ಸಾರಾಂಶ
ಬೆಂಗಳೂರು : ನಗರದಲ್ಲಿ ಫೆ.18ರಂದು ಕುಂಬಳಗೋಡು ಮತ್ತು ಫೆ.19ರಂದು ಟೆಲಿಕಾಂ ಲೇಔಟ್ ಮತ್ತು ಎಸ್‌ಆರ್‌ಎಸ್ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಫೆ.18ರಂದು ಕುಂಬಳಗೋಡು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಭೀಮನ ಕುಪ್ಪೆ ವಿಲೇಜ್, ವಿನಾಯಕ ನಗರ, ಫಿಶ್ ಫ್ಯಾಕ್ಟರಿ, ಗೇರುಪಾಳ್ಯ ಒಂದನೇ ಮೈಲಿಕಲ್ಲು, ಡೆಕ್ಕನ್ ಹೆರಾಲ್ಡ್, ಅಂಚೆಪಾಳ್ಯ, ಕಣ್ಮಿಣಿಕೆ, ಕುಂಬಳಗೋಡು ಇಂಡಸ್ಟ್ರೀಯಲ್ ಏರಿಯಾ, ಕಂಬಿಪುರ, ಕಾರುಬೆಲೆ, ತಗಚಗುಪ್ಪೆ, ಪಿಂಟೋ ಬಾರೆ, ಗುಡಿಮಾವು, ದೇವಗೆರೆ, ಗಂಗಸಂದ್ರ, ಆನೆಪಾಳ್ಯ, ದೊಡ್ಡಿಪಾಳ್ಯ, ಗೋಣಿಪುರ, ಗೊಲ್ಲಹಳ್ಳಿ ತಿಪ್ಪೂರು, ಚಿನ್ನಕುರ್ಚಿ, ಬಾಬುಸಾಬ್ ಪಾಳ್ಯ, ದೊಡ್ಡಬೆಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಫೆ.19ರಂದು ಎಸ್‌ಆರ್‌ಎಸ್ ವಿತರಣ ಕೇಂದ್ರ ವ್ಯಾಪ್ತಿಯ ರಾಜಾಜಿನಗರದ 1ರಿಂದ 6ನೇ ಬ್ಲಾಕ್ ವರೆಗಿನ ಸುತ್ತಮುತ್ತ ಪ್ರದೇಶಗಳು. ಗುಬ್ಬಣ್ಣ ಇಂಡಸ್ಟ್ರಿಯಲ್ ಏರಿಯಾ, ಡಾಕ್ಟರ್ ಮೋದಿ ಹಾಸ್ಪಿಟಲ್ ರಸ್ತೆ, ಮಂಜುನಾಧ ನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರಸ್ತೆ 1ರಿಂದ 5ನೇಕ್ರಾಸ್ ವರೆಗೆ, ಮಹಾಗಣಪತಿ ನಗರ, ಕೆ ಎಚ್ ಬಿ ಎರಡನೇ ಹಂತ, ಗಾಯತ್ರಿ ನಗರ ಡಿ ಬ್ಲಾಕ್, ಡಾ.ರಾಜಕುಮಾರ್ ರಸ್ತೆ, ರಾಜಾಜಿನಗರ 6ನೇ ಬ್ಲಾಕ್, ಲಕ್ಷ್ಮಿ ನಾರಾಯಣಪುರ ಬ್ರಿಗೇಡ್ ಗೇಟ್ ವೇ, ಸುಬ್ರಹ್ಮಣ್ಯ ‘ಎ’ ಇಂದ ‘ಡಿ’ ಬ್ಲಾಕ್ ವರೆಗೂ ಸುತ್ತಮುತ್ತಲಿನ ಪ್ರದೇಶಗಳು.
ಟೆಲಿಕಾಂ ಲೇಔಟ್ ವ್ಯಾಪ್ತಿಯಯ ವೆಸ್ಟ್ ಆಫ್ ಕಾರ್ಡ್ ರಸ್ತೆ, ವಿಜಯನಗರ, ಎಂ.ಸಿ ಲೇಔಟ್, ವಿಜಯನಗರ ವಾಟರ್ ಟ್ಯಾಂಕ್, ಹೊಸಳ್ಳಿ ಮೇನ್ ರೋಡ್, ಹಂಪಿ ನಗರ, ಮಾಗಡಿ ಮುಖ್ಯ ರಸ್ತೆ, ಬಿನ್ನಿಪೇಟೆ ಜಗಜೀವನ್ ರಾಮ್ ನಗರ, ಗೋಪಾಲಪುರ, ಹೊಸಹಳ್ಳಿ, ಹಳೆ ಗುಡ್ಡದಹಳ್ಳಿ, ಭುವನೇಶ್ವರಿ ನಗರ, ಗೋರಿಪಾಳ್ಯ, ವಿ.ಎಸ್ ಗಾರ್ಡನ್, ಗೂಡ್‌ಶೆಡ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪಶ್ಚಿಮ ವೃತ್ತದ ಅಧೀಕ್ಷಕ ಎಜಿನಿಯರ್ ಬಿ. ನಾರಾಯಣಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.