ಮೆಟ್ರೋದಲ್ಲಿ ಓಡಾಡುವವರ ಅನುಕೂಲಕ್ಕೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬಿಡುಗಡೆ

| Published : Oct 25 2024, 01:03 AM IST / Updated: Oct 25 2024, 05:20 AM IST

ಸಾರಾಂಶ

ಮೆಟ್ರೋ, ಬಸ್, ವಾಟರ್ ಮೆಟ್ರೋ, ಪಾರ್ಕಿಂಗ್ ಮತ್ತು ಟೋಲ್‌ ಮುಂತಾದ ಕಡೆಗಳಲ್ಲಿ ಬಳಸಬಹುದಾದ ಎನ್‌ಸಿಎಂಸಿ ಕಾರ್ಡ್ ಬಿಡುಗಡೆ.

ನವದೆಹಲಿ:  ರಾಷ್ಟ್ರದಲ್ಲಿ ಯಾವ ಮೆಟ್ರೋದಲ್ಲಿ ಬೇಕಾದರೂ ಬಳಸಬಹುದಾದ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಅನ್ನು ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್ ಬಿಡುಗಡೆ ಮಾಡಿದೆ. ಆರ್‌ಬಿಎಲ್‌ ಬ್ಯಾಂಕ್ ಸಹಭಾಗಿತ್ವದಲ್ಲಿ ಕಾರ್ಡ್ ವಿತರಣೆಯನ್ನು ಆರಂಭಿಸಿದೆ ಕೂಡ.

ವಿಶೇಷವೆಂದರೆ ಈ ಕಾರ್ಡ್ ಅನ್ನು ಮೆಟ್ರೋ, ಬಸ್, ವಾಟರ್ ಮೆಟ್ರೋ, ಪಾರ್ಕಿಂಗ್ ಮತ್ತು ಟೋಲ್‌ ಮುಂತಾದ ಕಡೆಗಳಲ್ಲಿ ಬಳಸಬಹುದಾಗಿದೆ. ದೇಶಾದ್ಯಂತ ಒಂದೇ ಕಾರ್ಡ್‌ ಬಳಸುವ ಅವಕಾಶ ಒದಗಿರುವುದು ವಿಶೇಷವಾಗಿದೆ. ಈ ಕಾರ್ಡ್‌ನಲ್ಲಿ ಗರಿಷ್ಠ 2000 ರೂಪಾಯಿ ವರೆಗೆ ಟಾಪ್‌ಅಪ್‌ ಮಾಡಬಹುದು.

ಭಾರತ ಸರ್ಕಾರದ ಒಂದು ಕಾರ್ಡ್ ಒಂದು ದೇಶ ಎಂಬ ಯೋಜನೆಗೆ ಅನುಗುಣವಾಗಿ ಈ ಕಾರ್ಡ್ ಬಿಡುಗಡೆ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಬೆಂಗಳೂರಿನ ಪ್ರಯಾಣಿಕರು ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್‌ಗಳಲ್ಲಿ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಒದಗಿಸುವ ಎನ್‌ಸಿಎಂಸಿಗಳನ್ನು ಖರೀದಿಸಬಹುದು ಮತ್ತು ಅಲ್ಲಿಯೇ ಟಾಪ್ ಅಪ್ ಕೂಡ ಮಾಡಬಹುದು.

ಈ ಕುರಿತು ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್‌ ನ ಅಧ್ಯಕ್ಷ ಮತ್ತು ಎಂಡಿ ಶ್ರೀ ರವಿ ಬಿ ಗೋಯಲ್ ಅವರು, ‘ಬೆಂಗಳೂರಿನಲ್ಲಿ ನಾವು ಈಗಾಗಲೇ ಎನ್‌ಸಿಎಂಸಿ ಅನ್ನು ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಹೇಳಿದ್ದಾರೆ.ಎಜಿಎಸ್ ಟ್ರಾನ್ಸಾಕ್ಟ್ ಸಂಸ್ಥೆಯು ಆರ್‌ಬಿಎಲ್‌ ಬ್ಯಾಂಕ್ ಸಹಭಾಗಿತ್ವದಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್‌ ನಲ್ಲಿ ಎನ್‌ಸಿಎಂಸಿ ಅನ್ನು ನೀಡುತ್ತಿದ್ದು. ಕಂಪನಿಯು ಬಿಎಂಆರ್‌ಸಿಎಲ್‌ಗೆ ಇಲ್ಲಿಯವರೆಗೆ 57,000ಕ್ಕೂ ಹೆಚ್ಚು ಎನ್‌ಸಿಎಂಸಿಗಳನ್ನು ನೀಡಿದೆ.