ಸಾರಾಂಶ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನಸೇವೆ ರಾಜ್ಯದ ಜನರಿಗೆ ತಿಳಿದಿದೆ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಂದ ಕಲಿಯುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಚಿತ್ರದುರ್ಗ : ರಾಜ್ಯದ ಜನರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನಸೇವೆ ಬಗ್ಗೆ ಗೊತ್ತಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಂದ ಕಲಿಯಬೇಕಾದದ್ದು ಏನೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಯಡಿಯೂರಪ್ಪ ಅವರು ವಿರೋಧ ಮಾಡುತ್ತಿದ್ದಾರೆಂಬ ಯತ್ನಾಳ್ ಆರೋಪಕ್ಕೆ ಸೋಮವಾರ ಮಾತನಾಡಿದ ಅವರು, ಈ ವಿಚಾರದಲ್ಲಿ ಹೆಚ್ಚಿಗೆ ಮಾತಾಡಲ್ಲ ಎಂದರು.
ತಿರುಪತಿ ಲಾಡಿನಲ್ಲಿ ಪ್ರಾಣಿಯ ಕೊಬ್ಬು ಮಿಶ್ರಣ ಆಘಾತಕಾರಿ ಮತ್ತು ದುರದೃಷ್ಟಕರ ಬೆಳೆವಣಿಗೆ. ಆಂಧ್ರ ಮತ್ತು ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆಂಧ್ರ ಸರ್ಕಾರದಿಂದ ಕೇಂದ್ರ ಮಾಹಿತಿ ಪಡೆಯುತ್ತಿದೆ. ಆಂಧ್ರ ಸರ್ಕಾರ ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.