ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ : ಆದಾಯಕ್ಕಾಗಿ ಬಸ್‌ ಸುತ್ತ ಜಾಹೀರಾತು ಪ್ರದರ್ಶನ

| Published : Nov 28 2024, 01:00 AM IST / Updated: Nov 28 2024, 05:59 AM IST

BMTC

ಸಾರಾಂಶ

ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ ಆದಾಯದ ಮೂಲಗಳನ್ನು ಹೆಚ್ಚಿಸಲು 3000 ಬಸ್‌ಗಳಲ್ಲಿ ಸಂಪೂರ್ಣ ಸುತ್ತುವರಿದಂತೆ ಜಾಹೀರಾತು ಪ್ರದರ್ಶನಕ್ಕೆ ಅನುಮತಿಸಲು ಮುಂದಾಗಿದೆ.

 ಬೆಂಗಳೂರು : ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ ಆದಾಯದ ಮೂಲಗಳನ್ನು ಹೆಚ್ಚಿಸಲು 3000 ಬಸ್‌ಗಳಲ್ಲಿ ಸಂಪೂರ್ಣ ಸುತ್ತುವರಿದಂತೆ ಜಾಹೀರಾತು ಪ್ರದರ್ಶನಕ್ಕೆ ಅನುಮತಿಸಲು ಮುಂದಾಗಿದೆ.

ಸದ್ಯ ಬಿಎಂಟಿಸಿಗೆ ಪ್ರಯಾಣ ದರದ ಜತೆಗೆ ವಾಣಿಜ್ಯ ಮಳಿಗೆಗಳು, ಬಸ್‌ಗಳ ಹಿಂಭಾಗದಲ್ಲಿ ಜಾಹೀರಾತು ಪ್ರದರ್ಶನದಿಂದಲೂ ಆದಾಯಗಳಿಸುತ್ತಿದೆ. ಆದರೆ, ಅದನ್ನು ಮತ್ತಷ್ಟು ಹೆಚ್ಚಿಸಲು ನಿಗಮದ ಆರು ಸಾವಿರಕ್ಕೂ ಹೆಚ್ಚಿನ ಬಸ್‌ಗಳ ಪೈಕಿ 3000 ಹವಾನಿಯಂತ್ರಿತವಲ್ಲದ ಬಸ್‌ಗಳಲ್ಲಿ ಹೊಸ ಬಗೆಯಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲು ಮುಂದಾಗಿದೆ.

ಈವರೆಗೆ ಬಸ್‌ಗಳ ಹಿಂಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಇನ್ನು ಮುಂದೆ ಬಸ್‌ಗಳ ಮುಂದಿನ ಮತ್ತು ಹಿಂಭಾಗದ ಗಾಜುಗಳನ್ನು ಹೊರತುಪಡಿಸಿ ಉಳಿದ ಎಲ್ಲ ಭಾಗದಲ್ಲೂ ಜಾಹೀರಾತು ಅಳವಡಿಸಿ ಪ್ರದರ್ಶನಕ್ಕೆ ಅನುಮತಿಸಲಾಗುತ್ತಿದೆ. ಜಾಹೀರಾತು ಪ್ರದರ್ಶನಕ್ಕೆ ಮಾಸಿಕ ಹೆಚ್ಚಿನ ಮೊತ್ತದ ಬಿಡ್‌ ಸಲ್ಲಿಸುವವರಿಗೆ ಜಾಹೀರಾತು ಪ್ರದರ್ಶನ ಅಥವಾ ಅಳವಡಿಕೆಗೆ ಅನುಮತಿಸಲು ಬಿಎಂಟಿಸಿ ನಿರ್ಧರಿಸಿದೆ. ಇದೀಗ ಬಸ್‌ ಹೊರಭಾಗದ ತುಂಬಾ ಜಾಹೀರಾತು ಪ್ರದರ್ಶನಕ್ಕೆ ಅನುಮತಿಸುವ ಮೂಲಕ ನಿಗಮಕ್ಕೆ ಮಾಸಿಕ ₹30 ಲಕ್ಷಕ್ಕೂ ಹೆಚ್ಚಿನ ಆದಾಯ ಹೊಂದುವ ನಿರೀಕ್ಷೆ ಹೊಂದಿದೆ.