ಬೆರಗು: ಅಪರೂಪ ಪ್ರಯೋಗದ ವಿಜ್ಞಾನ, ವಿನೋದ ಕವಿತೆಗಳು

| Published : May 14 2024, 01:10 AM IST / Updated: May 14 2024, 05:04 AM IST

ಬೆರಗು: ಅಪರೂಪ ಪ್ರಯೋಗದ ವಿಜ್ಞಾನ, ವಿನೋದ ಕವಿತೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕವಿಯು ತಮ್ಮ ಸಂಕಲನಕ್ಕೆ ನೀಡಿರುವ ಉಪ ಶೀರ್ಷಿಕೆಯೇ ಇಲ್ಲಿರುವ ಕವಿತೆಗಳು ಯಾವ ಸ್ವರೂಪಕ್ಕೆ ಸೇರಿದವು ಎಂಬುದನ್ನು ಸೂಚಿಸುತ್ತವೆ. ಸೋಮಶೇಖರ್ ಅವರು ವೈಜ್ಞಾನಿಕ ಸಂಶೋಧನೆಗಳು ಹಾಗೂ ವರದಿಗಳನ್ನು ಓದಿ, ತಮಗಾದ ಬೆರಗನ್ನು ಪ್ರಾಸಬದ್ಧವಾದ ಪದ್ಯಗಳ ಮೂಲಕ ರಚಿಸಿದ್ದಾರೆ.

 ಮೈಸೂರು :  ಸೋಮಶೇಖರ್ ಮಂದಗೆರೆ ಅವರ ಬೆರಗು ಅಪರೂಪ ಪ್ರಯೋಗದ ವಿಜ್ಞಾನ ಹಾಗೂ ವಿನೋದ ಕವಿತೆಗಳ ಸಂಕಲನವಾಗಿದೆ.

ಕವಿಯು ತಮ್ಮ ಸಂಕಲನಕ್ಕೆ ನೀಡಿರುವ ಉಪ ಶೀರ್ಷಿಕೆಯೇ ಇಲ್ಲಿರುವ ಕವಿತೆಗಳು ಯಾವ ಸ್ವರೂಪಕ್ಕೆ ಸೇರಿದವು ಎಂಬುದನ್ನು ಸೂಚಿಸುತ್ತವೆ. ಸೋಮಶೇಖರ್ ಅವರು ವೈಜ್ಞಾನಿಕ ಸಂಶೋಧನೆಗಳು ಹಾಗೂ ವರದಿಗಳನ್ನು ಓದಿ, ತಮಗಾದ ಬೆರಗನ್ನು ಪ್ರಾಸಬದ್ಧವಾದ ಪದ್ಯಗಳ ಮೂಲಕ ರಚಿಸಿದ್ದಾರೆ. ಅವುಗಳನ್ನು ಪೌರಾಣಿಕ ಹಾಗೂ ಸಾಹಿತ್ಯಕ ಸಂಗತಿಗಳಿಗೆ ಸಂಪರ್ಕಿಸಿರುವುದು ಅವರ ವಿಶೇಷತೆ.

ಜೀವಕೋಶಗಳ ಪುನರುಜ್ಜೀವನದ ಮೂಲಕ 53 ವರ್ಷದ ಮಹಿಳೆಯನ್ನು 23 ವರ್ಷದ ಯುವತಿಯಾಗಿಸಿದ್ದು ಮಹಾಭಾರತದ ಯಯಾತಿ, ಮಾಲಿಯಲ್ಲಿ ತಾಯಿಯೊಬ್ಬರು ಒಮ್ಮೆಲೆ ಒಂಭತ್ತು ಮಕ್ಕಳಿಗೆ ಜನ್ಮ ನೀಡಿ, ಗಿನ್ನೆಸ್ ದಾಖಲೆಗೆ ಸೇರಿದ್ದು ಗಾಂಧಾರಿಯ ನೂರು ಮಕ್ಕಳಿಗೆ ಹೋಲಿಕೆ ಮಾಡಿ, ಅವರಿಗೂ ಗಿನ್ನೆಸ್ ಪುಸ್ತಕದಲ್ಲಿ ಜಾಗ ಸಿಗಬೇಕಿತ್ತು ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಹಂದಿ ಕಿಡ್ನಿ ಹಾಕಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ ಅಮರಿಕಾದ ರಿಚರ್ಡ್ ಸ್ಲೇಮ್ಯಾನ್ ನಿಧನರಾದ ಸುದ್ದಿ ಇದೀಗ [ಮೇ 13, 2024] ಪ್ರಕಟವಾಗಿದೆ. ಆದರೆ ಸೋಮಶೇಖರ್ ಅವರು ಮಾನವ ವೀರ್ಯಾಣುಗನ್ನು ಹಂದಿಯ ಅಂಡಾಶಯಕ್ಕೆ ವರ್ಗಾಯಿಸಿ ಪ್ರಯೋಗ ನಡೆಸಿದಾಗ ಹುಟ್ಟಿದ ಹಂದಿಗೆ ಮಾನವ ಹೃದಯವಿದೆ ಎಂದು ತಿಳಿದು ಬಂದಿದೆ. ಅದನ್ನು ಮಾನವ ದೇಹಕ್ಕೆ ಅಳವಡಿಸುವಲ್ಲಿ ಬ್ರಿಟನ್ನ ವೈದ್ಯ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂಬ ಸುದ್ದಿ ಆಧರಿಸಿ, ಹಂದಿ- ಮಂದಿ ಸಲ್ಲಾಪ ಎಂಬ ಕವನ ರಚಿಸಿದ್ದಾರೆ.

ಏನಿದು ಹಂದಿ

ಮಾಡಿಹೆ ಮತ್ತೊಂದು ಸುದ್ದಿ!

ನಿನ್ನಂಡಾಶಯದಲ್ಲಿ

ಮಂದಿ ವೀರ್ಯಾಣು ಧರಿಸಿ

ಹೊಸದೊಂದು ಹೃದಯ ಬೆಳೆಸಿ

ಮನುಜರಿಗೆ ತೊಡಿಸಿ

ಚಿರಕಾಲ ಜೀವಿಸಿ

ಎದು ಹರಿಸೀಯೇನು!

ಮನುಕುಲವನು

ಈ ರೀತಿ ಹಲವಾರು ಸ್ವಾರಸ್ಯಕರ ಪದ್ಯಗಳು ಇಲ್ಲಿವೆ. ಗೋವಿನ ಹೊಸ ಹಾಡು, ಆತಂಕ ನಿವಾರಣೆ, ಚಂದ್ರಲೋಕದ ಕನಸು, ಶಬ್ಗ ಮಾಲಿನ್ಯ, ಮರ, ಬೆರಗು, ಸ್ವಾಮ್ಯ, ಉತ್ತರ ದಕ್ಷಿಣ, ಹಿತದೃಷ್ಟಿ, ಕೋಳಿ ಹೇಳಿದ ಕತೆ, ವಾನರರ ಆಯ್ಕೆ ಸೇರಿದಂತೆ ಹಲವಾರು ಕವನಗಳು ಇವೆ. ವಿನೋದ ಕವಿತೆಗಳಂತೂ ನಗೆಗಡಲಲ್ಲಿ ತೇಲಿಸುತ್ತವೆ. ಅದರಲ್ಲಿ ಬೇಂದ್ರೆಯವರನ್ನು ಕುರಿತ ನನ್ನಾಕೆಗೆ ಮೊದಲ ಸ್ಥಾನ!

ಅವರಿಗೆ ಬೆರಗು ಮೂಡಿಸಿದ ಸಂಶೋಧನೆ, ಸುದ್ದಿಗಳ ಕಿರು ಮಾಹಿತಿಯನ್ನು ಕೂಡ ಅಡಿ ಟಿಪ್ಪಣಿಯಲ್ಲಿ ನೀಡಿದ್ದಾರೆ. ಜೊತೆಗೆ ಜಮುನಾರಾಣಿ ಮಿರ್ಲೆ ಅವರು ರಚಿಸಿರುವ ರೇಖಾ ಚಿತ್ರಗಳು ಗಮನ ಸೆಳೆಯುತ್ತವೆ.

ಈ ಕೃತಿಯನ್ನು ಬೊಂಬೆ ಪ್ರಕಾಶನ ಪ್ರಕಟಿಸಿದೆ. ಎಚ್. ಡುಂಡಿರಾಜ್ ಅವರ ಮುನ್ನುಡಿ,ಪ್ರೊ.ಎನ್.ಎಸ್. ಶ್ರೀಧರಮೂರ್ತಿ ಅವರ ಹಿನ್ನುಡಿ ಇದೆ. ಆಸಕ್ತರು ಸೋಮಶೇಖರ್ ಮಂದಗೆರೆ, ಮೊ. 98867 98615 ಸಂಪರ್ಕಿಸಬಹುದು.