ಸಾರಾಂಶ
ಬೆಂಗಳೂರು : ಅಡಿಗಾಸ್ ಯಾತ್ರಾ ಸಂಸ್ಥೆಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ 30 ವರ್ಷ ಪೂರ್ಣಗೊಳಿಸಿ ಸಾಧನೆಯನ್ನು ಆಚರಿಸುವ ಸಲುವಾಗಿ ‘ಪ್ರವಾಸಿಗರ ದಿನ’ ಆಯೋಜಿಸಿತ್ತು.
ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಡಿಗಾಸ್ ಯಾತ್ರಾ ಸಂಸ್ಥಾಪಕ ಕೆ.ನಾಗರಾಜ ಅಡಿಗರು ಮಾತನಾಡಿ, ಆಡಿಗಾಸ್ ಸಂಸ್ಥೆ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಸತತ ಪರಿಶ್ರಮ, ಸೇವಾ ಮನೋಭಾವ ಹಾಗೂ ದಕ್ಷತೆಯ ಮೂಲಕ ಅಡಿಗಾಸ್ ಸಂಸ್ಥೆ ಮನೆಮಾತಾಗಿದೆ. ನಂಬಿಕೆ ಹಾಗೂ ವಿಶ್ವಾಸ ನಮ್ಮ ಧ್ಯೇಯವಾಗಿದೆ. ನಿಮ್ಮೆಲ್ಲರ ಸಹಕಾರ ಹಾಗೂ ಪ್ರೋತ್ಸಾಹವನ್ನು ಸದಾ ಬಯಸುತ್ತೇನೆ ಎಂದು ಹೇಳಿದರು.
ಕಳೆದ ವಾರ ಧರ್ಮಸ್ಥಳ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ ಅವರು 31ನೇ ವರ್ಷದ ಪ್ರಯುಕ್ತ ಅಡಿಗಾಸ್ ಯಾತ್ರಾ ಪ್ರಕಟಿಸಿರುವ ‘ಯಾತ್ರ 2025’ ಪ್ರವಾಸಿ ಕೈಪಿಡಿಯನ್ನು ಬಿಡುಗಡೆಗೊಳಿಸಿದ್ದಾರೆ. ಈ ಕೈಪಿಡಿಯಲ್ಲಿ 500ಕ್ಕೂ ಅಧಿಕ ವೈವಿಧ್ಯಮಯ ಪ್ರವಾಸಿ ಸ್ಥಾನಗಳ ಸಂಪೂರ್ಣ ವಿಷಯ ಒಳಗೊಂಡಿದೆ ಎಂದು ತಿಳಿಸಿದರು.
ಗಾಯಕ ಹರ್ಷ ಅವರಿಂದ ‘ಸಂಗೀತ ಸಂಜೆ’ ಏರ್ಪಡಿಸಲಾಗಿತ್ತು. ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಹಾಸ್ಯ ಬರಹಗಾರ ಎಸ್. ಎನ್. ನರಸಿಂಹಮೂರ್ತಿ ಇದ್ದರು.