ತಾಜ್ ಕಟ್ಟಿದ್ದು ಶಹಜಹಾನ್ ಅಲ್ಲ: ಅರ್ಜಿ ಮತ್ತೆ ಎಎಸ್‌ಐ ಅಂಗಳಕ್ಕೆ
KannadaprabhaNewsNetwork | Published : Nov 04 2023, 12:30 AM IST
ತಾಜ್ ಕಟ್ಟಿದ್ದು ಶಹಜಹಾನ್ ಅಲ್ಲ: ಅರ್ಜಿ ಮತ್ತೆ ಎಎಸ್‌ಐ ಅಂಗಳಕ್ಕೆ
ಸಾರಾಂಶ
ವಿಶ್ವವಿಖ್ಯಾತ ಪ್ರೇಮಸೌಧ ತಾಜಮಹಲ್ ನಿರ್ಮಾಣ ಮಾಡಿದ್ದು ಶಹಜಹಾನ್ ಅಲ್ಲ. ಆದರೂ ಇತಿಹಾಸದಲ್ಲಿ ತಪ್ಪು ಮಾಹಿತಿಯನ್ನು ನೀಡಲಾಗಿದೆ.
ರಾಜಾ ಮಾನ್‌ಸಿಂಗ್‌ರಿಂದ ಕಟ್ಟಡ ನಿರ್ಮಾಣ ಎಂದು ವಾದ ಪಿಟಿಐ ನವದೆಹಲಿ ವಿಶ್ವವಿಖ್ಯಾತ ಪ್ರೇಮಸೌಧ ತಾಜಮಹಲ್ ನಿರ್ಮಾಣ ಮಾಡಿದ್ದು ಶಹಜಹಾನ್ ಅಲ್ಲ. ಆದರೂ ಇತಿಹಾಸದಲ್ಲಿ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಅದನ್ನು ಸರಿಪಡಿಸಬೇಕು ಎಂಬ ಬೇಡಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಗೆ ಸೂಚನೆ ನೀಡಿದೆ. ತಾಜಮಹಲ್ ಅನ್ನು ನಿರ್ಮಾಣ ಮಾಡಿದ್ದು ರಾಜಾ ಮಾನ್ ಸಿಂಗ್. ಅದರ ನವೀಕರಣ ಮಾಡಿದ್ದು ಮಾತ್ರ ಶಹಜಹಾನ್. ಆದರೂ ಇತಿಹಾಸದಲ್ಲಿ ತಪ್ಪು ಮಾಹಿತಿ ನಮೂದಾಗಿದೆ ಎಂದು ಸುರ್ಜಿತ್ ಸಿಂಗ್ ಯಾದವ್ ಅವರು ಈ ಹಿಂದೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ಎಎಸ್‌ಐ ಮೊರೆ ಹೋಗಲು ನ್ಯಾಯಾಲಯ ಸೂಚಿಸಿತ್ತು. ಈ ವರ್ಷ ಜನವರಿಯಲ್ಲಿ ಅರ್ಜಿದಾರರು ಎಎಸ್ಐಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಪರಿಶೀಲಿಸುವಂತೆ ಎಎಸ್‌ಐಗೆ ನಿರ್ದೇಶಿಸಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಗೊಳಿಸಿದೆ.