ಬೆಂಗಳೂರು : 5 ವರ್ಷದಿಂದ ಹೊಟ್ಟೆಯಲ್ಲಿದ್ದ ಮೀನಿನ 2 ಸೆಂ.ಮೀ. ಮೂಳೆ ತೆಗೆದ ಫೋರ್ಟಿಸ್‌ ವೈದ್ಯರು

| Published : Oct 29 2024, 01:52 AM IST / Updated: Oct 29 2024, 08:34 AM IST

hilsa fish

ಸಾರಾಂಶ

ಕಳೆದ ಐದು ವರ್ಷದಿಂದ ಹೊಟ್ಟೆಯಲ್ಲಿ ಸಿಲುಕಿದ್ದ ಮೀನಿನ 2 ಸೆಂಟಿ ಮೀಟರ್‌ ಮೂಳೆಯನ್ನು ಯಶಸ್ವಿಯಾಗಿ ಹೊರತೆಗೆದಿರುವ ಮೂಲಕ ಯಾತನೆ ಅನುಭವಿಸುತ್ತಿದ್ದ 61 ವರ್ಷದ ವ್ಯಕ್ತಿಯನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಗುಣಪಡಿಸಿದೆ.

 ಬೆಂಗಳೂರು : ಕಳೆದ ಐದು ವರ್ಷದಿಂದ ಹೊಟ್ಟೆಯಲ್ಲಿ ಸಿಲುಕಿದ್ದ ಮೀನಿನ 2 ಸೆಂಟಿ ಮೀಟರ್‌ ಮೂಳೆಯನ್ನು ಯಶಸ್ವಿಯಾಗಿ ಹೊರತೆಗೆದಿರುವ ಮೂಲಕ ಯಾತನೆ ಅನುಭವಿಸುತ್ತಿದ್ದ 61 ವರ್ಷದ ವ್ಯಕ್ತಿಯನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಗುಣಪಡಿಸಿದೆ.

ಹೊನ್ನಾವರದ ಶ್ರೀನಿವಾಸನ್ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಐದು ವರ್ಷದ ಹಿಂದೆ ಮೀನು ಸೇವಿಸುವಾಗ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿ, ಬಳಿಕ ಹೊಟ್ಟೆ ಸೇರಿತ್ತು. ಅವರು ಖಾಸಗಿ ಆಸ್ಪತ್ರೆಗೆ ಹೋಗಿ ಒಂದು ಮೂಳೆ ತೆಗೆಸಿಕೊಂಡಿದ್ದರು. ಆದರೆ ಮತ್ತೊಂದು ಮೂಳೆ ಇರುವುದು ಅವರಿಗೆ ತಿಳಿದಿರಲಿಲ್ಲ. ಪೂರ್ತಿ ಮೂಳೆ ತೆಗೆಯದ ಕಾರಣ, 2 ಸೆಂ.ಮೀ ಉದ್ದದ ಮೀನಿನ ಮೂಳೆ ಹೊಟ್ಟೆಯಲ್ಲೇ ಉಳಿದಿತ್ತು. ಪರಿಣಾಮ ಐದು ವರ್ಷದಿಂದ ಹೊಟ್ಟೆನೋವು ಅನುಭವಿಸುತ್ತಿದ್ದರು. ಬಳಿಕ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾಗಿದ್ದರು.

ಚಿಕಿತ್ಸೆ ಬಗ್ಗೆ ವಿವರ ನೀಡಿದ ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್, ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೂಳೆಯನ್ನು ತೆಗೆಯಲಾಗಿದ್ದು, ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಶಸ್ತ್ರಚಿಕಿತ್ಸೆ ವೇಳೆ ಕಂಡುಬಂದ ಪಿತ್ತಕೋಶದ ಕಾಯಿಲೆ, ಹೊಕ್ಕುಳಿನ ಅಂಡವಾಯು ಸಮಸ್ಯೆಗೂ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.