ಸಾರಾಂಶ
ಎಕ್ಸ್ (ಟ್ವೀಟರ್)ನಲ್ಲಿ ಯಾವುದೇ ಸುದ್ದಿ ಕಾಣಿಸಿದರೆ ಸಾಕು, ಕಾಮೆಂಟ್ ಸೆಕ್ಷನ್ ಅಲ್ಲಿ ‘ಗ್ರೊಕ್ ಇದು ಕರೆಕ್ಟಾ?’ ಅಂತ ಕೇಳಿ ಕನ್‌ಫರ್ಮ್ ಮಾಡಿಕೊಂಡು ನಂಬೋ ಕಾಲ ಇದು. ಹೀಗಿರುವಾಗ ನಮ್ಮ ಪರ್ಸ್ ತುಂಬಿಸೋದು, ಹಣಕಾಸಿನ ಪ್ಲಾನ್‌ಗಳ ಬಗ್ಗೆ ಎಐ ಹತ್ರ ಕೇಳದೇ ಮುಂದುವರಿಯೋದಕ್ಕಾಗುತ್ತಾ
ಎಕ್ಸ್ (ಟ್ವೀಟರ್)ನಲ್ಲಿ ಯಾವುದೇ ಸುದ್ದಿ ಕಾಣಿಸಿದರೆ ಸಾಕು, ಕಾಮೆಂಟ್ ಸೆಕ್ಷನ್ ಅಲ್ಲಿ ‘ಗ್ರೊಕ್ ಇದು ಕರೆಕ್ಟಾ?’ ಅಂತ ಕೇಳಿ ಕನ್‌ಫರ್ಮ್ ಮಾಡಿಕೊಂಡು ನಂಬೋ ಕಾಲ ಇದು. ಹೀಗಿರುವಾಗ ನಮ್ಮ ಪರ್ಸ್ ತುಂಬಿಸೋದು, ಹಣಕಾಸಿನ ಪ್ಲಾನ್‌ಗಳ ಬಗ್ಗೆ ಎಐ ಹತ್ರ ಕೇಳದೇ ಮುಂದುವರಿಯೋದಕ್ಕಾಗುತ್ತಾ.. ನಿಮ್ಮ ಹಣ ನಿರ್ವಹಣೆಗೆ ಬೆಸ್ಟ್ ಸಲಹೆಗಾರರಂತಿರುವ 10 ಎಐ ಟೂಲ್‌ಗಳು ಇಲ್ಲಿವೆ.
1. ಕಾಮಿಡಿಯಾಗಿ ಹಣ ಜೋಪಾನ ಮಾಡೋ ಕ್ಲಿಯೋ
ಕ್ಲಿಯೋ (Cleo) ಎಂಬ ಚಾಟ್‌ಬಾಟ್ ನಿಮಗೆ ಹಾಸ್ಯ ಮತ್ತು ತಮಾಷೆಯ ಮೂಲಕ ಹಣಕಾಸು ನಿಯಂತ್ರಣ ಕಲಿಸುತ್ತದೆ. ಇದು ನಿಮ್ಮ ದೈನಂದಿನ ಖರ್ಚುಗಳನ್ನು ಟ್ರ್ಯಾಕ್ ಮಾಡಿ ಸಣ್ಣ ಉಳಿತಾಯ ಸವಾಲುಗಳನ್ನು ನೀಡುತ್ತದೆ. ಹಣದ ನಿರ್ವಹಣೆ ಅಂದರೆ ಟೆನ್ಶನ್, ಒತ್ತಡ ಅನ್ನೋದನ್ನೆಲ್ಲ ಸೈಡಿಗಿಟ್ಟು ಈ ಬಾಟ್ ಹೇಳಿದಂತೆ ಕೇಳಿ ಹಣ ಉಳಿಸಬಹುದು.
2. ಕುಟುಂಬ ನಿರ್ವಹಣೆಗೆ ಮೊನಾರ್ಕ್ ಮನಿ
ಮನಿ ಮ್ಯಾಟರ್ ಜೊತೆಗೆ ಮನೆ ಮ್ಯಾಟರ್‌ನಲ್ಲೂ ಮೂಗು ತೂರಿಸುವ ಎಐ ಟೂಲ್ ಇದು. ಕುಟುಂಬ ಸದಸ್ಯರು ಒಟ್ಟಾಗಿ ಮಾಡಿದ ಖರ್ಚು, ಹೂಡಿಕೆ, ಗುರಿ ಇತ್ಯಾದಿಗಳನ್ನು ಇದು ಟ್ರ್ಯಾಕ್ ಮಾಡುತ್ತದೆ. ಯಾರು ಎಷ್ಟು ಖರ್ಚು ಮಾಡಿದ್ದಾರೆ ಅನ್ನೋದನ್ನು ತೋರಿಸೋ ಜೊತೆಗೆ ಹಣ ಉಳಿತಾಯದ ಟ್ರಿಕ್‌ಗಳನ್ನೂ ಕಲಿಸುತ್ತೆ.
3. ಜಾಸ್ತಿ ಖರ್ಚು ಮಾಡದಂತೆ ತಡೆಯುವ ವೈಎನ್‌ಎಬಿ
ಹಣದ ಹರಿವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಹಣದ ಪೋಲನ್ನು ತಡೆಯುತ್ತದೆ. ಸಾಲದಿಂದ ದೂರ ಇರಲು ಮತ್ತು ನಿಯಮಿತವಾಗಿ ಉಳಿಸಲು ಸಹಾಯ ಮಾಡುತ್ತದೆ. ಹಣ ಜಾಸ್ತಿ ಖರ್ಚು ಮಾಡೋದು ಗೊತ್ತಾದರೆ ವಾರ್ನ್ ಮಾಡೋ ಎಐ ಟೂಲ್ ಇದು.
4. ಪಾಕೆಟ್‌ಗಾರ್ಡ್
ಕಿಸೆಯ ತೂತಿಗೆ ಹೊಲಿಗೆ ಹಾಕೋ ಎಐ ಪಾಕೆಟ್ ಗಾರ್ಡ್. ನಿಮ್ಮ ಬಿಲ್‌ಗಳು ಮತ್ತು ಉಳಿತಾಯ ಗುರಿಗಳನ್ನು ತೆಗೆದ ನಂತರ ಎಷ್ಟು ಹಣ ಖರ್ಚು ಮಾಡಬಹುದು ಎಂದು ತೋರಿಸುತ್ತದೆ. ಅನಗತ್ಯ ಸಬ್‌ಸ್ಕ್ರಿಪ್ಶನ್‌ಗಳನ್ನು ಗುರುತಿಸಿ, ಅತಿಯಾಗಿ ಖರ್ಚಾಗುವ ಮುನ್ನ ಎಚ್ಚರಿಸುತ್ತದೆ.
5. ಬಿಲ್‌ಗಳನ್ನು ಕಡಿಮೆ ಮಾಡುವ ರಾಕೆಟ್ ಮನಿ
ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳನ್ನು ಪತ್ತೆಹಚ್ಚಿ ತಿಂಗಳ ಬಿಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಯ ಮತ್ತು ಖರ್ಚಿನ ಆಧಾರದ ಮೇಲೆ ಸ್ವಯಂ ಉಳಿತಾಯವನ್ನೂ ಕಲಿಸಿಕೊಡುತ್ತದೆ.
6. ಸ್ಮಾರ್ಟ್ ಹೂಡಿಕೆಗೆ ವೆಲ್ತ್‌ಫ್ರಂಟ್
ಎಕ್ಸ್‌ಚೇಂಜ್ ಟ್ರೇಡ್ ಫಂಡ್‌ನಲ್ಲಿ ಆಸಕ್ತರಾಗಿದ್ದರೆ ಈ ಎಐ ಬಾಟ್‌ನ ಸಹಾಯ ಪಡೆಯಬಹುದು. ಇದು ಹೂಡಿಕೆಯ ಐಡಿಯಾ ಕೊಡುವ ಜೊತೆಗೆ ತೆರಿಗೆ ಉಳಿತಾಯಕ್ಕೂ ಪ್ಲಾನ್ ಮಾಡುತ್ತದೆ.
7. ಮ್ಯಾಗ್ನಿಫೈ
ಇದು ಇಟಿಎಫ್ ಅಂದರೆ ಎಕ್ಸ್‌ಚೇಂಜ್ ಟ್ರೇಡ್ ಫಂಡ್‌ಗಳ ಬಗ್ಗೆ ತೌಲನಿಕ ಅಂದರೆ ಹೋಲಿಸಿ ನೋಡಿ ವಿವರ ನೀಡುತ್ತದೆ. ಈ ಹೂಡಿಕೆಯಲ್ಲಿ ಏನೆಲ್ಲ ರಿಸ್ಕ್‌ಗಳಿವೆ ಅನ್ನೋದನ್ನು ವಿವರಿಸುತ್ತದೆ. ಯಾವುದರಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್ ಅನ್ನೋದನ್ನೂ ಅರ್ಥವಾಗುವಂತೆ ತಿಳಿಸಿಕೊಡುತ್ತದೆ. ಇದು ಹೂಡಿಕೆಗೆ ಸರಳ ಮಾರ್ಗದರ್ಶಿ.
;Resize=(690,390))
)

;Resize=(128,128))
;Resize=(128,128))
;Resize=(128,128))