ಸಾರಾಂಶ
ಚಿಕ್ಕಬಳ್ಳಾಪುರದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ಏರೋಥಾನ್- 2023 ಕಾರ್ಯಕ್ರಮ । ವಿಜ್ಞಾನಿ ಡಾ.ಎಸ್.ಎನ್.ಓಂಕಾರ್ ಅಭಿಮತ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಬಾರತದ ಪ್ರಸ್ತುತ ಸನ್ನಿವೇಶದಲ್ಲಿ ಡ್ರೋಣ್ ತಂತ್ರಜ್ಞಾನದ ಅಳವಡಿಕೆ ವಿಶ್ವವಾಪಿಯಾಗಿದೆ. ನಮ್ಮ ಭಾರತೀಯ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಡ್ರೋಣ್ ತಂತ್ರಜ್ಞಾನವನ್ನು ಜನಪರವಾಗಿಸಿದ್ದಾರೆ. ಪ್ರಧಾನಮಂತ್ರಿಯವರ ಆತ್ಮನಿರ್ಭರ್ ಭಾರತ್ ಯೋಜನೆ ಫಲಪ್ರಧವಾಗುತ್ತಿದೆ ಎಂದು ಐಐಎಸ್ ಸಿ ವಿಜ್ಞಾನಿ ಡಾ.ಎಸ್.ಎನ್.ಓಂಕಾರ್ ತಿಳಿಸಿದರು
ಶುಕ್ರವಾರ ನಗರ ಹೊರವಲಯದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ನಡೆದ ಏರೋಥಾನ್- 2023 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷವಾಗಿ ಡ್ರೋನ್ ತಂತ್ರಜ್ಞಾನದ ಅನ್ವಯಿಕ ಕ್ಷೇತ್ರದಲ್ಲಿ ಮುಂಬರುವ 5 ವರ್ಷಗಳಲ್ಲಿ 54 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಎಂದರು.ಭಾರತೀಯ ವೈಮಾನಿಕ ತಂತ್ರಜ್ಞಾನ, ಮೆಕ್ಯಾನಿಕಲ್ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ತಂತ್ರಜ್ಞಾನಕ್ಕೆ ಅನುಗುಣವಾಗಿ ತಮ್ಮ ಪ್ರಾಯೋಗಿಕ ತರಗತಿಗಳಲ್ಲಿ ಸಂಶೋಧನೆ ನಡೆಸಬೇಕು. ಇದಕ್ಕಾಗಿಯೇ ಡ್ರೋನ್ ತಂತ್ರಜ್ಞಾನ ಆಧಾರಿತ ಏರೋಥಾನ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ ಎಂದು ತಿಳಿಸಿದರು.
ಎಸ್‌ಎಇ ಇಂಡಿಯಾದ ಹಿರಿಯ ಉಪಾಧ್ಯಕ್ಷ ಡಾ.ನಾಗರಾಜನ್ ಮಾತನಾಡಿ, ಡ್ರೋಣ್ ತಂತ್ರಜ್ಞಾನದ ಬಗ್ಗೆ ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಹೆಚ್ಚಾಗಬೇಕ. ಭವಿಷ್ಯದಲ್ಲಿ ಭಾರತವು ಡ್ರೋಣ್ ತಂತ್ರಜ್ಞಾನವನ್ನು ವಿಶ್ವಕ್ಕೆ ರಫ್ತು ಮಾಡುವ ಅಗ್ರಗಣ್ಯ ರಾಷ್ಟ್ರವಾಗಲಿದೆ ಎಂದರು.ಏರೋಥಾನ್-2023ರ ಕಾರ್ಯಕ್ರಮದಲ್ಲಿ ವ್ಯಸ್ಥಾಪಕ ಹಾಗೂ ಹೆಚ್.ಸಿ.ಎಲ್. ಟೆಕ್ನಾಲಜಿಸ್ ಇಂಜನಿಯರಿಂಗ್ ಡೈರೆಕ್ಟರ್ ಡಾ.ಸಿ.ಗಂಗಾರೆಡ್ಡಿ ಮಾತನಾಡಿ, ಇದು ಏರೋಥಾನ್ ನ 3ನೇ ಆವೃತ್ತಿಯಾಗಿದೆ.ಪ್ರಥಮ ಹಂತದಲ್ಲಿ 89 ಕಾಲೇಜುಗಳು ಭಾಗಿಯಾಗಿದ್ದವು. ಭಾರತದ ಉದ್ದಗಲಕ್ಕೂ ಇರುವ ತಾಂತ್ರಿಕ ಕಾಲೇಜುಗಳ 89 ಡ್ರೋಣ್ ಮಾದರಿಗಳನ್ನು ಏರೋಥಾನ್‌ಗೆ ಆಹ್ವಾನಿಸಿದ್ದು, ಅದರಲ್ಲಿ 20 ಅತ್ಯುತ್ತಮ ಎಂದು ಆಯ್ಕೆಯಾಗಿವೆ. ಇದರ ಜತೆಗೆ 6 ತಂಡಗಳನ್ನು ವಿಶೇಷವಾಗಿ ಸೇರಿಸಿದ್ದೇವೆ. ಇವರಲ್ಲಿ ಯಾವ ತಂಡದ ಡ್ರೋನ್ ನಮ್ಮ ನಿಯಮಗಳಿಗೆ ಅನುಸಾರ ಕಾರ್ಯನಿರ್ವಹಿಸುವಲ್ಲಿ ಸಫಲತೆ ಪಡೆಯಲಿದೆಯೋ ಅಂತಹ 3 ತಂಡಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಪ್ರಶಸ್ತಿ ನೀಡಲಿದ್ದೇವೆ ಎಂದರು.
ಎಸ್‌ಜೆಸಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಟಿ.ರಾಜು ಮಾತನಾಡಿ, ಪ್ರತಿ ವರ್ಷ ಇಂಜನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಏರೋಥಾನ್ ಆಯೋಜನೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಪಠ್ಯದಲ್ಲಿ ಓದಿ ಕೇಳಿದ್ದನ್ನು ಪ್ರಾಯೋಗಿಕವಾಗಿ ಮಾಡುವುದರಿಂದ ಡ್ರೋಣ್ ತಂತ್ರಜ್ಞಾನ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳಿಗೂ ಆತ್ಮವಿಶ್ವಾಸ ಮೂಡಲಿದೆ ಎಂದರು.ಏರೋಥಾನ್-2023ರ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎಸ್‌ಜೆಸಿಐಟಿ,ರೇವಾ, ಲೊಯೋಲಾ ಸೇರಿದಂತೆ 26 ತಾಂತ್ರಿಕ ಕಾಲೇಜುಗಳ ತಂಡಗಳು ಭಾಗಿಯಾಗಿದ್ದು, ಡ್ರೋಣ್ ಮಾದರಿಗಳನ್ನು ಹಾರಿಸಿದವು. ಕಾರ್ಯಕ್ರಮದಲ್ಲಿ ಎಕ್ಸಾಗಾನ್ ನ ಹಿರಿಯ ಉಪಾಧ್ಯಕ್ಷ ಡಾ.ರಮೇಶ್ ಆದೋನಿ,ಎರೋ ಸ್ಪೇಸ್ ಫೋರಂ ಮುಖ್ಯಸ್ಥ ಡಾ.ಜವಾಜಿ ಮುನಿರತ್ನಂ, ಎಸ್ ಜೆಸಿಐಟಿಯ ಕಾಲೇಜು ಭೋಧಕ ಮತ್ತು ಭೋಧಕೇತರ ಸಿಬ್ಬಂದಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತಿತರರು ಇದ್ದರು.
-----ಸಿಕೆಬಿ- 5 ಚಿಕ್ಕಬಳ್ಳಾಪುರ ಹೊರವಲಯದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ನಡೆದ ಏರೋಥಾನ್- 2023 ಕಾರ್ಯಕ್ರಮವನ್ನು ದೀಪ ಬೇಳಗುವ ಮೂಲಕ ಉದ್ಘಾಟಿಸಿದ ಐಐಎಸ್ ಸಿ ವಿಜ್ಞಾನಿ ಡಾ.ಎಸ್.ಎನ್.ಓಂಕಾರ್ ಗಣ್ಯರು.
ಸಿಕೆಬಿ- 6 ಏರೋಥಾನ್- 2023 ಕಾರ್ಯಕ್ರಮದಲ್ಲಿ ತಮ್ಮ ಡ್ರೋಣ್ ಪ್ರದರ್ಶಿಸುತ್ತಿರುವ ವಿವಿಧ ಕಾಲೇಜಿನ ವಿಧ್ಯಾರ್ಥಿಗಳು.