ವಾರಫಲ

| Published : Mar 31 2024, 02:06 AM IST

ಸಾರಾಂಶ

ಈ ವಾರ ಕಟಕ ರಾಶಿಗೆ ರಾಜಯೋಗ ನಿಮ್ಮ ರಾಶಿ ಫಲ ಹೇಗಿದೆ?

ಮಾರ್ಚ್ 31 ರಿಂದ ಏಪ್ರಿಲ್ 6ರವರೆಗಿನ ವಾರಫಲಮೇಷರಾಶಿ: ಪ್ರೀತಿ ಪ್ರೇಮದ ವಿಚಾರದಲ್ಲಿ ಮನಸ್ಸು ಚಂಚಲಗೊಳ್ಳುತ್ತದೆ. ನಿಮ್ಮ ವರ್ಚಸ್ಸು ಉತ್ತುಂಗದಲ್ಲಿರುತ್ತದೆ. ಸಂಗಾತಿಯೊಂದಿಗೆ ಮುಕ್ತವಾಗಿ ಬೆರೆಯುತ್ತೀರಿ. ಸಂತೋಷ ನೀಡುವ ಚಟುವಟಿಕೆಗಳಿಗೆ ಆದ್ಯತೆ ನೀಡುವಿರಿ. ವಾಹನದಿಂದ ನಷ್ಟ. ವಾಹನ ವ್ಯಾಪಾರಿಗಳಿಗೂ ಲಾಭ ಕಡಿಮೆ. ಎಲೆಕ್ಟ್ರಾನಿಕ್ ವಸ್ತುಗಳ ವ್ಯವಹಾರ ಮಾಡುವವರಿಗೂ ಲಾಭ ಕಡಿಮೆ. ಬ್ಯೂಟಿ ಪಾರ್ಲರ್ ನಡೆಸುತ್ತಿರುವವರಿಗೆ ನಷ್ಟ ತಲೆದೋರಬಹುದು. ಕೊಳ್ಳಬೇಕು ಅಂದುಕೊಂಡದ್ದನ್ನು ಕೊಳ್ಳಲಾಗುವುದಿಲ್ಲ. ಆದರೂ ಕೆಲವು ಗ್ರಹಗಳ ಕೃಪೆಯಿಂದ ಉತ್ತಮ ಹಣದ ಹರಿವು ಇದೆ. ವೃಷಭ ರಾಶಿ

ಸಂಬಂಧಗಳಲ್ಲಿ ಸಂವಹನಕ್ಕೆ ಆದ್ಯತೆ ನೀಡಿ. ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ಉತ್ತಮ. ಇದು ಬಂಧಗಳನ್ನು ಗಾಢವಾಗಿಸಬಹುದು. ನಿಮ್ಮ ಸಂಗಾತಿಯ ಅಗತ್ಯತೆಗಳು ಮತ್ತು ಆಸೆಗಳನ್ನು ತಿಳಿದುಕೊಳ್ಳಿ. ವ್ಯಾಪಾರದಲ್ಲಿ ಸ್ಥಿರತೆ ಬರಬಹುದು. ನಿಮಗೆ ಭಾಗ್ಯದ ಬಾಗಿಲು ತೆರೆದಂತೆ ಅನಿಸುತ್ತದೆ. ಹಣದ ಹರಿವು ಉತ್ತಮವಾಗಿದೆ. ಕೊಂಚ ಮಾನಸಿಕ ವ್ಯಥೆ ಇದ್ದರೂ ರಾಹು ಲಾಭಸ್ಥಾನದಲ್ಲಿ ನಿಮಗೆ ಎದುರಿಸಿ ನಿಲ್ಲುವ ಶಕ್ತಿ ಕೊಡುತ್ತಾನೆ. ಶತ್ರುಗಳು ದೂರವಾಗುತ್ತಾರೆ.

ಮಿಥುನರಾಶಿ:

ತೆರೆದ ತೋಳುಗಳಿಂದ ಬದಲಾವಣೆಯನ್ನು ಸ್ವೀಕರಿಸಿ. ಈ ವಾರ ಬೆಳವಣಿಗೆ ಮತ್ತು ರೂಪಾಂತರ ಸಂಭವಿಸಬಹುದು. ಅಪರಿಚಿತರ ಜೊತೆ ಒಡನಾಡಲೇ ಬೇಕಾಗುತ್ತದೆ. ನಿಮ್ಮ ಕಂಫರ್ಟ್ ಝೋನ್‌ನಿಂದ ಹೊರಬರುವಿರಿ. ಇದು ನಿಮ್ಮ ಶಕ್ತಿಯನ್ನು ಬಲಪಡಿಸುವುದು. ವೃತ್ತಿಯಲ್ಲಿ ಅಭಿವೃದ್ಧಿ ಇದೆ. ಹನ್ನೊಂದರಲ್ಲಿ ಗುರು- ಬುಧನಿಂದ ಧನಲಾಭ, ಶುಭಕಾರ್ಯಗಳು ನಡೆಯುವುದು, ಉನ್ನತಿ ಮೊದಲಾದ ಯೋಗಗಳಿವೆ. ಒಂಬತ್ತನೇ ಮನೆಯಲ್ಲಿ ಶನಿ ಕುಜ ನಿಂದ ಉಪಕಾರ ಇಲ್ಲದಿದ್ದರೂ ತೊಂದರೆ ಇಲ್ಲ. ತಾಯಿಯ ಆರೋಗ್ಯ ಗಮನಿಸುತ್ತಿರಿ.

ಕಟಕರಾಶಿ:

ಎಷ್ಟೋ ಸಮಯದ ಸಂಕಷ್ಟ ಕೊನೆಯಾಗುವ ಸಮಯ ಬಂದಿದೆ. ಒಂಬತ್ತರಲ್ಲಿ ಸೂರ್ಯ ಶುಕ್ರ ರಾಹು ಸೇರಿ ಒಂದು ರಾಜಯೋಗ ಆಗಿದೆ. ಇದು ನಿಮಗೆ ಅಪಾರ ಧನಲಾಭ, ರಾಜಯೋಗವನ್ನು ಕೊಡುತ್ತದೆ. ಧಾರ್ಮಿಕ ಕಾರ್ಯಗಳನ್ನು ಮಾಡುತ್ತೀರಿ.‌ ಕೊಂಚ ಒತ್ತಡಗಳಿವೆ. ಆರೋಗ್ಯದಲ್ಲಿ ಕಾಳಜಿ ವಹಿಸಬೇಕು. ಅಪಘಾತಗಳಾಗಬಹುದು. ಗಾಡಿ ಚಲಾಯಿಸುವಾಗ ಎಚ್ಚರಿಕೆ ಇರಲಿ. ಸಂಬಂಧದಲ್ಲಿ ಸ್ಥಿರತೆ ಇರುತ್ತದೆ. ಒಂಟಿಯಾಗಿರುವವರಿಗೆ ಜಂಟಿಯಾಗುವ ಯೋಗ. ವೃತ್ತಿ ಬದುಕಿನಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಸಿಂಹರಾಶಿ:

ನಿಮಗೆ ಸರ್ಕಾರಿ ಕೆಲಸಗಳು ನಿಧಾನ ಮತ್ತು ಒತ್ತಡಗಳನ್ನು ಕೊಡುತ್ತದೆ. ನಿಮ್ಮ ವೃತ್ತಿಯಲ್ಲೂ ಅಡತಡೆಗಳು ಎದುರಾಗುತ್ತದೆ. ಮೇಲಿನವರ ಕೋಪಕ್ಕೆ ಕಾರಣರಾಗುತ್ತೀರಿ.‌ ಭಾಗ್ಯಸ್ಥಾನದಲ್ಲಿ ಗುರು ಇರುವುದರಿಂದ ಗುರು ನಿಮ್ಮ ರಾಶಿಯನ್ನು ವೀಕ್ಷಿಸುವುದರಿಂದ ಅಪಾಯಗಳಿಂದ ಪಾರಾಗುತ್ತೀರಿ. ಮನೆಯಲ್ಲಿ ಅಶಾಂತಿ ನಿಮ್ಮ ಮನಃಶಾಂತಿಯನ್ನು ಕೆಡಿಸುತ್ತದೆ.‌ ಪ್ರಣಯ ಬದುಕು ಉತ್ತಮವಾಗಿರುತ್ತದೆ. ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ಸಿಗುತ್ತದೆ.

ಕನ್ಯಾರಾಶಿ:

ಹಣಕಾಸಿನ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಗಮನಹರಿಸಬೇಕು. ಅಗತ್ಯ ಹೊಂದಾಣಿಕೆಗಳನ್ನು ಮಾಡಿ. ಹಠಾತ್ ವೆಚ್ಚವನ್ನು ತಪ್ಪಿಸಿ. ಹೂಡಿಕೆಗಳು ಮತ್ತು ಉಳಿತಾಯದ ಬಗ್ಗೆ ಯೋಚಿಸಿ ನಿರ್ಧಾರಕ್ಕೆ ಬನ್ನಿ. ನಿಮ್ಮ ಸ್ವಭಾವದಲ್ಲಿ ಏರುಪೇರು ಉಂಟಾಗುತ್ತದೆ. ಒಂದು ಕ್ಷಣದಲ್ಲಿ ಇರುವ ಮನಸ್ಸು ಮತ್ತೊಂದು ಕ್ಷಣದಲ್ಲಿ ಇರುವುದಿಲ್ಲ. ಹಣಕಾಸಿನ ಹರಿವು ಉತ್ತಮವಾಗಿ ಇದ್ದರೂ ಮಾನಸಿಕವಾಗಿ ಭಾರಿ ಕಿರಿಕಿರಿ ಅನುಭವಿಸುತ್ತೀರಿ. ಯೋಗ, ಧ್ಯಾನ ಮಾನಸಿಕ ಸ್ಥಿರತೆಗೆ ಸಹಕಾರಿ. ಕೃತಜ್ಞತೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ.

ತುಲಾರಾಶಿ:

ನಿಮ್ಮ ಭಾವನೆಗಳನ್ನು ಬಹಿರಂಗವಾಗಿ ಮತ್ತು ಪ್ರಾಮಾಣಿಕವಾಗಿ ವ್ಯಕ್ತಪಡಿಸುವುದು ನಿಮ್ಮ ಪ್ರೇಮ ಬಾಂಧವ್ಯವನ್ನು ಗಾಢವಾಗಿಸುತ್ತದೆ. ನಿಮ್ಮ ಸಂಗಾತಿಯ ಅಗತ್ಯತೆಗಳು ಮತ್ತು ಆಸೆಗಳನ್ನು ಆಲಿಸಲು ಸಮಯ ತೆಗೆದುಕೊಳ್ಳಿ. ನಿಮ್ಮ ನಡುವೆ ಪರಸ್ಪರ ತಿಳಿವಳಿಕೆ ಮತ್ತು ಸಾಮರಸ್ಯದ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ಪರಸ್ಪರ ಗೌರವ ಮತ್ತು ಪಾರದರ್ಶಕತೆಯೊಂದಿಗೆ ವರ್ತಿಸಿದಾಗ ಪ್ರೀತಿ ಬೆಳೆಯುತ್ತದೆ. ಹಣದ ಹರಿವು ಉತ್ತಮವಾಗಿದೆ. ಹಣ ಬರುವ ದಾರಿಗಳು ಸುಗಮವಾಗುತ್ತದೆ. ವಿದೇಶ ಪ್ರಯಾಣ ಯೋಗ ಇದೆ.

ವೃಶ್ಚಿಕ ರಾಶಿ:

ತಾಯಿಯ ಆರೋಗ್ಯಕ್ಕೆ ತೊಂದರೆ ಇದೆ. ವಾಹನದಿಂದ ನಷ್ಟ ಇದೆ. ಮಾನಸಿಕ ಕಿರಿಕಿರಿ, ಕಿರುಕುಳ ಇರುತ್ತದೆ. ಈಗ ಹಣಕಾಸಿನ ಬಿಕ್ಕಟ್ಟು ಅನುಭವಿಸುತ್ತಿದ್ದರೂ ಮುಂದೆ ಕೆಲವೇ ದಿನಗಳಲ್ಲಿ ಹಣಕಾಸಿನ ಪರಿಸ್ಥಿತಿ ಅನುಕೂಲಕರವಾಗಿ ಬದಲಾಗುತ್ತದೆ. ಕೆಲವೇ ದಿನಗಳಲ್ಲಿ ಗುರುಬಲ ಬರುವುದರಿಂದ ನೀವು ಯಾವುದಕ್ಕೂ ಹೆದರಬೇಕಾಗಿಲ್ಲ. ನಿಮ್ಮ ದೈಹಿಕ ಅಥವಾ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸದಿರಿ. ವೃತ್ತಿಯಲ್ಲಿ ಪ್ರಗತಿ ಇದೆ. ಯಶಸ್ಸಿಗೆ ಉತ್ತಮ ಅವಕಾಶಗಳು ಇವೆ. ಮಾತಿಗಿಂತ ಕೃತಿಗೆ ಮಹತ್ವ ಕೊಡಿ. ಧನಸ್ಸು ರಾಶಿ:

ತೆರೆದ ಹೃದಯ ಮತ್ತು ಮನಸ್ಸು ಈ ವಾರ ನಿಮ್ಮನ್ನು ಪ್ರೀತಿಯಲ್ಲಿ ಬೀಳಿಸಬಹುದು. ಈಗ ನಿಮಗೆ ರಾಜವೈಭವದ ಯೋಗವಿದೆ. ಆದರೆ ಹೆಚ್ಚಿನ ಸಂತೋಷ ಇಲ್ಲದೇ ಹೋಗಬಹುದು. ವೃಥಾ ಅಲೆದಾಟ, ವಿಶ್ರಾಂತಿ ಇಲ್ಲದ ಜೀವನ ಇರುತ್ತದೆ. ಆದರೆ ಹಣಕಾಸು ವೈಭವ, ಅನುಕೂಲಗಳು, ಎಲ್ಲವೂ ಉಚ್ಛ ಮಟ್ಟದಲ್ಲಿ ಇರುತ್ತದೆ. ಮಗನಿಂದ ಲಾಭ, ಮಗನ ವಿಷಯದಲ್ಲಿ ಒಳ್ಳೆಯ ಸುದ್ದಿ ಕೇಳುವಿರಿ.‌ ವೃತ್ತಿ ಜೀವನದಲ್ಲಿ, ನಿಮ್ಮ ವರ್ಚಸ್ಸು ಮತ್ತು ಉತ್ಸಾಹ ಹೆಚ್ಚಾಗುತ್ತದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಅಂತಃಪ್ರಜ್ಞೆಯನ್ನು ನಂಬಿ. ಮಕರ ರಾಶಿ:

ಈ ಕಷ್ಟ ಮುಗಿಯುವುದೇ ಇಲ್ಲವೇ ಎಂದು ಇಷ್ಟು ಕಾಲ ಒದ್ದಾಡುತ್ತಿದ್ದಿರಿ. ಆದರೆ ಈಗ ಆ ಕಷ್ಟಗಳೆಲ್ಲ ಕಳೆದು ಹೋಗಲಿವೆ. ಕೊಂಚ ಕಾಲ ನಿಮಗೆ ಈ ಬದಲಾವಣೆಯನ್ನು ಒಪ್ಪಿಕೊಳ್ಳುವುದು ಕಷ್ಟವಾಗಲಿದೆ. ಇನ್ನು ಮುಂದೆ ರಾಜವೈಭವದ ದಿನಗಳನ್ನು ಅನುಭವಿಸಲಿದ್ದೀರಿ.‌ ಅವಕಾಶಗಳು ನಿಮ್ಮ ಕಾಲಿಗೆ ಸುತ್ತಿಕೊಳ್ಳುತ್ತದೆ. ಮೂರನೇ ಮನೆಯಲ್ಲಿ ಶನಿ ಸೂರ್ಯ ಶುಕ್ರ ಮೂವರೂ ನಿಮಗೆ ಶುಭಫಲಗಳನ್ನು ನೀಡುತ್ತಿದ್ದಾರೆ. ಮುಂದೆ ನಿಮ್ಮ ಶಕ್ತಿ ಸಾಮರ್ಥ್ಯ ಗಳು ಮತ್ತಷ್ಟು ಹೆಚ್ಚುತ್ತವೆ. ಕೆಲವೇ ದಿನಗಳಲ್ಲಿ ಗುರುಬಲವೂ ಒದಗಿ ಬರಲಿದೆ.

ಕುಂಭರಾಶಿ:

ಹೊಸ ಯೋಚನೆಗಳು, ಹೊಸ ಅವಕಾಶಗಳು ನಿಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲಿವೆ. ಆದರೆ ಇದಕ್ಕೆ ಕೊಂಚ ಸಮಯವಿದೆ. ಸದ್ಯ ಹಲ್ಲುಕಚ್ಚಿ ಇನ್ನೂ ಕಠಿಣ ಪರೀಕ್ಷೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ರಾಶಿಯಲ್ಲೇ ಇರುವ ಶನಿ ಹಾಗೂ ಕುಜ ನಿಮಗೆ ಕೊಂಚ ಕಿರುಕುಳಗಳನ್ನು ಕೊಡುತ್ತಾರೆ. ಆರೋಗ್ಯ ಏರುಪೇರು ಆಗಬಹುದು. ಹಣಕಾಸಿನ ಬಿಕ್ಕಟ್ಟು‌ ಇದ್ದೇ ಇದೆ. ನೀವು ಅಂದುಕೊಂಡ ಕೆಲಸಗಳು ನಿಧಾನವಾಗಿ ಸಾಗುತ್ತದೆ. ವೃತ್ತಿಯಲ್ಲಿ ಮತ್ತು ಕೌಟುಂಬಿಕವಾಗಿ ಒತ್ತಡಗಳು ಇರುತ್ತದೆ. ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ.

ಮೀನರಾಶಿ:

ನಿಮ್ಮ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸಿ. ಅನಂತ ಸಾಧ್ಯತೆಗಳು ಕಣ್ಣೆದುರಿಗಿವೆ. ಆ ಬಗ್ಗೆ ಚಿಂತಿಸಿ. ಶನಿ ಕುಜ ಗ್ರಹಗಳು ವಿಪರೀತ ಖರ್ಚುಗಳನ್ನು ಕೊಡುತ್ತಾರೆ. ಗುರುಬಲ ಇರುವುದರಿಂದ ಈಗ ಪರವಾಗಿಲ್ಲ. ಮುಂದಿನ ದಿನಗಳಲ್ಲಿ ಗುರುಬಲವೂ ಇಲ್ಲವಾಗುವುದರಿಂದ ನಾನಾ ರೀತಿಯ ಒತ್ತಡಗಳು ಕಿರುಕುಳಗಳನ್ನು ಎದುರಿಸಬೇಕಾಗುತ್ತದೆ. ಮೇಲಧಿಕಾರಿಗಳೊಡನೆ ಜಗಳ, ಮನೆಯಲ್ಲಿ ಸದಸ್ಯರೊಡನೆ ಮನಸ್ತಾಪ, ಸಂಗಾತಿಯೊಡನೆ ಕಿರಿಕಿರಿ ಇರುತ್ತದೆ. ಒತ್ತಡಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ.