ವೈಕುಂಠ ಏಕಾದಶಿಗೆತಿರುಪತಿ ಹುಂಡಿಯಲ್ಲಿಕೇವಲ ₹2.5 ಕೋಟಿ ಕಾಣಿಕೆ

| Published : Dec 26 2023, 01:32 AM IST

ಸಾರಾಂಶ

ವೆಂಕಟೇಶ್ವರ ದೇಗುಲಕ್ಕೆ ಆಗಮಿಸಿದವರ ಸಂಖ್ಯೆ ಇಳಿಕೆ ಹಿನ್ನೆಲೆಯಲ್ಲಿ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ತಿರುಮಲ: ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ವೈಕುಂಠ ಏಕಾದಶಿಗೆ ಈ ಬಾರಿ ಅತಿ ಕಡಿಮೆ ಭಕ್ತರು ಆಗಮಿಸಿದ್ದರು. ದಿನಕ್ಕೆ 80 ಸಾವಿರ ನಿರೀಕ್ಷೆಗೆ ಕೇವಲ 67 ಸಾವಿರ ಭಕ್ತರು ಆಗಮಿಸಿದ್ದಾರೆ. ಜೊತೆಗೆ ಹುಂಡಿ ಹಣದಲ್ಲೂ ಭಾರಿ ಇಳಿಕೆ ಕಂಡಿದೆ. ಈ ಸಂಖ್ಯೆ ಕಳೆದ ವರ್ಷ ಭಕ್ತರ ಸಂಖ್ಯೆ 69 ಸಾವಿರ ಇತ್ತು ಎಂದು ಟಿಟಿಡಿ ತಿಳಿಸಿದೆ. ಇನ್ನು ಕಳೆದ ವೈಕುಂಠ ಏಕಾದಶಿಗೆ ತಿರುಪತಿಯಲ್ಲಿ ಬರೋಬ್ಬರಿ 7.68 ಕೋಟಿ ರು. ಕಾಣಿಕೆ ಸಿಕ್ಕಿತ್ತು. ಈ ಸಂಖ್ಯೆ ಈ ಬಾರಿ ಕೇವಲ 2.5 ಕೋಟಿ ರು.ಗೆ ಇಳಿಕೆಯಾಗಿದೆ. ದೇಗುಲಕ್ಕೆ ಆಗಮಿಸುವವರ ಸಂಖ್ಯೆ ಭಾರಿ ಇಳಿಕೆಗೆ ಕಾರಣಗಳಿವೆ. ಇವುಗಳಲ್ಲಿ ನಿರ್ಬಂಧ ಮುಂಗಡ ಬುಕಿಂಗ್ ಮಾಡಿದ್ದನ್ನು ರದ್ದುಗೊಳಿಸುವ ಆಯ್ಕೆ, ದರ್ಶನ ಟಿಕೆಟ್‌ ಸಿಗದಿರುವಿಕೆ ಹೀಗೆ ಹಲವಾರು ಕಾರಣಗಳಿಂದ ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ.