ಸ್ಯಾಮ್‌ಸಂಗ್‌ ಜನವರಿ- ಮಾರ್ಚ್‌ ತಿಂಗಳಲ್ಲಿ ತನ್ನ ಏಸಿ ಮಾರಾಟ ದುಪ್ಪಟ್ಟಾಗಿದೆ ಎಂದು ತಿಳಿಸಿದೆ. ಆ ಕುರಿತ ವರದಿ ಇಲ್ಲಿದೆಂ.

ಸ್ಯಾಮ್‌ ಸಂಗ್ ಇಂದು 2025ರ ಜನವರಿ ಮತ್ತು ಮಾರ್ಚ್ ನಡುವೆ ತನ್ನ ಏರ್ ಕಂಡೀಷನರ್‌ ಗಳ ಮಾರಾಟ 2 ಪಟ್ಟು ಹೆಚ್ಚಾಗಿದೆ ಎಂದು ಘೋಷಿಸಿದೆ. ಸ್ಯಾಮ್‌ಸಂಗ್‌ ಇದೀಗ 19 ಹೊಸ ಏಸಿ ಮಾಡೆಲ್‌ಗಳನ್ನು ಹೊಂದಿದ್ದು, ಇತ್ತೀಚೆಗೆ ಹೊಸ ಬೀಸ್ಪೋಕ್ ಎಐ ವಿಂಡ್‌ ಫ್ರೀ ಏಸಿ ಬಿಡುಗಡೆ ಮಾಡಿತ್ತು.

ಈ ಬೀಸ್ಪೋಕ್ ಎಐ ವಿಂಡ್‌ ಫ್ರೀ ಏಸಿಗಳ ಬೆಲೆ 32,990 ರೂಪಾಯಿಗಳಿಂದ ಶುರುವಾಗುತ್ತಿದ್ದು, ಅತ್ಯಂತ ದುಬಾರಿ ಮಾಡೆಲ್ ನ ಬೆಲೆ 60,990 ರೂಪಾಯಿಗಳವರೆಗೆ ಇದೆ. ಸ್ಯಾಮ್‌ಸಂಗ್ ಏಸಿಗಳಿಗೆ 5 ವರ್ಷಗಳ ಸಂಪೂರ್ಣ ವಾರಂಟಿ ನೀಡುತ್ತದೆ. ದೇಶದ 19,000+ ಪಿನ್ ಕೋಡ್‌ ಗಳ ಪ್ರದೇಶದಲ್ಲಿ ಉತ್ತಮ ಸರ್ವೀಸ್ ಮತ್ತು ಇನ್ ಸ್ಟಾಲೇಷನ್ ಸೌಲಭ್ಯವನ್ನು ಸ್ಯಾಮ್ ಸಂಗ್ ಗ್ರಾಹಕರಿಗೆ ನೀಡುತ್ತದೆ. ಈ ಕಾರಣದಿಂದಲೇ ಉತ್ತಮ ಮಾರಾಟ ಸಾಧಿಸಿರುವುದಾಗಿ ಸಂಸ್ಥೆ ತಿಳಿಸಿದೆ.

ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್‌ನ ಡಿಜಿಟಲ್ ಅಪ್ಲೈಯನ್ಸಸ್ ಬಿಸಿನೆಸ್ ವಿಭಾಗದ ಉಪಾಧ್ಯಕ್ಷ ಘುಫ್ರಾನ್ ಆಲಂ ಅವರು, ‘ನಾವು ಮಾರ್ಚ್ ತ್ರೈಮಾಸಿಕದಲ್ಲಿ 2 ಪಟ್ಟು ಬೆಳವಣಿಗೆ ಸಾಧಿಸಿದ್ದೇವೆ. ಇದರಿಂದ ನಮಗೆ ಶೇ.10ರಷ್ಟು ಮಾರುಕಟ್ಟೆ ಪಾಲು ಸಿಕ್ಕಿದೆ ಎಂದು ನಮ್ಮ ಆಂತರಿಕ ಲೆಕ್ಕದಿಂದ ತಿಳಿದುಬಂದಿದೆ. ಈ ವರ್ಷ ನಾವು 19 ಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದ್ದೇವೆ. ಇವು ಉತ್ತಮ ಕೂಲಿಂಗ್, ಇಂಧನ ಉಳಿತಾಯ, ದೀರ್ಘ ಬಾಳಿಕೆ ಮತ್ತು ಭವಿಷ್ಯ ಸಿದ್ಧ ವಿನ್ಯಾಸವನ್ನು ಒಳಗೊಂಡಿವೆ. ನಮ್ಮ ಹೊಸ ಬೀಸ್ಪೋಕ್ ಎಐ ವಿಂಡ್‌ ಫ್ರೀ ಏಸಿಗಳು ಗ್ರಾಹಕರ ವರ್ತನೆಗಳನ್ನು ಗಮನಿಸುತ್ತವೆ, ಅವರು ಮನೆಯಲ್ಲಿದ್ದಾರೆಯೇ, ಮಲಗಿದ್ದಾರೆಯೇ, ಅಥವಾ ಬಿಸಿಲಿನಿಂದ ಬಂದಿದ್ದಾರೆಯೇ ಎಂದು ಆ ಏಸಿಗಳು ಅರಿತುಕೊಳ್ಳುತ್ತವೆ. ಈ ಗಮನಿಸುವಿಕೆಯ ಆಧಾರದ ಮೇಲೆ ಏಸಿ ತನ್ನ ಸೆಟ್ಟಿಂಗ್‌ ಗಳನ್ನು ಬದಲಾಯಿಸಿ ಗ್ರಾಹಕರಿಗೆ ಉತ್ತಮ ಕೂಲಿಂಗ್ ವ್ಯವಸ್ಥೆ ಒದಗಿಸುತ್ತದೆ’ ಎಂದು ಹೇಳಿದರು.

ಸ್ಯಾಮ್‌ಸಂಗ್ ತನ್ನ ವಿತರಣಾ ಜಾಲವನ್ನು ಶೇ.40ರಷ್ಟು ಹೆಚ್ಚಿಸಿದೆ ಮತ್ತು ರೂಮ್ ಏರ್ ಕಂಡೀಷನರ್ ಖರೀದಿಗೆ ಝೀರೋ ಕಾಸ್ಟ್ ಇಎಂಐ ಸೌಲಭ್ಯ ಒದಗಿಸಲು ಪ್ರಮುಖ ಆರ್ಥಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ.