ವೃಶ್ಚಿಕ ರಾಶಿ ಭರ್ಜರಿ ಗೆಲುವು, ನಿಮ್ಮ ರಾಶಿ ಕತೆ ಏನು ಸ್ವಾಮೀ?

| Published : Jun 09 2024, 01:38 AM IST / Updated: Jun 09 2024, 04:38 AM IST

ವೃಶ್ಚಿಕ ರಾಶಿ ಭರ್ಜರಿ ಗೆಲುವು, ನಿಮ್ಮ ರಾಶಿ ಕತೆ ಏನು ಸ್ವಾಮೀ?
Share this Article
  • FB
  • TW
  • Linkdin
  • Email

ಸಾರಾಂಶ

ಈ ವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ?

(9-06-24 ರಿಂದ 15-06-24)ಮೇಷರಾಶಿ: ಮುಖ ಮತ್ತು ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನೀವು ವ್ಯಾಪಾರದಲ್ಲಿ ತೊಡಗಿದ್ದರೆ ಎಚ್ಚರದಿಂದ ವ್ಯವಹರಿಸಿ. ಹಿಂದೆ ಮೋಸ ಮಾಡಿದ ವ್ಯಕ್ತಿಯಿಂದ ಮತ್ತೆ ಮೋಸ ಹೋಗುವ ಸಾಧ್ಯತೆ ಇದೆ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಉದ್ಭವಿಸಬಹುದು. ವಿವಿಧ ಗ್ರಹಗಳು ನಿಮಗೆ ಶುಭಯೋಗ ತರುತ್ತದೆ.‌ ಧನಲಾಭ ಇದೆ. ಅಧಿಕಾರ ಲಾಭ ಯಶಸ್ಸು ಇದೆ. ಶುಭಫಲಗಳನ್ನು ಪಡೆಯುತ್ತೀರಿ.‌ ಕೌಟುಂಬಿಕ ವಿಚಾರಗಳಲ್ಲಿ ಎಚ್ಚರಿಕೆಯಿಂದ ಮಾತನಾಡಿ.

ವೃಷಭರಾಶಿ:ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವಲ್ಲಿ ನೀವು ಎದುರಿಸುತ್ತಿದ್ದ ತೊಂದರೆಗಳು ನಿವಾರಣೆಯಾಗುತ್ತದೆ. ಹೂಡಿಕೆಗೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಬಹಳ ಸಮಯದಿಂದ ನಿಮ್ಮ ಸ್ವಂತ ಮನೆ ಖರೀದಿಸಲು ಪ್ರಯತ್ನಿಸುತ್ತಿದ್ದರೆ ಈ ವಾರ ಮುಂದಡಿ ಇಡಬಹುದು. ನಿಮ್ಮ ಆಲೋಚನೆಗಳಿಗೆ ಮನೆಯ ಹಿರಿಯ ಬೆಂಬಲ ಸಿಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಈ ವಾರ ಹಣದ ಹರಿವು ಹೆಚ್ಚಾಗುತ್ತದೆ. ಶುಭಕಾರ್ಯಗಳಿಗೆ ಖರ್ಚು ಮಾಡುತ್ತೀರಿ. ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ.ಮಿಥುನ ರಾಶಿ: ಸ್ನೇಹಿತರು ಅಥವಾ ಸಹೋದ್ಯೋಗಿಗಳ ಸ್ವಾರ್ಥಪರ ನಡವಳಿಕೆಯಿಂದ ವಿರಸ ಹೆಚ್ಚಬಹುದು. ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬಹುದು. ವಾಹನ ಚಲಾಯಿಸುವಾಗ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿ. ವಾಹನ ಚಲಾಯಿಸುವಾಗ ಹೆಚ್ಚು ಜಾಗರೂಕರಾಗಿರಿ. ಸಂಬಂಧಿಕರಿಂದ ಸಾಲ ಪಡೆದಿದ್ದರೆ ಈ ವಾರ ತೀರಿಸಬೇಕಾದೀತು. ಖರ್ಚು ವೆಚ್ಚಗಳು ಹೆಚ್ಚಾಗುವ ಸಂಭವ. ಗಂಡ ಹೆಂಡತಿಯರಲ್ಲಿ ಮೂಡುವ ವಿರಸ ವಿಕೋಪಕ್ಕೆ ಹೋಗಬಹುದು.‌ ಜಾಗ್ರತೆಯಿಂದ ಇರಿ. ಜಾಗ ಬದಲಾವಣೆ ಸಂಭವ ಇದೆ.

ಕಟಕರಾಶಿ: ಬಡ್ತಿ, ವಿವಾಹಯೋಗ, ಉನ್ನತ ವ್ಯಾಸಂಗ ಎಲ್ಲಕ್ಕೂ ಅವಕಾಶ ಇದೆ. ಉನ್ನತ ಅಧಿಕಾರ ಪ್ರಾಪ್ತಿ‌ ಇದೆ.

ಅಷ್ಟಮ ಶನಿಯ ಪ್ರಭಾವದಿಂದ ಕಿರಿಕಿರಿ ಅನುಭವಿಸುತ್ತೀರಿ. ಗುರುಬಲ ಇರುವುದರಿಂದ ಸಂಕಟಗಳ ಪರಿಹಾರಕ್ಕೆ ದಾರಿ ಕಾಣುತ್ತದೆ. ಕಾನೂನು ಹೋರಾಟಗಳಲ್ಲಿ ಗೊಂದಲಕ್ಕೆ ಬೀಳುವ ಸಾಧ್ಯತೆ. ಇದರಿಂದ ಉದ್ವೇಗಕ್ಕೆ ಒಳಗಾಗಬಹುದು. ನಿದ್ರೆ ಮಾಡಲು ಸಾಧ್ಯವಾಗದಿರಬಹುದು. ಹೂಡಿಕೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಭವಿಷ್ಯದ ಯೋಜನೆಗಳನ್ನು ರಹಸ್ಯವಾಗಿರಿಸಿ.

ಸಿಂಹರಾಶಿ: ಉತ್ತಮ ಆರೋಗ್ಯ ಪಡೆಯುವಿರಿ. ಮನೆಯ ನವೀಕರಣ ಅಥವಾ ದುರಸ್ತಿಗಾಗಿ ಹಣ ಖರ್ಚು ಮಾಡುತ್ತೀರಿ. ವೆಚ್ಚಗಳು ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಬಹುದು. ಕುಟುಂಬ ಜೀವನದಲ್ಲಿ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಕುಟುಂಬದಲ್ಲಿ ಹೊಸ ಅತಿಥಿ ಬರುವ ಸಾಧ್ಯತೆಯಿದೆ, ಅದು ಕುಟುಂಬದಲ್ಲಿ ಸಮೃದ್ಧಿಯನ್ನು ತರುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿಯಾಗುತ್ತದೆ. ಕೋಪ ಸಿಡುಕು ಮೊದಲಾದ ನೆಗೆಟಿವ್ ಗುಣಗಳನ್ನು ನಿಯಂತ್ರಿಸಿ. ವಿವೇಚನೆಯಿಂದ ಮುಂದುವರೆಯಿರಿ.

ಕನ್ಯಾರಾಶಿ: ಹಣಕಾಸುಗಳಿಗೆ ಸಂಬಂಧಿಸಿದಂತೆ ಕಡಿಮೆ ಪ್ರಯತ್ನ ಮಾಡಿದರೂ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಅನಿರೀಕ್ಷಿತ ವೆಚ್ಚಗಳು ತೀರಾ ಕಡಿಮೆ. ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಉಳಿಸಲು ಸಾಧ್ಯವಾಗುತ್ತದೆ. ನಿಮ್ಮ ಸಲಹೆ ಮತ್ತು ನಿಮ್ಮ ದೃಷ್ಟಿಕೋನವನ್ನು ಸ್ನೇಹಿತರು ಮತ್ತು ಸಂಬಂಧಿಕರ ಮೇಲೆ ಹೇರದಿರಿ. ಇದರಿಂದ ಇತರರ ಕೋಪಕ್ಕೆ ಬಲಿಯಾಗಬಹುದು. ರಾಜಕೀಯದವರಿಗೆ ದೊಡ್ಡ ಅಧಿಕಾರ ಸಿಗಬಹುದು.‌ ಧನಲಾಭ ಇದೆ. ಬಡ್ತಿ ಇದೆ. ವಿದೇಶ ಪ್ರಯಾಣ ಇದೆ.

ತುಲಾರಾಶಿ:

ಈ ವಾರ ಪೂರ್ತಿ ನಿಮ್ಮ ಆರ್ಥಿಕ ಜೀವನ ಉತ್ತಮವಾಗಲಿದೆ. ಗ್ರಹಗಳ ಪ್ರಭಾವದಿಂದಾಗಿ ಹಣ ಸಂಪಾದಿಸಲು ಅವಕಾಶಗಳನ್ನು ಪಡೆಯುತ್ತೀರಿ. ನಿಮ್ಮ ಪ್ರತಿಷ್ಠೆಯ ಹೆಚ್ಚಳವೂ ಕಂಡುಬರುತ್ತಿದೆ. ಮನೆಯ ಸದಸ್ಯರೊಬ್ಬರು ನಿಮ್ಮಿಂದ ಕೆಲವು ವಸ್ತು ಅಥವಾ ಹಣ ಕೇಳುವ ಸಾಧ್ಯತೆಯಿದೆ. ಅದನ್ನು ಪೂರೈಸುವಲ್ಲಿ ನೀವು ವಿಫಲರಾಗುತ್ತೀರಿ. ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡುತ್ತಾರೆ. ರಾಹು ಪರಾಕ್ರಮದಿಂದ ಯಶಸ್ಸು ಕೊಡುತ್ತಾನೆ. ‌ಧನಲಾಭ ಅಧಿಕಾರ ಲಾಭ ಇದೆ.‌ ರಾಜಕೀಯ ನಾಯಕರಿಗೆ ಪರ್ವಕಾಲ.

ವೃಶ್ಚಿಕ ರಾಶಿ: ಎಲ್ಲಿ ನೋಡಿದರೂ ವಿಜಯವೇ ನಿಮಗೆ. ಗೆಲುವೇ ಗೆಲುವು. ರಾಜಕೀಯದವರಿಗೆ ಈಗ ಅತ್ಯುತ್ತಮ ಸಮಯ.

ಹಣಕಾಸಿನ ತೊಂದರೆಗಳು ಈ ಬಾರಿ ಸಂಪೂರ್ಣ ನಿವಾರಣೆಯಾಗುವ ಸಾಧ್ಯತೆ. ಹೂಡಿಕೆಗೆ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳುವಿರಿ. ಇದರಿಂದ ಹಣವನ್ನು ಸಹ ಪಡೆಯುವ ಸಾಧ್ಯತೆಯಿದೆ. ಜನ ನಿಮ್ಮ ಬಳಿ ಆಕರ್ಷಿತರಾಗುತ್ತಾರೆ. ಆಸ್ತಿ ಪಾಸ್ತಿ ಕೊಳ್ಳುವ ಮಾರುವ ಯೋಗ ಇದೆ. ಈ ವ್ಯವಹಾರದಲ್ಲಿ ಲಾಭವೂ‌ ಇದೆ. ಕೋರ್ಟ್ ಕೇಸುಗಳಿದ್ದರೆ ನಿಮಗೆ ಜಯ ಸಿಗುತ್ತದೆ.‌

ಧನಸ್ಸುರಾಶಿ: ಇತರರ ಯಶಸ್ಸಿನ ಬಗ್ಗೆ ಅಸೂಯೆ ಪಟ್ಟುಕೊಳ್ಳುವ ಬದಲು, ಅವರ ಯಶಸ್ಸನ್ನು ಮೆಚ್ಚುವ ಮೂಲಕ ಬೆಂಬಲಿಸಬೇಕು. ಇದು ಸಕಾರಾತ್ಮಕ ಶಕ್ತಿ ನೀಡುತ್ತದೆ. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಹಣ ಗಳಿಸುವಂತ ಅನೇಕ ಅವಕಾಶ ಪಡೆಯುವಿರಿ. ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಿ. ಈ ವಾರ ನಿಮ್ಮನ್ನು ಪ್ರತಿಯೊಬ್ಬರೂ ಮೆಚ್ಚುತ್ತಾರೆ. ಆದರೆ ಅಹಂಕಾರ ನಿಮ್ಮ ಇಮೇಜ್ ಅನ್ನು ಹಾಳು ಮಾಡುತ್ತದೆ. ಕೆಲಸಗಳು ಕೊಂಚ ನಿಧಾನವಾಗಿ ಸಾಗುತ್ತದೆ.

ಮಕರ ರಾಶಿ:ರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಉತ್ತಮ ಲಾಭ ಗಳಿಸುವ ಸಾಧ್ಯತೆಯಿದೆ. ಹಿರಿಯ ಸಹೋದರರ ಬೆಂಬಲವನ್ನು ಪಡೆಯುತ್ತೀರಿ. ಇದರಿಂದಾಗಿ ದೊಡ್ಡ ತೊಂದರೆಗಳಿಂದ ಹೊರಬರುತ್ತೀರಿ. ರಾಹು ಮೂರರಲ್ಲಿ ಗುರು ಐದನೇ ಮನೆಯಲ್ಲಿ ಬಹಳ ಶುಭಫಲಗಳನ್ನು ಕೊಡುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು, ಹೊಸ ನೌಕರಿ, ನೌಕರಿಯಲ್ಲಿ ಬಡ್ತಿ, ಮೇಲಧಿಕಾರಿಗಳ ಪ್ರಶಂಸೆ. ಕೆಲಸಗಳು ಸರಾಗವಾಗಿ ಆಗುತ್ತದೆ. ಅರ್ಹರಿಗೆ ವಿವಾಹಯೋಗ ಇದೆ.

ಕುಂಭರಾಶಿ:ಪ್ರಯಾಣ ಮಾಡಬೇಕಾಗುವ ಸಾಧ್ಯತೆ ಇದೆ. ಇದರಿಂದಾಗಿ ಆಯಾಸ ಮತ್ತು ಒತ್ತಡ ಅನುಭವಿಸುವಿರಿ. ಹಣಕಾಸು ಉಳಿತಾಯದ ಬಗ್ಗೆ ಮನೆಯ ಸದಸ್ಯರು ಮತ್ತು ತಮ್ಮ ಆಪ್ತರೊಂದಿಗೆ ಚರ್ಚಿಸಬೇಕು. ಇಲ್ಲದಿದ್ದರೆ ಆಪತ್ತು. ಹಿಂದಿನ ಹೂಡಿಕೆಗಳು ಈ ವಾರ ಹೆಚ್ಚು ಪ್ರಯೋಜನ ನೀಡುತ್ತವೆ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿದ್ದರೆ, ನಿಮ್ಮ ಪಾಲುದಾರರ ವಿರೋಧವನ್ನು ಎದುರಿಸಬೇಕಾಗಬಹುದು. ಪ್ರೀತಿಯ ಜೀವನ ಮನಸ್ಸು ವಿಚಲಿತಗೊಳಿಸಬಹುದು.

ಮೀನರಾಶಿ: ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಈ ಹಿಂದೆ ನೀವು ಉಳಿತಾಯ ಮಾಡಿದ ಹಣದಿಂದ ಸಹಾಯವಾಗುತ್ತದೆ. ನಿಮ್ಮ ಆಪ್ತರು ಅಥವಾ ಕುಟುಂಬದ ಸದಸ್ಯರಿಗೆ ನೋವಾಗದಿರುವಂತೆ ಕಾಳಜಿ ವಹಿಸಬೇಕು. ನಿಮ್ಮ ಕೆಲಸ ಮತ್ತು ಪ್ರಗತಿಯನ್ನು ನೋಡಿ ನಿಮ್ಮ ಸಹೋದ್ಯೋಗಿಗಳು ಅಸೂಯೆಪಡುತ್ತಾರೆ. ಅವರ ಬೆಂಬಲ ಸಿಗದಿರಬಹುದು. ಉನ್ನತ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಒಳ್ಳೆಯದು. ಭವಿಷ್ಯಕ್ಕಾಗಿ ನೀವು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಿರಿ.