ಮತದಾನ ಪ್ರಜಾಪ್ರಭುತ್ವದ ಸುಂದರ ಪ್ರಕ್ರಿಯೆ: ಮಮತಾ

| Published : Apr 21 2024, 02:31 AM IST / Updated: Apr 21 2024, 04:19 AM IST

ಸಾರಾಂಶ

ಮತದಾನ ಪ್ರಜಾಪ್ರಭುತ್ವದ ಒಂದು ಸುಂದರ ಪ್ರಕ್ರಿಯೆಯಾಗಿದ್ದು, ಎಲ್ಲರೂ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಬಿಬಿಎಂಪಿ ಯಲಹಂಕ ವಲಯದ ಉಪ ಆಯುಕ್ತೆ ಡಾ। ಬಿ.ಕೆ.ಮಮತಾ ಜನತೆಗೆ ಸಲಹೆ ನೀಡಿದರು.

 ಯಲಹಂಕ :  ಮತದಾನ ಪ್ರಜಾಪ್ರಭುತ್ವದ ಒಂದು ಸುಂದರ ಪ್ರಕ್ರಿಯೆಯಾಗಿದ್ದು, ಎಲ್ಲರೂ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಬಿಬಿಎಂಪಿ ಯಲಹಂಕ ವಲಯದ ಉಪ ಆಯುಕ್ತೆ ಡಾ। ಬಿ.ಕೆ.ಮಮತಾ ಜನತೆಗೆ ಸಲಹೆ ನೀಡಿದರು.

ಬೆಂಗಳೂರು ಜಿಲ್ಲಾ ಹಾಗೂ ಉತ್ತರ ತಾಲೂಕು ಸ್ವೀಪ್ ಸಮಿತಿ ಸಹಭಾಗಿತ್ವದಲ್ಲಿ ಯಲಹಂಕ ಮತ್ತು ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್ಮೆಂಟ್ ನಿವಾಸಿಗಳು ಮತ್ತು ವಿವಿಧ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳಿಗೆ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವ ಸಲುವಾಗಿ ಯಲಹಂಕದ ಅಂಬೇಡ್ಕರ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಚುನಾವಣೆಯ ಪ್ರತಿಜ್ಞಾ ವಿಧಿ ಭೋದಿಸಿದರು. ಯಲಹಂಕ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಅಪೂರ್ವ ಎ.ಕುಲಕರ್ಣಿ, ಎಆರ್‌ಒ ಎನ್‌.ಶ್ರೀನಿವಾಸ ಮೂರ್ತಿ, ಸಹಾಯಕ ನಿರ್ದೇಶಕ ಅಮರಯ್ಯ, ಜಿಲ್ಲಾ ಐಇಸಿ ಸಂಯೋಜಕ ಎನ್‌.ನವೀನ್ ಬಾಬು, ಟಿಎಂಐಎಸ್ ಮಹಮದ್ ರಫಿ ಇದ್ದರು.