ಬ್ರಿಟನ್‌- ಭಾರತ ಮಧ್ಯೆ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಜಂಟಿ ಪಾಲುದಾರಿಕೆ

| Published : Feb 12 2025, 01:32 AM IST

ಬ್ರಿಟನ್‌- ಭಾರತ ಮಧ್ಯೆ ಶಸ್ತ್ರಾಸ್ತ್ರ ಅಭಿವೃದ್ಧಿಗೆ ಜಂಟಿ ಪಾಲುದಾರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಏರೋ ಇಂಡಿಯಾ-2025ರಲ್ಲಿ ಯುನೈಟೆಡ್ ಕಿಂಗ್ಡಮ್ ಮತ್ತು ಭಾರತದ ನಡುವೆ ರಕ್ಷಣಾ ಕಾರ್ಯತಂತ್ರದ ಪಾಲುದಾರಿಕೆ ಸಂಬಂಧಿಸಿದಂತೆ ‘ಡಿಫೆನ್ಸ್ ಪಾರ್ಟನರ್‌ಶಿಪ್‌-ಇಂಡಿಯಾ’ಕ್ಕೆ ಅಧಿಕೃತವಾಗಿ ಚಾಲನೆ ನೀಡಿ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಏರೋ ಇಂಡಿಯಾ-2025ರಲ್ಲಿ ಯುನೈಟೆಡ್ ಕಿಂಗ್ಡಮ್ ಮತ್ತು ಭಾರತದ ನಡುವೆ ರಕ್ಷಣಾ ಕಾರ್ಯತಂತ್ರದ ಪಾಲುದಾರಿಕೆ ಸಂಬಂಧಿಸಿದಂತೆ ‘ಡಿಫೆನ್ಸ್ ಪಾರ್ಟನರ್‌ಶಿಪ್‌-ಇಂಡಿಯಾ’ಕ್ಕೆ ಅಧಿಕೃತವಾಗಿ ಚಾಲನೆ ನೀಡಿ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಹೊಸ ತಲೆಮಾರಿನ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಜಂಟಿ ಪಾಲುದಾರಿಕೆ ವಿಸ್ತರಣೆಗೆ ಯುಕೆ ದೇಶದ ಥೇಲ್ಸ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಕಂಪನಿಗಳು ಮುಂದಾಗಿವೆ. ಮೊದಲ ಹಂತದಲ್ಲಿ ಲೇಸರ್ ಬೀಮ್ ರೈಡಿಂಗ್ ಮಿಸೈಲ್ (ಎಲ್‌ಬಿಆರ್‌ಎಂ) ಉತ್ಪಾದಿಸಿ ಈ ವರ್ಷದಲ್ಲೇ ಸರಬರಾಜು ಮಾಡಲಾಗುತ್ತದೆ.

ಒಪ್ಪಂದದ ಕುರಿತು ಮಾತನಾಡಿದ ಯುಕೆ ರಕ್ಷಣಾ ಸಚಿವ ಲಾರ್ಡ್ ವೆರ್ನಾನ್ ಕೋಕರ್, ಭಾರತದೊಂದಿಗಿನ ಉತ್ತಮ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸಲು ಬಹಳ ಸಂತೋಷವಾಗುತ್ತಿದೆ. ಎರಡೂ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗುವ ಜೊತೆಗೆ ಭಾರತದ ಆತ್ಮನಿರ್ಭರ ಭಾರತ ಆಲೋಚನೆಗೆ ‘ಯುಕೆ-ಇಂಡಿಯಾ ಡಿಫೆನ್ಸ್ ಪಾರ್ಟನರ್‌ಶಿಪ್ ಪೆವಿಲಿಯನ್’ ಮತ್ತಷ್ಟು ಉತ್ತೇಜನ ನೀಡುತ್ತದೆ. ಎರಡು ರಾಷ್ಟ್ರಗಳು ಒಟ್ಟಿಗೆ ಕೆಲಸ ಮಾಡುವ ಮೂಲಕ ಹೊಸ ಅವಕಾಶಗಳನ್ನು ತೆರೆಯಲು ಸಾಧ್ಯವಾಗುತ್ತದೆ ಎಂದರು.

ಬ್ರಿಟಿಷ್ ಹೈಕಮೀಷನರ್ ಲಿಂಡಿ ಕ್ಯಾಮರೋನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.