ಸಾರಾಂಶ
ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯ ಜನಪ್ರಿಯ ವಾಹನ ಇನ್ನೋವಾ ಹೈಕ್ರಾಸ್ ಇದೀಗ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (ಭಾರತ್ ಎನ್ಸಿಎಪಿ) ಅಡಿಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ವಯಸ್ಕ ಮತ್ತು ಪುಟಾಣಿ ಪ್ರಯಾಣಿಕರ ಸುರಕ್ಷತೆ ಎಂಬ ಎರಡೂ ವಿಭಾಗಗಳಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರು ಟಿಕೆಎಂನ ಕಾರ್ಪೊರೇಟ್ ಅಫೇರ್ಸ್ & ಗವರ್ನೆನ್ಸ್ ಇವಿಪಿ ಮತ್ತು ಕಂಟ್ರಿ ಹೆಡ್ ಶ್ರೀ ವಿಕ್ರಮ್ ಗುಲಾಟಿ ಹಾಗೂ ಟಿಕೆಎಂನ ಸಿಸಿಓ, ಎಸ್ ವಿ ಪಿ & ಹೆಡ್ ಸ್ಟೇಟ್ ಅಫೇರ್ಸ್ ಶ್ರೀ ಸುದೀಪ್ ದಳವಿ ಅವರಿಗೆ ಪ್ರಮಾಣಪತ್ರವನ್ನು ವಿತರಿಸಿದರು.
ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (ಟಿಎನ್ಜಿಎ) ವೇದಿಕೆಯಲ್ಲಿ ನಿರ್ಮಿತವಾದ ಇನ್ನೋವಾ ಹೈಕ್ರಾಸ್ ಅನ್ನು ಅತ್ಯುತ್ತಮ ರಕ್ಷಣೆ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಆಕರ್ಷಕ ವಿನ್ಯಾಸದ ಜೊತೆಗೆ, ಹೈಕ್ರಾಸ್ ನಲ್ಲಿ ಹಲವಾರು ಆಕ್ಟಿವ್ ಮತ್ತು ಪ್ಯಾಸಿವ್ ಸುರಕ್ಷತಾ ಫೀಚರ್ ಗಳು ಲಭ್ಯವಿದೆ. ಹೀಗಾಗಿ ಉದ್ಯಮದಲ್ಲಿ ಅತ್ಯಂತ ಸುರಕ್ಷಿತ ವಾಹನಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಗಳಿಸಿದೆ. ಅವುಗಳಲ್ಲಿ ಕೆಲವು ಫೀಚರ್ ಗಳು ಹೀಗಿವೆ:- ಟೊಯೋಟಾ ಸೇಫ್ಟಿ ಸೆನ್ಸ್ – ಇದು ಡ್ರೈವರ್ ಅಸಿಸ್ಟೆನ್ಸ್ ಫೀಚರ್ ಗಳ ಸಮೂಹವಾಗಿದ್ದು, ಇದರಲ್ಲಿ ಪ್ರೀ- ಕೊಲಿಷನ್ ಸಿಸ್ಟಮ್, ಲೇನ್ ಟ್ರೇಸ್ ಅಸಿಸ್ಟ್, ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರ್ ಮತ್ತು ಆಟೋಮ್ಯಾಟಿಕ್ ಹೈ ಬೀಮ್ ಇತ್ಯಾದಿ ಫೀಚರ್ ಗಳಿವೆ.- ಎಲ್ಲಾ ಗ್ರೇಡ್ ಗಳಲ್ಲಿ ಆರು ಏರ್ ಬ್ಯಾಗ್ ಗಳನ್ನು ಒದಗಿಸಲಾಗುತ್ತದೆ.
- ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ವಿ ಎಸ್ ಸಿ) ಮತ್ತು ಟ್ರಾಕ್ಷನ್ ಕಂಟ್ರೋಲ್ (ಟಿ ಆರ್ ಸಿ)
- ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಜೊತೆಗೆ ಎಲೆಕ್ಟ್ರಾನಿಕ್ ಬ್ರೇಕ್ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ)
- ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು, ಮತ್ತು ಆಲ್- ವ್ಹೀಲ್ ಡಿಸ್ಕ್ ಬ್ರೇಕ್ಗಳು
- ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್)
- ಮಕ್ಕಳ ಸುರಕ್ಷತೆಗಾಗಿ ಐಸೋಫಿಕ್ಸ್ ಮಕ್ಕಳ ಸೀಟ್ ಮೌಂಟ್ ಗಳುಈ ಕುರಿತು ಮಾತನಾಡಿರುವ ಟಿಕೆಎಂನ ಸೇಲ್ಸ್-ಸರ್ವಿಸ್- ಯೂಸ್ಡ್ ಕಾರ್ ಬಿಜಿನೆಸ್ ನ ಉಪಾಧ್ಯಕ್ಷರಾದ ವರೀಂದರ್ ವಾಧ್ವಾ ಅವರು , ‘ನಾವು ಮಾಡುವ ಎಲ್ಲಾ ಕೆಲಸಗಳ ಮೂಲಾಧಾರ ಸುರಕ್ಷತೆಯೇ ಆಗಿದೆ. ಇನ್ನೋವಾ ಹೈಕ್ರಾಸ್ ಈ ಬದ್ಧತೆಗೆ ಪೂರಕವಾಗಿ ರೂಪುಗೊಂಡಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಅನುಕೂಲತೆಯ ಜೊತೆಗೆ ಅತ್ಯುತ್ತಮ ಸಾರಿಗೆ ಅನುಭವವನ್ನು ಒದಗಿಸುತ್ತದೆ.
ನಾವು ಅತ್ಯಾಧುನಿಕ ಸುರಕ್ಷತೆಯನ್ನು ಒದಗಿಸುವ ಮೂಲಕ ಬ್ರಾಂಡ್ ಮೇಲಿರುವ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತೇವೆ’ ಎಂದರು. 2022ರ ನವೆಂಬರ್ ನಲ್ಲಿ ಬಿಡುಗಡೆಯಾದ ಇನ್ನೋವಾ ಹೈಕ್ರಾಸ್ ತನ್ನ ವಿಭಾಗದಲ್ಲಿ ಹೊಸ ಮಾನದಂಡ ಸ್ಥಾಪಿಸಿದ್ದು, ದೇಶಾದ್ಯಂತ ಭಾರತೀಯ ಕುಟುಂಬಗಳ ವಿಶ್ವಾಸವನ್ನು ಗಳಿಸಿದೆ. ಇದರ ಜನಪ್ರಿಯತೆಯ ಸಾಕ್ಷಿಯಾಗಿ ಈ ಮಾಡೆಲ್ ಇತ್ತೀಚೆಗೆ ಭಾರತದಲ್ಲಿ 1,35,000 ಯೂನಿಟ್ ಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ.