ಪ್ರಜಾತಂತ್ರ ಉಳಿಸಲು ಕಾಂಗ್ರೆಸ್‌ ಗೆಲ್ಲಿಸಿ : ಸಿಎಂ

| Published : Apr 07 2024, 01:49 AM IST / Updated: Apr 07 2024, 04:53 AM IST

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದೇ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ ಪ್ರಚಾರ ಪ್ರಾರಂಭಿಸಿದ ಕಾರಣ ಕಾಂಗ್ರೆಸ್‌ ೧೩೬ ಸೀಟುಗಳನ್ನು ಗೆಲ್ಲಲ್ಲು ಅನುಕೂಲವಾಯಿತೆಂಬ ನಂಬಿಕೆಯಿಂದ ಮತ್ತೆ ಇಲ್ಲಿಂದಲೇ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದೆ

 ಕೋಲಾರ : ಕೋಲಾರದ ಮೂಡಣಬಾಗಿಲು ಮುಳಬಾಗಿಲು ತಾಲೂಕಿನ ಕುರುಡುಮಲೆ ಶ್ರೀ ವಿನಾಯಕನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿ ಪೂಜೆ ಸಲ್ಲಿಸಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು.ಬೆಂಗಳೂರಿನಿಂದ ಜಾಲಪ್ಪ ಆಸ್ಪತ್ರೆ ಆವರಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿ ಅಲ್ಲಿಂದ ಕಾಂಗ್ರೆಸ್ ಪ್ರಚಾರದ ‘ಪ್ರಜಾಧ್ವನಿ’ ಬಸ್ಸಿನಲ್ಲಿ ಕುರುಡುಮಲೆ ದೇವಸ್ಥಾನಕ್ಕೆ ೧೧ ಗಂಟೆಯ ಬದಲಾಗಿ ೧೨ ಗಂಟೆಗೆ ಆಗಮಿಸಿ ಪೂಜೆ ಸಲ್ಲಿಸಿದರು. ಅವರ ಜೊತೆಯಲ್ಲಿ ಹಲವಾರು ಕಾಂಗ್ರೆಸ್ ನಾಯಕರು, ಜಿಲ್ಲಾ ನಾಯಕರು, ಶಾಸಕರು ಆಗಮಿಸಿದ್ದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದೇ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ ಪ್ರಚಾರ ಪ್ರಾರಂಭಿಸಿದ ಕಾರಣ ೧೩೬ ಸೀಟುಗಳನ್ನು ಗೆಲ್ಲಲ್ಲು ಅನುಕೂಲವಾಯಿತು ಆದಕಾರಣ ಮತ್ತೆ ಇಲ್ಲಿಂದಲೇ ಲೋಕಸಭಾ ಚುನಾವಣಾ ಪ್ರಚಾರ ಮಾಡುತ್ತಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ಪ್ರಜಾತಂತ್ರ ಉಳಿಸಲು ಕಾಂಗ್ರೆಸ್‌ ಗೆಲ್ಲಸಿ

ಪ್ರಜಾಪ್ರಭುತ್ವ ಉಳಿವಿಗಾಗಿ ಕಾಂಗ್ರೆಸ್ಸನ್ನು ಗೆಲ್ಲಿಸಬೇಕಾಗಿದೆ. ರಾಜ್ಯದಲ್ಲಿನ ಗ್ಯಾರಂಟಿಗಳು ನಿಲ್ಲುವುದಿಲ್ಲ, ಗ್ಯಾರಂಟಿಗಳ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆ ಜೆಡಿಎಸ್‌ಗೆ ಇಲ್ಲ, ರಾಜ್ಯದಲ್ಲಿ ಜ್ಯಾತ್ಯತೀತ ಪಕ್ಷ ಕಾಂಗ್ರೆಸ್ ಮಾತ್ರ, ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ೨ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

ಮಾಜಿ ಸ್ವೀಕರ್ ರಮೇಶ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಆರೋಗ್ಯ ಸಮಸ್ಯೆಯಿಂದ ಪ್ರಚಾರದಿಂದ ದೂರವಿದ್ದೇ ಇಂದಿನಿಂದ ಪ್ರಚಾರದಲ್ಲಿ ಭಾಗವಹಿಸಲು ಆಗಮಿಸಿದ್ದೇನೆ, ಕೋಲಾರದಲ್ಲಿ ಯಾವ ಗುಂಪುಗಳಿಲ್ಲ, ದೇಶ ಮತ್ತು ಸಂವಿಧಾನ ಉಳಿಗಾಗಿ ಕಾಂಗ್ರೆಸ್ ಗೆಲ್ಲಬೇಕಾಗಿದೆ. ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದರು.

ಯಾವ ಗುಂಪುಗಾರಿಕೆಯೂ ಇಲ್ಲ

ಕೆ.ಹೆಚ್.ಮುನಿಯಪ್ಪ ಮತ್ತು ನಿಮ್ಮ ಮಧ್ಯ ಇರುವ ಗುಂಪುಗಾರಿಕೆ ಬಗ್ಗೆ ಪ್ರಶ್ನೆಗೆ ಯಾವ ಗುಂಪುಗಾರಿಕೆ ಇಲ್ಲ ಎಲ್ಲರೂ ಸೇರಿ ಕಾಂಗ್ರೆಸ್ ಗೆಲ್ಲಿಸಿದರೆ ಮಾತ್ರ ಕಾಂಗ್ರೆಸ್ ಉಳಿಯಲು ಸಾಧ್ಯ ಎಂದರು. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಉತ್ತರಿಸಿ ಅದು ಅವರಿಗೆ ಸಂಬಂಧಿಸಿದ ವಿಷಯ ನಮ್ಮದೇನಿದ್ದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸುವುದೇ ನಮ್ಮ ಗುರಿ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕರ್ನಾಟಕದಲ್ಲಿ ಈಗಿನ ಪರಿಸ್ಥಿತಿಯಲ್ಲಿ 20 ಸ್ಥಾನಗಳನ್ನು ಗೆಲ್ಲುತ್ತೇವೆ, ಮುಂದೆ ಚುನಾವಣೆ ಪ್ರಚಾರ ಜೋರಾದ್ದಂತೆ ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲ್ಲೂ ಬಹುದು, ಜೆಡಿಎಸ್ ಬಿಜೆಪಿ ಜೊತೆ ಸೇರಿ ಅಸ್ಥಿತ್ವವನ್ನು ಕಳೆದುಕೊಂಡಿದೆ ಎಂದರು.