ಉದ್ದವ್ ಬಲಿಪಶು, ದ್ರೋಹ ಮಾಡುವವರು ಹಿಂದುಗಳಲ್ಲ ಎಂದ ಶಂಕರಾಚಾರ್ಯರಿಗೆ ಕಂಗನಾ ಟಾಂಗ್

| Published : Jul 19 2024, 01:01 AM IST / Updated: Jul 19 2024, 04:42 AM IST

ಸಾರಾಂಶ

‘ಉದ್ದವ್ ಠಾಕ್ರೆ ದ್ರೋಹದ ಬಲಿಪಶು. ದ್ರೋಹ ಮಾಡುವವರು ಹಿಂದುಗಳಲ್ಲ’ ಎಂದು ಬದರಿ ಶಂಕರಾಚಾರ್ಯರು ಇತ್ತೀಚಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಉದ್ದೇಶಿಸಿ ನೀಡಿದ್ದ ಹೇಳಿಕೆಗೆ ಬಿಜೆಪಿ ಸಂಸದೆ , ನಟಿ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ.

44444444444444: ‘ಉದ್ದವ್ ಠಾಕ್ರೆ ದ್ರೋಹದ ಬಲಿಪಶು. ದ್ರೋಹ ಮಾಡುವವರು ಹಿಂದುಗಳಲ್ಲ’ ಎಂದು ಬದರಿ ಶಂಕರಾಚಾರ್ಯರು ಇತ್ತೀಚಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಉದ್ದೇಶಿಸಿ ನೀಡಿದ್ದ ಹೇಳಿಕೆಗೆ ಬಿಜೆಪಿ ಸಂಸದೆ , ನಟಿ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ. ‘ರಾಜಕಾರಣಿಗಳು ರಾಜಕೀಯದಲ್ಲಿ ರಾಜಕಾರಣದ ಮಾಡದೇ ಪಾನಿಪುರಿ ಮಾರಬೇಕೆ?’ ಎಂದಿದ್ದಾರೆ.

ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಂಗನಾ‘ ‘ ರಾಜಕಾರಣದಲ್ಲಿ ಮೈತ್ರಿ, ಒಪ್ಪಂದಗಳು, ಮತ್ತು ಪಕ್ಷದ ವಿಭಜನೆ ಹೊಂದಿರುವುದು ತೀರಾ ಸಾಮಾನ್ಯವಾಗಿದೆ ಮತ್ತು ಸಂವಿಧಾನಾತ್ಮಕವಾಗಿದೆ. ಕಾಂಗ್ರೆಸ್‌ ಪಕ್ಷವು 1907ರಲ್ಲಿ ವಿಭಜನೆಯಾಯಿತು. 1971ರಲ್ಲಿ ಮತ್ತೊಮ್ಮೆ ವಿಭಜನೆ ಆಯಿತು. ರಾಜಕಾರಣಿಗಳು ರಾಜಕೀಯದಲ್ಲಿ ರಾಜಕಾರಣದ ಮಾಡದೇ, ಪಾನಿಪುರಿ ಮಾರಬೇಕೆ?’ ಎಂದು ಬರೆದುಕೊಂಡಿದ್ದಾರೆ.

ಬದರಿ ಶಂಕರಾಚಾರ್ಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿರುವ ಕಂಗನಾ ‘ಶಂಕರಾಚಾರ್ಯ ಜೀ ಅವರು ತಮ್ಮ ಪದಗಳನ್ನು, ಪ್ರಭಾವವನ್ನು, ಧಾರ್ಮಿಕ ಶಿಕ್ಷಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ರಾಜನು ತನ್ನ ಪ್ರಜೆಗಳನ್ನು ಶೋಷಿಸಲು ಪ್ರಾರಂಭಿಸಿದರೆ ದೇಶದ್ರೋಹವು ಅಂತಿಮ ಧರ್ಮವೆಂದು ಧರ್ಮವೂ ಹೇಳುತ್ತದೆ. ಏಕನಾಥ್ ಶಿಂಧೆಯವರನ್ನು ದ್ರೋಹಿ ಎಂದು ಕರೆದಿರುವುದು ನಮ್ಮೆಲ್ಲರ ಮನಸ್ಸನ್ನು ಘಾಸಿಗೊಳಿಸಿದೆ’ ಎಂದಿದ್ದಾರೆ.