ದೇಶದ ಮೊದಲ ಆರ್‌ಆರ್‌ಟಿಎಸ್ ರೈಲು ಮಾರ್ಗಕ್ಕೆ ನಾಳೆ ಚಾಲನೆ
1 Min read
Author : KannadaprabhaNewsNetwork
Published : Oct 19 2023, 12:45 AM IST
Share this Article
FB
TW
Linkdin
Whatsapp
ಡಿ.ಕೆ.ಶಿವಕುಮಾರ್ | Kannada Prabha
Image Credit: KP
ದೆಹಲಿ, ಮೇರಠ್ ಮತ್ತು ಗಾಜಿಯಾಬಾದ್ ನಡುವೆ ನಿರ್ಮಾಣ ಮಾಡಲಾಗುತ್ತಿರುವ ಆರ್‌ಆರ್‌ಟಿಎಸ್ ರೈಲು ಸೇವೆಯ ಮೊದಲ 17 ಕಿ.ಮೀ. ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅ.20ರಂದು ಚಾಲನೆ ನೀಡಲಿದ್ದಾರೆ.
- 17 ಕಿ.ಮೀ. ಮಾರ್ಗ ಉದ್ಘಾಟಿಸಲಿರುವ ಪ್ರಧಾನಿ ಮೋದಿ ನವದೆಹಲಿ: ದೆಹಲಿ, ಮೇರಠ್ ಮತ್ತು ಗಾಜಿಯಾಬಾದ್ ನಡುವೆ ನಿರ್ಮಾಣ ಮಾಡಲಾಗುತ್ತಿರುವ ಆರ್‌ಆರ್‌ಟಿಎಸ್ ರೈಲು ಸೇವೆಯ ಮೊದಲ 17 ಕಿ.ಮೀ. ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅ.20ರಂದು ಚಾಲನೆ ನೀಡಲಿದ್ದಾರೆ. ಇದು ಪ್ರಮುಖ ನಗರಗಳನ್ನು ಸೇರಿಸುವ ರೈಲು ಯೋಜನೆಯಾಗಿದ್ದು, ಇಲ್ಲಿ ರೈಲುಗಳು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ತ್ವರಿತವಾಗಿ ಪ್ರಯಾಣಿಕರನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕೊಂಡೊಯ್ಯಲಿವೆ. ದೆಹಲಿ ಮತ್ತು ಗಾಜಿಯಾಬಾದ್ ನಡುವಿನ 17 ಕಿ.ಮೀ. ಮಾರ್ಗವನ್ನು ಉದ್ಘಾಟಿಸಲಾಗುತ್ತಿದ್ದು, ಇದರಲ್ಲಿ ಶಹೀಬಾಬಾದ್, ಗಾಜಿಯಾಬಾದ್, ಗುಲ್ದಾರ್, ದುಹೈ ಮತ್ತು ದುಹೈ ಡಿಪೋದಲ್ಲಿ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ. ಈ ರೈಲು ಮೆಟ್ರೋ ವ್ಯವಸ್ಥೆಗೆ ಪರ್ಯಾಯವಾಗಲಿದ್ದು, ಅದಕ್ಕಿಂತಲೂ ಹೆಚ್ಚಿನ ಗ್ರಾಹಕ ಸ್ನೇಹಿ ಸೌಕರ್ಯಗಳನ್ನು ಒಳಗೊಂಡಿರಲಿದೆ. ರೈಲಿನಲ್ಲಿ ದಿವ್ಯಾಂಗರಿಗೆ, ರೋಗಿಗಳಿಗೆ ಅನುಕೂಲವಾಗುವಂತೆ ಸ್ಟ್ರೆಚರ್ ಇಡಲು ಸ್ಥಳಾವಕಾಶ, ವೈಫೈ, ಲ್ಯಾಪ್‌ಟಾಪ್ ಚಾರ್ಜಿಂಗ್ ವ್ಯವಸ್ಥೆ, ಅಗಲವಾದ ಆಸನಗಳು, ಕಾಲುಗಳನ್ನು ನೀಡಿಕೊಳ್ಳಲು ವಿಶಾಲ ಸ್ಥಳಾವಕಾಶ, ಲಗೇಜ್ ಕ್ಯಾರಿಯರ್‌ಗಳು ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಭದ್ರತಾ ಸೌಕರ್ಯಗಳನ್ನು ಒಳಗೊಂಡಿರಲಿದೆ. ಅಂದಾಜು 82 ಕಿ.ಮೀ ಉದ್ದದ ಮಾರ್ಗವನ್ನು 2025ರ ಜೂನ್ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತ ಮಾಡುವ ನಿರೀಕ್ಷೆಯಿದೆ.