ಡಾ. ರಾಜೇಂದ್ರ ಶ್ರೀಗಳ ಪುಣ್ಯಾರಾಧನೆ, ಸುತ್ತೂರು ಜಾತ್ರಾ ಮಹೋತ್ಸವ ಸಭೆ

| Published : Dec 18 2023, 02:00 AM IST

ಸಾರಾಂಶ

ಡಾ. ರಾಜೇಂದ್ರ ಶ್ರೀಗಳ ಪುಣ್ಯಾರಾಧನೆ, ಸುತ್ತೂರು ಜಾತ್ರಾ ಮಹೋತ್ಸವ ಸಭೆಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 37ನೇ ಪುಣ್ಯಾರಾಧನೆ ಅಂಗವಾಗಿ ಭಾನುವಾರ ಬೆಳಗ್ಗೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆ ಹಾಗೂ ರಾಜೇಂದ್ರ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ಪ್ರಾಕಾರೋತ್ಸವವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಸುತ್ತೂರು

ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 37ನೇ ಪುಣ್ಯಾರಾಧನೆ ಅಂಗವಾಗಿ ಭಾನುವಾರ ಬೆಳಗ್ಗೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆ ಹಾಗೂ ರಾಜೇಂದ್ರ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ಪ್ರಾಕಾರೋತ್ಸವವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೆರವೇರಿಸಿದರು.

ಫೆ. 6 ರಿಂದ 11 ರವರೆಗೆ ಶ್ರೀ ಕ್ಷೇತ್ರದಲ್ಲಿ ಜರುಗುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ದಾಸೋಹ, ಸಾಂಸ್ಕೃತಿಕ ಕಾರ್ಯಕ್ರಮ, ಸಭಾಗೃಹ ಎಲ್ಲಾ ಮಂಟಪಗಳ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

ಜಾತ್ರಾ ಪೂರ್ವಭಾವಿ ಸಭೆ

ವಿವಿಧ ಸಮಿತಿಗಳ ಸಂಚಾಲಕರು, ಸುತ್ತಮುತ್ತಲ ಗ್ರಾಮಗಳ ಮುಖಂಡರು ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.

ಈ ಸಂದರ್ಭದಲ್ಲಿ ವಾಟಾಳು, ಬೆಟ್ಟದಪುರ, ಹೊಸಮಠ, ಚಿಕ್ಕತುಪ್ಪೂರು, ದಂಡಿಕೆರೆ, ಹುಲಿಯೂರುದುರ್ಗ, ಮಾದಹಳ್ಳಿ, ಕುದೇರು, ಚುಂಚನಹಳ್ಳಿ, ನವಿಲೂರು, ಕುದೇರುಮಠ, ಕುಂದೂರು, ಮಾಡ್ರಳ್ಳಿ, ಮಾದಾಪುರ, ಹರವೆ, ಸಾಲೂರುಮಠ, ಪಡುಗೂರು, ಕಾಮಗೆರೆ, ನೀಲಕಂಠಸ್ವಾಮಿ ಮಠ, ನಂಜನಗೂಡು, ರಾಗಿಬೊಮ್ಮನಹಳ್ಳಿ, ಕಸುವಿನಹಳ್ಳಿ, ಗೌಡಳ್ಳಿ, ಕುರುಬೂರು, ಮುಡುಕುನಪುರ, ನರಗ್ಯಾತನಹಳ್ಳಿ, ಚಂದ್ರವನ ಆಶ್ರಮದ ಶ್ರೀಗಳು, ಜೆಎಸ್ಎಸ್ ವಿದ್ಯಾಪೀಠದ ಅಧಿಕಾರಿಗಳು ಮತ್ತು ಭಕ್ತರು ಇದ್ದರು.

ಈ ವೇಳೆ ಮಠದ ಹಾಗೂ ಜೆಎಸ್ಎಸ್ ವಿದ್ಯಾಪೀಠದ 2024ನೇ ವರ್ಷದ ಗೋಡೆ ಮತ್ತು ಪಾಕೆಟ್ ಕ್ಯಾಲೆಂಡರ ನ್ನು ಬಿಡುಗಡೆಗೊಳಿಸಲಾಯಿತು.

ಪ್ರೊ. ಸುಬ್ಬಪ್ಪ ಸ್ವಾಗತಿಸಿದರು. ಸಿ.ವಿ. ಬಸವರಾಜು ವಂದಿಸಿದರು. ಎಚ್.ಎಲ್. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಸುತ್ತೂರು ಶಾಲೆಯ ಮಕ್ಕಳು ಪ್ರಾರ್ಥಿಸಿದರು.