ಯಶಸ್ವಿಯಾಗಿ ಅಸ್ಥಿ ಮಜ್ಜೆ ಕಸಿ ನಡೆಸಿ ತರುಣನಿಗೆ ಬದುಕು ನೀಡಿದ ಟ್ರಸ್ಟ್‌ ವೆಲ್ ಹಾಸ್ಪಿಟಲ್‌ನ ವೈದ್ಯರು

| Published : Nov 28 2024, 12:36 AM IST / Updated: Nov 28 2024, 06:01 AM IST

ಸಾರಾಂಶ

.ಎಕ್ಸ್‌ಟ್ರಾಮೆಡಲ್ಲರಿ ಬಿ-ಸೆಲ್ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ (ಎಎಲ್‌ಎಲ್) ಅಂದ್ರೆ ಒಂದು ವಿಧದ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತರುಣನೊಬ್ಬನಿಗೆ ಬೆಂಗಳೂರಿನ ಟ್ರಸ್ಟ್‌ವೆಲ್ ಹಾಸ್ಪಿಟಲ್‌ನ ವೈದ್ಯರು ಯಶಸ್ವಿಯಾಗಿ ಅಸ್ಥಿ ಮಜ್ಜೆ ಕಸಿ ನಡೆಸಿ ಅವನಿಗೆ ಬದುಕು ನೀಡಿದ್ದಾರೆ.

 ಬೆಂಗಳೂರು : ಎಕ್ಸ್‌ಟ್ರಾಮೆಡಲ್ಲರಿ ಬಿ-ಸೆಲ್ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ (ಎಎಲ್‌ಎಲ್) ಅಂದ್ರೆ ಒಂದು ವಿಧದ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತರುಣನೊಬ್ಬನಿಗೆ ಬೆಂಗಳೂರಿನ ಟ್ರಸ್ಟ್‌ವೆಲ್ ಹಾಸ್ಪಿಟಲ್‌ನ ವೈದ್ಯರು ಯಶಸ್ವಿಯಾಗಿ ಅಸ್ಥಿ ಮಜ್ಜೆ ಕಸಿ ನಡೆಸಿ ಅವನಿಗೆ ಬದುಕು ನೀಡಿದ್ದಾರೆ.

ರಘು (ಹೆಸರು ಬದಲಾಯಿಸಲಾಗಿದೆ) ಎಂಬ ತರುಣನಿಗೆ 2019ರಲ್ಲಿ ಅವರಿಗೆ ಕ್ಯಾನ್ಸರ್ ಪತ್ತೆಯಾಗಿತ್ತು. ಆಗ ಅವರು ಕೀಮೋಥೆರಪಿ ಚಿಕಿತ್ಸೆ ಪಡೆದಿದ್ದರು. ದುರದೃಷ್ಟ  ಎಂದರೆ 2024ರ ಮಾರ್ಚ್ ತಿಂಗಳಲ್ಲಿ ಅವರಿಗೆ ಮತ್ತೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಎರಡನೇ ಸುತ್ತಿನ ಕೀಮೋಥೆರಪಿ ನೀಡಲಾಯಿತು. ಅದರ ಜೊತೆಗೆ ಮೂಳೆ ಮಜ್ಜೆಯ ಕಸಿ ಮಾಡಲು ನಿರ್ಧರಿಸಲಾಯಿತು.

ಅವರ ಸಹೋದರಿ ಮೂಳೆ ಮಜ್ಜೆ ದಾನಿಯಾಗಿದ್ದರಿಂದ 2024ರ ಅಕ್ಟೋಬರ್ 19ರಂದು ಹ್ಯಾಪ್ಲೋಡೆಂಟಿಕಲ್ ಅಲೋಜೆನಿಕ್ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಅನ್ನು ಯಶಸ್ವಿಯಾಗಿ ನಡೆಸಲಾಯಿತು. ವೈದ್ಯರಾದ ಡಾ. ಸಚಿನ್ ಜಾಧವ್, ಡಾ. ನಿಶಿತ್ ಸಾರಥ್ಯದ ತಂಡವು ಈ ಅಸ್ಥಿ ಮಜ್ಜೆ ಕಸಿಯನ್ನು ನೆರವೇರಿಸಿದೆ.

ಈ ಕುರಿತು ವೈದ್ಯ ಡಾ. ನಿಶಿತ್, ‘ಇದೊಂದು ಸವಾಲಿನ ಪ್ರಕ್ರಿಯೆಯಾಗಿತ್ತು. ಆದರೆ ತಂಡದ ಶ್ರಮದಿಂದ ಯಶಸ್ವಿಯಾಗಿ ಮೂಳೆ ಮಜ್ಜೆ ಕಸಿ ನಡೆಸಲಾಯಿತು. ರೋಗಿಯು ಇನ್ನು ಮುಂದೆ ಸಾಮಾನ್ಯ ಜೀವನವನ್ನು ನಡೆಸುವುದನ್ನು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದರು.

ಅಸ್ಥಿ ಮಜ್ಜೆ ಕಸಿಯ ಬಳಿಕ ರಘು (ಹೆಸರು ಬದಲಾಯಿಸಲಾಗಿದೆ) ಚೇತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ಕಣ್ಗಾವಲಿನಲ್ಲಿ ಇರಲಿದ್ದಾರೆ. ಏನೇ ತೊಂದರೆ ಎದುರಾದರೂ ವೈದ್ಯಕೀಯ ಸಿಬ್ಬಂದಿಗಳ ತಂಡ  ಸಹಕರಿಿಸಲಿದೆ.

ಮತ್ತೊಬ್ಬ ವೈದ್ಯರಾದ ಡಾ.ಸಚಿನ್ ಜಾಧವ್ ಅವರು, ‘ನಾವು ರಘು ಅವರ ಆರೋಗ್ಯ ಸುಧಾರಣೆ ಕುರಿತು ಭರವಸೆ ಹೊಂದಿದ್ದೇವೆ ಮತ್ತು ಅವರು ಹಳೆಯ ದಿನಗಳಂತೆ ಸಾಮಾನ್ ಜೀವನ ನಡೆಸುವುದನ್ನು ನೋಡಲು ಕುತೂಹಲ ಹೊಂದಿದ್ದೇವೆ’ ಎಂದು ಹೇಳಿದರು.