ವಿಶ್ವನಾಥ್‌ಗೆ ಇನ್ನೂ ಬುದ್ಧಿ ಬಂದಿಲ್ಲ ಅನ್ನಿಸುತ್ತಿದೆ : ತನ್ವೀರ್ ಸೇಠ್

| Published : Apr 05 2024, 01:08 AM IST / Updated: Apr 05 2024, 04:37 AM IST

Thanveer Sait
ವಿಶ್ವನಾಥ್‌ಗೆ ಇನ್ನೂ ಬುದ್ಧಿ ಬಂದಿಲ್ಲ ಅನ್ನಿಸುತ್ತಿದೆ : ತನ್ವೀರ್ ಸೇಠ್
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಪರಿಷತ್ತು ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಆಲ್ ಇಂಡಿಯಾ ಟೂರ್ ಹೊಡೆದು ಬಂದ್ರು ಇನ್ನೂ ಬುದ್ಧಿ ಬಂದಿಲ್ಲ ಅನ್ಸುತ್ತೇ. ಅವರು ಮೊದಲು ಯಾವ ಪಕ್ಷದಲ್ಲಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ತನ್ವೀರ್ ಸೇಠ್ ಕುಟುಕಿದರು.

 ಮೈಸೂರು :  ವಿಧಾನಪರಿಷತ್ತು ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಆಲ್ ಇಂಡಿಯಾ ಟೂರ್ ಹೊಡೆದು ಬಂದ್ರು ಇನ್ನೂ ಬುದ್ಧಿ ಬಂದಿಲ್ಲ ಅನ್ಸುತ್ತೇ. ಅವರು ಮೊದಲು ಯಾವ ಪಕ್ಷದಲ್ಲಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ತನ್ವೀರ್ ಸೇಠ್ ಕುಟುಕಿದರು.

ರಾಜವಂಶಸ್ಥ ಯದುವೀರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂಬ ಎಚ್.ವಿಶ್ವನಾಥ್ ಹೇಳಿಕೆಗೆ ಮೈಸೂರಿನಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಅವರಿಗೆ ವಯಸ್ಸಿನ ಸಮಸ್ಯೆ, ಹೀಗಾಗಿ ಏನೇನೋ ಮಾತನಾಡುತ್ತಾರೆ. ಅವರ ಮಾತಿನ ಮೇಲೆ ಅವರಿಗೇ ಗಮನ ಇರೋದಿಲ್ಲ ಎಂದರು.

ಅವಿರೋಧವಾಗಿ ಹೇಗೆ ಆಯ್ಕೆ ಮಾಡೋಕೆ ಆಗುತ್ತೇ? ಈಗಾಗಲೇ 15 ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಉಮೇದುವಾರಿಕೆ ವಾಪಸ್ ಪಡೆದರೂ ಅವಿರೋಧವಾಗಿ ಆಯ್ಕೆ ಮಾಡಿದಾಗೆ ಆಗುತ್ತಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅನ್ನೋದು ಒಂದು ಪ್ರಕ್ರಿಯೆಯಾಗಿ ನಡೆಯಬೇಕು. ಎಚ್. ವಿಶ್ವನಾಥ್ ಅವರ ಹೇಳಿಕೆಯಿಂದ ನಮಗೆ ಏನು ಹಿನ್ನಡೆ ಆಗುವುದಿಲ್ಲ. ‌ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗೆಲುವಿನ ವಾತಾವರಣ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.