ಫರ್ನೀಚರ್, ಲೈಫ್‌ಸ್ಟೈಲ್‌ ಮೇಳ ಶುರು

| Published : Jun 24 2024, 01:33 AM IST / Updated: Jun 24 2024, 04:19 AM IST

ಸಾರಾಂಶ

ಏಷಿಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ಜಾಲಹಳ್ಳಿಯ ಎಚ್.ಎಂ.ಟಿ ಮೈದಾನದಲ್ಲಿ ಆಯೋಜಿಸಿರುವ ‘ಫರ್ನೀಚರ್ ಮತ್ತು ಲೈಫ್ ಸ್ಟೈಲ್ ಎಕ್ಸ್‌ಪೋ’ಗೆ ಗ್ರಾಹಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.

 ಬೆಂಗಳೂರು : ಏಷಿಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ಜಾಲಹಳ್ಳಿಯ ಎಚ್.ಎಂ.ಟಿ ಮೈದಾನದಲ್ಲಿ ಆಯೋಜಿಸಿರುವ ‘ಫರ್ನೀಚರ್ ಮತ್ತು ಲೈಫ್ ಸ್ಟೈಲ್ ಎಕ್ಸ್‌ಪೋ’ಗೆ ಗ್ರಾಹಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.

ಜೂನ್ 21ರಿಂದ ಜೂನ್ 30ರವರೆಗೆ ನಡೆಯುವ ಈ ಎಕ್ಸ್‌ಪೋಗೆ ಶಾಸಕ ಮುನಿರತ್ನ ಚಾಲನೆ ನೀಡಿದರು. ನೂರಾರು ಮಾದರಿಯ ಹೊಸ ಟ್ರೆಂಡ್ ಮತ್ತು ಹೊಸ ಮಾದರಿಯ ಫರ್ನೀಚರ್‌ಗಳು ಎಕ್ಸ್‌ಪೋದಲ್ಲಿ ಮಾರಾಟಕ್ಕಿವೆ. ಶೇ.70ವರೆಗೆ ರಿಯಾಯಿತಿ ಇದೆ.

ಸೋಫಾ, ಡೈನಿಂಗ್ ಟೇಬಲ್, ಮೇಕಪ್ ಟೇಬಲ್, ಕಾಫಿ ಟೇಬಲ್, ಬೆಡ್, ಟೇಬಲ್, ಕ್ಯಾಬಿನೆಟ್, ಡೆಸ್ಕ್, ಬುಕ್‌ಕೇಸ್, ಡ್ರೇಸ್ಸರ್, ಕುಶಲಕರ್ಮಿಗಳು ಕೆತ್ತಿರುವ ಮರದ ವಿಗ್ರಹಗಳು, ಮನೆ ಅಲಂಕಾರಿಕ ವಸ್ತುಗಳು, ಉಯ್ಯಾಲೆ ಸೇರಿದಂತೆ ನೂರಾರು ಮಾದರಿಯ ವಸ್ತುಗಳು ಮಾರಾಟಕ್ಕಿವೆ.

ಎಕ್ಸ್‌ಫೋದಲ್ಲಿರುವ ಅನೇಕ ಫರ್ನೀಚರ್ ಮತ್ತಿತರ ವಸ್ತುಗಳಿಗೆ ಗರಿಷ್ಠ ಶೇ.70ರವರೆಗೆ ರಿಯಾಯಿತಿ ಇದೆ. 30ಕ್ಕೂ ಅಧಿಕ ಸ್ಟಾಲ್‌ಗಳಿದ್ದು ನೇರವಾಗಿ ತಯಾರಕರಿಂದ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೀಠೋಪಕರಣಗಳನ್ನು ತಯಾರಿಸಿ ಕೊಡಲಾಗುತ್ತದೆ. ಭಾನುವಾರದಂದು ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ತಮ್ಮ ಮನೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಿ ಸಂತಸಪಟ್ಟರು.

ವಸ್ತ್ರಗಳು, ಗೊಂಬೆ, ಗೋಡೆ ಅಲಂಕಾರ ವಸ್ತುಗಳು ಹೀಗೆ ಅನೇಕ ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಹೊಸ ಮನೆಗಳಿಗೆ ಅಗತ್ಯವಾದ ಸಂಪೂರ್ಣ ಪ್ಯಾಕೇಜ್ ಫರ್ನೀಚರ್‌ಗಳು ಕೂಡ ಲಭ್ಯ ಇವೆ. ಗ್ರಾಹಕರು ತಮ್ಮ ಮನೆಯ ಅಳತೆ ಮತ್ತು ಆಸಕ್ತಿಗೆ ತಕ್ಕಂತೆ ಫರ್ನಿಚರ್‌ಗಳನ್ನು ಸಿದ್ಧಪಡಿಸಿಕೊಡುವಂತೆ ಸ್ಥಳದಲ್ಲೇ ಆರ್ಡರ್ ಮಾಡಲು ಅವಕಾಶವಿದೆ.---

ಒಂದೇ ಸೂರಿನಡಿ ನೂರಾರು ಮಾದರಿಯ ಫರ್ನೀಚರ್‌ಗಳು ಲಭ್ಯ ಇರುವುದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಿದೆ. ಹೊಸ ಟ್ರೆಂಡ್‌ನ ಫರ್ನೀಚರ್ ಇರುವುದು ವಿಶೇಷ ಆಕರ್ಷಣೆ.

-ಮುನಿರತ್ನ, ಶಾಸಕ.