ಚೀನಾ ಭಾರತ ಪ್ರವೇಶಿಸಿದ ವೇಳೆ ಮೋದಿ ನಿದ್ದೆ : ಖರ್ಗೆ

| Published : Apr 05 2024, 01:03 AM IST / Updated: Apr 05 2024, 04:59 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರೆ ಸೇವಿಸಿ ನಿದ್ರೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಲೇವಡಿ ಮಾಡಿದ್ದಾರೆ.

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರೆ ಸೇವಿಸಿ ನಿದ್ರೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಲೇವಡಿ ಮಾಡಿದ್ದಾರೆ. 

ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಯೋಚಿಸದೇ ಗಾಂಧಿ ಕುಟುಂಬವನ್ನು ನಿಂದಿಸುತ್ತಾರೆ. 56 ಇಂಚಿನ ಎದೆಯಿದೆ, ಹೆದರುವುದಿಲ್ಲ ಎಂದು ಮೋದಿ ಹೇಳುತ್ತಾರೆ. 

ನಿಮಗೆ ಭಯವಿಲ್ಲದಿದ್ದರೆ ನಮ್ಮ ಭೂಮಿಯನ್ನು ಚೀನಾಕ್ಕೆ ಏಕೆ ಬಿಟ್ಟಿದ್ದೀರಿ. ಅವರು ಒಳಗೆ ಬರುತ್ತಿದ್ದಾರೆ, ನೀವು ಮಲಗುತ್ತಿದ್ದೀರಿ. ನಿದ್ರೆಮಾತ್ರೆ ತೆಗೆದುಕೊಂಡಿದ್ದೀರಾ? ಮೋದಿ ಯಾವಾಗಲೂ ಸುಳ್ಳು ಹೇಳುತ್ತಿರುತ್ತಾರೆ ಸುಳ್ಳುಗಾರರ ಸರದಾರ ಎಂದು ಹೇಳಿದರು.