ಸಾರಾಂಶ
ಮದ್ಯವನ್ನು ಆನ್‌ಲೈನ್ ಮೂಲಕ ಮಾರಾಟ ಯಾವತ್ತೂ ಮಾಡಿಲ್ಲ, ಅದರ ಸಾಧ್ಯತೆನೂ ಇಲ್ಲ. ಮುಂದೆಯೂ ಮಾಡುವುದಿಲ್ಲ, ನಮ್ಮ ಯೋಚನೆಯಲ್ಲಿ ಆನ್‌ಲೈನ್ ಮಾರಾಟವಿಲ್ಲ.
ಬೀದರ್: ಮದ್ಯವನ್ನು ಆನ್‌ಲೈನ್ ಮೂಲಕ ಮಾರಾಟ ಯಾವತ್ತೂ ಮಾಡಿಲ್ಲ, ಅದರ ಸಾಧ್ಯತೆನೂ ಇಲ್ಲ. ಮುಂದೆಯೂ ಮಾಡುವುದಿಲ್ಲ, ನಮ್ಮ ಯೋಚನೆಯಲ್ಲಿ ಆನ್‌ಲೈನ್ ಮಾರಾಟವಿಲ್ಲ.
ನೋ ಸ್ವಿಗ್ಗಿ, ನೋ ಜೋಮ್ಯಾಟೋ ಯಾವುದೂ ಇಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ ತಿಳಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮದ್ಯದ ದರ ಏರಿಕೆ ಹಾಗೂ ಆನ್‌ಲೈನ್ ಮಾರಾಟ ವಿಚಾರವಾಗಿ ಸ್ಪಷ್ಟನೆ ನೀಡಿ, ಮದ್ಯದ ದರ ಏರಿಕೆ ಆಗಿಲ್ಲ.
ಅಕ್ಕಪಕ್ಕದ ರಾಜ್ಯಕ್ಕೆ ಹೋಲಿಸಿದರೆ ನಾವು ಮದ್ಯ ದರದಲ್ಲಿ ಕಡಿಮೆ ಇದ್ದೇವೆ ಎಂದರು. ಬೇರೆ ರಾಜ್ಯದಿಂದ ಪ್ರಿಮಿಯಮ್ ಬ್ರ‍್ಯಾಂಡ್ ದರದಲ್ಲಿ ಸ್ವಲ್ಪ ಹೆಚ್ಚಿರುವದರಿಂದ ನಮಗೆ ಆದಾಯದ ಹೊಡೆತ ಬೀಳುತ್ತಿದೆ. ಬೇರೆ ರಾಜ್ಯದಲ್ಲಿ ಪ್ರೀಮಿಯಮ್ ಬ್ರ‍್ಯಾಂಡ್ ದರ ಕಡಿಮೆ ಇರುವುದರಿಂದ ಇಲ್ಲಿಗೆ ಆಮದು ಆಗುತ್ತಿದ್ದು, ಇದನ್ನು ತಡೆಗಟ್ಟುತ್ತೇವೆ ಎಂದು ಅವರು ಹೇಳಿದರು.