್ಪನ್ ಬಂಟ ಸೀಮನ್‌ ನೇತೃತ್ವದ ನಾಮ್‌ ತಮಿಳರ್‌ ಕಚ್ಚಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಚೆನ್ನೈ: ಕುಖ್ಯಾತ ಆನೆದಂತ ಮತ್ತು ಗಂಧದಮರ ಚೋರನಾಗಿದ್ದ ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿದ್ಯಾ ರಾಣಿ ಈ ಬಾರಿ ತಮಿಳುನಾಡಿನ ಕೃಷ್ಣಗಿರಿ ಕ್ಷೇತ್ರದಿಂದ ವೀರಪ್ಪನ್ ಬಂಟ ಸೀಮನ್‌ ನೇತೃತ್ವದ ನಾಮ್‌ ತಮಿಳರ್‌ ಕಚ್ಚಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಮೂಲತ: ವಕೀಲೆಯಾಗಿರುವ ವಿದ್ಯಾ, ನನಗೆ ನನ್ನ ತಂದೆಯೇ ಆದರ್ಶವಾಗಿದ್ದು, ಅವರ ಹಾದಿಯಂತೆ ಡೆಂಕಣಿಕೋಟೆ ಸುತ್ತಲಿನ ಕಾಡು ಜನರ ರಕ್ಷಣೆಗೆ ಧ್ವನಿಯಾಗುವ ಸಲುವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ್ದಾರೆ.

2020ರಲ್ಲಿ ಬಿಜೆಪಿ ಸೇರಿದ್ದ ವಿದ್ಯಾ, ಬಳಿಕ ವೀರಪ್ಪನ್‌ ಕುರಿತ ಸಾಕ್ಷ್ಯ ಚಿತ್ರವೊಂದನ್ನು ನೋಡಿ ಪ್ರೇರಿತರಾಗಿ ನಾಮ್‌ ತಮಿಳರ್‌ ಕಚ್ಚಿ ಪಕ್ಷವನ್ನು ಸೇರಿದ್ದಾಗಿ ಅವರು ತಿಳಿಸಿದ್ದಾರೆ.