ಸಾರಾಂಶ
ರಾಜಕೀಯದಲ್ಲಿ ಇಂತಹ ಷಡ್ಯಂತ್ರ ಹಾಗೂ ಸವಾಲುಗಳು ಸಹಜ. ಸಮರ್ಥವಾಗಿ ಎದುರಿಸಿ ಹೊರಬನ್ನಿ. ಹೈಕಮಾಂಡ್ ನಿಮ್ಮ ಜತೆಯಿದೆ’ ಎಂದು ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಬೆಂಗಳೂರು : ‘ರಾಜಕೀಯದಲ್ಲಿ ಇಂತಹ ಷಡ್ಯಂತ್ರ ಹಾಗೂ ಸವಾಲುಗಳು ಸಹಜ. ಸಮರ್ಥವಾಗಿ ಎದುರಿಸಿ ಹೊರಬನ್ನಿ. ಹೈಕಮಾಂಡ್ ನಿಮ್ಮ ಜತೆಯಿದೆ’ ಎಂದು ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಗೆ ನಡೆಸುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ರಾಹುಲ್‌ಗಾಂಧಿ ಅವರು ದೂರವಾಣಿ ಕರೆ ಮಾಡಿ ಮಾತನಾಡಿದರು ಎನ್ನಲಾಗಿದೆ.
ಈ ವೇಳೆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚೆಯಾಗಿದೆ. ಮುಂದಿನ ಕಾನೂನು ಹೋರಾಟ ಏನೇ ಆಗಿದ್ದರೂ ನಿಮ್ಮ ಜತೆ ಹೈಕಮಾಂಡ್ ಇರಲಿದೆ. ಧೈರ್ಯವಾಗಿ ಹೋರಾಟ ಮುಂದುವರೆಸಿ. ಸಮರ್ಥವಾಗಿ ನಿಭಾಯಿಸಿ ಹೊರಬನ್ನಿ ಎಂದು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.