ಸಾರಾಂಶ
ವಾಣಿಜ್ಯ ಮಳಿಗೆಗಳು, ಹೋಟೆಲ್, ವ್ಯಾಪಾರಿಗಳಿಂದ ಪಾದಚಾರಿ ಮಾರ್ಗ ಸಂಪೂರ್ಣ ಅಕ್ರಮಣವಾಗಿದ್ದು ,ನಾಗರೀಕರು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸುವಂತೆ ಎಂಇಐ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಲಕ್ಷ್ಮಣ್ ಗೌಡ್ರು ಅಗ್ರಹಿಸಿದರು.
ಪೀಣ್ಯ ದಾಸರಹಳ್ಳಿ: ವಾಣಿಜ್ಯ ಮಳಿಗೆಗಳು, ಹೋಟೆಲ್, ವ್ಯಾಪಾರಿಗಳಿಂದ ಪಾದಚಾರಿ ಮಾರ್ಗ ಸಂಪೂರ್ಣ ಅಕ್ರಮಣವಾಗಿದ್ದು ,ನಾಗರೀಕರು ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸುವಂತೆ ಎಂಇಐ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಲಕ್ಷ್ಮಣ್ ಗೌಡ್ರು ಅಗ್ರಹಿಸಿದರು.
ಹೆಸರಘಟ್ಟ ಮುಖ್ಯ ರಸ್ತೆಯ ಎಂಇಐ ಲೇಔಟ್ ರಸ್ತೆಯಲ್ಲಿ ನೂರಾರು ವಾಣಿಜ್ಯ ಮಳಿಗೆಗಳಿದ್ದು ಭಾಗಶಃ ಪಾದಚಾರಿ ಮಾರ್ಗ ಸಂಪೂರ್ಣ ಅಕ್ರಮಣವಾಗಿದ್ದು ಅದನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವಂತೆ ಮಾಲೀಕರಿಗೆ ಎಂಇಐ ಲೇಔಟ್ ಕ್ಷೇಮಾಭಿವೃದ್ದಿ ಸಂಘದ ಮುಖಂಡರಾದ ಲಕ್ಷ್ಮಣ್ ಗೌಡ್ರು ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳು ಮನವಿ ಸಲ್ಲಿಸಿದರು.ಇತ್ತೀಚಿಗಷ್ಟೆ ಎಂಇಐ ಗ್ರೌಂಡ್‌ನ ಮುಂಭಾಗ ಹೊಸದಾಗಿ ಬಿರಿಯಾನಿ ಸೆಂಟರ್ ಅರಂಭವಾಗಿದ್ದು ರಸ್ತೆಯ ಬದಿಯಲ್ಲಿ ವ್ಯಾಪಾರ ನೆಡೆಸುತ್ತಿದ್ದು ರಸ್ತೆಯಲ್ಲಿ ನಿಂತು ಮೂಳೆ ಬಿಸಾಕುತ್ತಿರುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ, ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಉಂಟಾಗಿತ್ತಿದೆ. ಸಭ್ಯಸ್ಥರು, ಮಹಿಳೆಯರು, ಮಕ್ಕಳು ಓಡಾಡದಂತಹ ಪರಿಸ್ಥಿತಿ ಉಂಟಾಗಿದೆ. ಈ ಸಂಬಂಧ ಮಾಲೀಕರಿಗೆ ತಿಳಿಸಿದರೆ, ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಕೂಡಲೇ ಬಿಬಿಎಂಪಿ ಎಚ್ಚೆತ್ತು ಈ ರಸ್ತೆಯಲ್ಲಿರುವ ಎಲ್ಲಾ ಒತ್ತುವರಿದಾರರನ್ನು ತೆರವುಗೊಳಿಸಿ ಅನುಕೂಲ ಮಾಡಿಕೊಡಬೇಕೆಂದರು.
ಈ ವೇಳೆ ಸಂಘದ ಸದಸ್ಯರು, ನಿವಾಸಿಗಳು, ಬಾಗಲಗುಂಟೆ ಠಾಣೆ ಹಾಗೂ ಚಿಕ್ಕಬಾಣಾವಾರ ಟ್ರಾಫಿಕ್ ಪೋಲೀಸ್ ಸಿಬ್ಬಂದಿ ವರ್ಗದವರಿದ್ದರು.